ಮುಂಬೈ: ಮಾಲ್ಡೀವ್ಸ್ ವಿರುದ್ಧ ಬಹಿಷ್ಕಾರ ಅಭಿಯಾನಕ್ಕೆ ಕೈ ಜೋಡಿಸುವ ಭರದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಎಡವಟ್ಟು ಮಾಡಿಕೊಂಡಿದ್ದಾರೆ.ಪ್ರಧಾನಿ ಮೋದಿ ಲಕ್ಷದ್ವಿಪಕ್ಕೆ ಭೇಟಿ ನೀಡಿದ ಬಗ್ಗೆ ಮತ್ತು ಭಾರತದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮಾಲ್ಡೀವ್ಸ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಬಹಿಷ್ಕಾರ ಅಭಿಯಾನ ಜೋರಾಗಿ ನಡೆಯುತ್ತಿದೆ. ಇದಕ್ಕೆ ಸೆಲೆಬ್ರಿಟಿಗಳೂ ಕೈ ಜೋಡಿಸಿದ್ದಾರೆ.
ಇದೇ ನಿಟ್ಟಿನಲ್ಲಿ ನಟ ರಣವೀರ್ ಸಿಂಗ್ ಭಾರತೀಯ ದ್ವೀಪಗಳು ಅತ್ಯಂತ ಸುಂದರವಾಗಿದೆ ಎಂದು ಬೀಚ್ ನಲ್ಲಿರುವ ಫೋಟೋ ಪ್ರಕಟಿಸಿದ್ದರು. ಆದರೆ ಇದು ಮಾಲ್ಡೀವ್ಸ್ ಬೀಚ್ ನ ಫೋಟೋ ಆಗಿತ್ತು. ರಣವೀರ್ ಎಡವಟ್ಟನ್ನು ಗುರುತಿಸಿದ ನೆಟ್ಟಿಗರು ಟ್ರೋಲ್ ಮಾಡಲು ಶುರು ಮಾಡಿದರು.
ತಕ್ಷಣವೇ ಎಚ್ಚೆತ್ತುಕೊಂಡ ರಣವೀರ್ ಫೋಟೋ ಡಿಲೀಟ್ ಮಾಡಿದ್ದಾರೆ. ಈ ವರ್ಷ ನಮ್ಮ ದೇಶದ ಇನ್ನಷ್ಟು ಸುಂದರ ಕರಾವಳಿ ಭಾಗಗಳಿಗೆ ಹೋಗಬೇಕೆಂದಿರುವೆ. ನಮ್ಮ ದೇಶವೇ ಅತ್ಯಂತ ಸುಂದರ ಎಂದು ಬರೆದುಕೊಂಡಿದ್ದರು.