Sandalwood Leading OnlineMedia

ರಶ್ಮಿಕಾಗೆ ಒಲಿದು ಬರಲಿದೆಯಾ ಆ ಒಂದು ಅದ್ಭುತ ಅವಕಾಶ?!

‘ಕನ್ನಡದ ಕುವರಿ’ ರಶ್ಮಿಕಾ ಮಂದಣ್ಣ ಬಾಲಿವುಡ್ನಲ್ಲಿ ಒಂದರ ಹಿಂದೆ ಒಂದು ಆಫರ್ ಪಡೆಯುತ್ತಿದ್ದಾರೆ. ಸದ್ಯಕ್ಕೆ ಹೊಸದೊಂದು ಸುದ್ದಿ ಅವರ ಅಡ್ಡದಿಂದ ಕೇಳಿ ಬರುತ್ತಿದೆ. ಬಾಲಿವುಡ್ ನಟ ವಿಕ್ಕಿ ಕೌಶಲ್ ಜೊತೆ ರಶ್ಮಿಕಾ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ಅವರು ೩ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾತು ಕೂಡ ಕೇಳಿ ಬಂದಿದೆ. ಅಷ್ಟೇ ಅಲ್ಲದೆ ರಶ್ಮಿಕಾಗೆ ಕನ್ನಡದಲ್ಲಿ ನಿರ್ಮಾಣ ಸಂಸ್ಥೆ ಮಾಡುವ ಆಶಯ ಕೂಡ ಇದೆಯಂತೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆಯಲ್ಲಿ ದಕ್ಷಿಣ ಭಾರತದಲ್ಲಿಯೇ ನಂ. ೧ ನಟಿ ಎಂದು ಖ್ಯಾತಿ ಪಡೆದ ನಟಿ ರಶ್ಮಿಕಾ ಮಂದಣ್ಣ, ಸದ್ಯ ರಣ್ಬೀರ್ ಕಪೂರ್ ಅವರ ‘ಅನಿಮಲ್’ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಈಗ ಅವರಿಗೆ ವಿಕ್ಕಿ ಕೌಶಲ್ ಜತೆ ಮತ್ತೊಂದು ಸಿನಿಮಾದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿದೆ ಎಂಬ ಸುದ್ದಿ ಬಾಲಿವುಡ್ನಿಂದ ಬಂದಿದೆ.

ಶ್ರೀ ಮುತ್ತು ಸಿನಿ ಸರ್ವಿಸ್ ಪ್ರೊಡಕ್ಷನ್ ನಡಿ  ಹೊಸ ಹೆಜ್ಜೆ  ಶಿವಣ್ಣನ ಪುತ್ರಿ

ತೆಲುಗಿನಲ್ಲಿ ನಿತಿನ್ ಜತೆ ಒಂದು ಸಿನಿಮಾ, ‘ರೈನ್ ಬೋ’ ಎಂಬ ಮಹಿಳಾ ಪ್ರಧಾನ ಸಿನಿಮಾ, ಅಲ್ಲು ಅರ್ಜುನ್ ಜೊತೆ ‘ಪುಷ್ಪ-2’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾಗೆ ವಿಕ್ಕಿ ಕೌಶಲ್ ಜತೆ ನಟಿಸಲು ಬಿಗ್ ಆಫರ್ ಸಿಕ್ಕಿದೆಯಂತೆ. ವಿಕ್ಕಿ ಸದ್ಯ ಛತ್ರಪತಿ ಶಿವಾಜಿಯವರ ಪುತ್ರ ಛತ್ರಪತಿ ಶಂಭಾಜಿ ಮಹಾರಾಜರ ಕಥೆ ಇರುವ ಸಿನಿಮಾವನ್ನು ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಶಂಭಾಜಿಯವರ ಪತ್ನಿ ಯೇಸುಭಾಯಿ ಭೋಸಲೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಹೊಸಬರ ’ಧೀರಸಾಮ್ರಾಟ್’ಚಿತ್ರಕ್ಕೆ ಧ್ರುವಸರ್ಜಾ ಸಾಥ್

