ಐಪಿಎಲ್ ನಲ್ಲಿ ಮೊಳಗಿದ ಕೆಜಿಎಫ್ ಹಾಡು: ಕೆಜಿಎಫ್ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ರಣ್‌ವೀರ್ ಸಿಂಗ್
ಬಾಲಿವುಡ್‌ನ ಸ್ಟಾರ್ ನಟ ರಣ್‌ವೀರ್ ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ತಾನ ರಾಯಲ್ಸ್ ಐಪಿಎಲ್ ಮ್ಯಾಚ್‌ಗೆ ಅತಿಥಿಯಾಗಿ ಬಂದು ಮ್ಯಾಚ್ ವೀಕ್ಷಿಸಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಮೊದಲಿಗೆ ಅದ್ಭುತವಾಗಿ ಪ್ರೇಕ್ಷಕರನ್ನು ರಂಜಿಸಿದ ಬಾಲಿವುಡ್ ನಟ ರಣವೀರ್ ಸಿಂಗ್, ಅನೇಕ ಚಿತ್ರಗಳ ಹಾಡಿಗೆ ಹೆಜ್ಜೆಹಾಕಿದರು. ಕೈಯಲ್ಲಿ ಐಪಿಎಲ್ ಧ್ವಜ ಹಿಡಿದುಕೊಂಡು ಕ್ರೀಡಾಂಗಣಕ್ಕೆ ಪ್ರವೇಶಿಸಿದ ಅವರು, ಪ್ರೇಕ್ಷಕರಲ್ಲಿನ ಜೋಶ್ ಅನ್ನು ಇಮ್ಮಡಿಗೊಳಿಸಿದರು. ಇದರ ನಡುವೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೆಜಿಎಫ್ 2 ಚಿತ್ರದ ಹಾಡು ಮೊಳಗಿದ್ದು, ರಣವೀರ್ ಸಿಂಗ್ ಕೆಜಿಎಫ್ 2 ಚಿತ್ರದ ‘ಧೀರಾ ಧೀರಾ‘ ಮತ್ತು ಥೀಮ್ ಸಾಂಗ್ ಗೆ ಕುಣಿದು ಕುಪ್ಪಳಿಸಿದ್ದಾರೆ. ಈ ಮೂಲಕ ಐಪಿಎಲ್ ನಲ್ಲಿಯೂ ರಾಕಿ ಭಾಯ್ ಹವಾ ಆದಂತಾಗಿದೆ.
ಹೆಮ್ಮೆಯ ಕ್ಷಣ PROUD MOMENT 🙏#IPL2022 #KGFChapter2#ನಮ್ಮHombale #ನಮ್ಮRCB@RCBTweets @hombalefilms
@TheNameIsYash @prashanth_neel @VKiragandur @duttsanjay @TandonRaveena @SrinidhiShetty7 @HombaleGroup @bhuvangowda84 @RaviBasrur @ChaluveG— K.G.F (@KGFTheFilm) May 29, 2022