ಲಕ್ಷ್ಮಣ ಉಟೇಕರ್ ನಿರ್ದೇಶನ ಮಾಡಲಿರುವ ಈ ಸಿನಿಮಾ ಸದ್ಯ ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ. ಸೆಪ್ಟೆಂಬರ್ನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಅಷ್ಟರೊಳಗೆ ಕಲಾವಿದರ ಆಯ್ಕೆ, ಸೆಟ್ ಮತ್ತಿತರ ಕೆಲಸಗಳನ್ನು ನಿರ್ದೇಶಕರು ಮುಗಿಸಿಕೊಳ್ಳಲಿದ್ದಾರೆ. ವಿಶೇಷ ಎಂದರೆ ಈ ಸಿನಿಮಾಗಾಗಿ ರಶ್ಮಿಕಾ ಮಂದಣ್ಣ ೩ ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಹಾರಾಣಿ ಆಗುವುದರಿಂದ ಹಲವು ತಯಾರಿಗಳ ಅಗತ್ಯವೂ ಇದೆ. ರಶ್ಮಿಕಾ ಮಂದಣ್ಣ ಅವರೇ ವಿಕ್ಕಿಗೆ ನಾಯಕಿ ಎಂಬ ಸುದ್ದಿ ಕೇಳಿಬಂದಿದ್ದು, ಇದನ್ನು ರಶ್ಮಿಕಾ ಆಗಲಿ ಚಿತ್ರತಂಡವಾಗಲಿ ಖಚಿತಪಡಿಸಿಲ್ಲ.

 

 ‘ಹುಲಿಯಾ’ : ತೂತುಮಡಿಕೆ ಡೈರೆಕ್ಟರ್ ಹೊಸ ಪ್ರಯತ್ನ  

ವಿಕ್ಕಿ ಕೌಶಲ್ ಮಾತ್ರ ಈ ಸಿನಿಮಾಗಾಗಿ ಕತ್ತಿವರಸೆ, ಕುದುರೆ ಸವಾರಿ ಸೇರಿದಂತೆ ಹಲವು ತಂತ್ರಗಳನ್ನು ಕಲಿಯುತ್ತಿದ್ದಾರೆ. ಚಿತ್ರತಂಡದಿ0ದ ಸದ್ಯದಲ್ಲೇ ಫೋಟೊಶೂಟ್ ನಡೆಯಲಿದ್ದು, ಆಗ ಎಲ್ಲವೂ ಅಧಿಕೃತವಾಗಿ ಬಹಿರಂಗಗೊಳ್ಳಲಿದೆ. ರಶ್ಮಿಕಾ ಮಂದಣ್ಣ ಕಳೆದ ವರ್ಷ ‘ನಾನು ಒಂದಷ್ಟು ಕಥೆಗಳನ್ನು ಕೇಳುತ್ತಿದ್ದೇನೆ’ ಎಂದು ಇನ್ಸ್ಟಾಗ್ರಾಮ್ನಲ್ಲಿ ಹಾಕಿದ್ದರು. ಅದರಂತೆ ಸದ್ಯದಲ್ಲೆ ಅವರು ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಆರಂಭಿಸಲಿದ್ದು, ಅದರ ಮೂಲಕ ಹೊಸ ಕಥೆಗಳಿಗೆ ಅವಕಾಶ ನೀಡಲಿದ್ದಾರಂತೆ. ಅವರಿಗೆ ತಮ್ಮ ಬಿಝಿ ಶೆಡ್ಯೂಲ್ ನಡುವೆ ಮಾಧ್ಯಮದವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಒಳ್ಳೆ ಸಂದರ್ಭ ನೋಡಿ ಮಾಧ್ಯಮದವರ ಮುಂದೆ ಬಂದು ಎಲ್ಲವನ್ನು ಹೇಳಲಿದ್ದಾರೆ ಎನ್ನಲಾಗಿದೆ. ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ನಲ್ಲಿ ಸಕ್ರಿಯವಾಗಿದ್ದಾರೆ. ಮುಂಬೈನಲ್ಲಿ ನಡೆಯುವ ಪ್ರತಿಷ್ಠಿತ ಪಾರ್ಟಿಗಳು, ಫ್ಯಾಷನ್ ಶೋಗಳಲ್ಲಿ ಕಿರಿಕ್ ಬೆಡಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಅಮಿತಾಭ್ ಬಚ್ಚನ್ ನಟನೆಯ ‘ಗುಡ್ ಬೈ’, ಸಿದ್ದಾರ್ಥ್ ಮಲ್ಹೋತ್ರ ನಟನೆಯ ‘ಮಿಷನ್ ಮಜ್ನು’ ಸಿನಿಮಾದಲ್ಲಿ ರಶ್ಮಿಕಾ ನಟಿಸಿದ್ದಾರೆ.

 

Share this post:

Related Posts

To Subscribe to our News Letter.

Translate »