Sandalwood Leading OnlineMedia

Ranganayaka Review: ಕಥೆ ತಲೆ ಕೆಡಿಸಿತು, ಮಾತು ಸಿನಿಮಾ ಕೆಡಿಸಿತು!

Rating

 

ಮಟ ಮಟ ಮಧ್ಯಾಹ್ನ ಕುಳಿತು ನೋಡಿದರೂ`ಮಠಮತ್ತು `ಎದ್ದೇಳು ಮಂಜುನಾಥಚಿತ್ರಗಳು ಕಿಂಚಿತ್ತೂ ಬೋರ್ ಹೊಡೆಸುವುದಿಲ್ಲ. ಬರೇ ಎರಡು ಚಿತ್ರಗಳಿಂದ ಅಪಾರವಾದ ಅಭಿಮಾನಿ ವರ್ಗವನ್ನು ಪಡೆದ ನಿರ್ದೇಶಕರಾದ ಗುರುಪ್ರಸಾದ್ ಆವರು ತಮ್ಮ ಹ್ಯಾಟ್ರಿಕ್ ಪ್ರಯತ್ನದಲ್ಲಿ ಅಭಿಮಾನಿಗಳಿಗೆ ಅಕ್ಷರಶಹಃ ನಿರಾಸೆ ಮಾಡಿದ್ದಾರೆ ಬಾರಿ ನಟ ಜಗ್ಗೇಶ್ ಮತ್ತು ನಿರ್ದೇಶಕ ಗುರುಪ್ರಸಾದ್ ಜೋಡಿ 15 ವರ್ಷಗಳ ನಂತರ `ರಂಗನಾಯಕನಿಗಾಗಿ ಒಂದಾಗಿ ಮುಗ್ಗರಿಸಿದ್ದಾರೆ. `ರಂಗನಾಯಕಟ್ರೇಲರ್ ರಿಲೀಸ್ ಆದಮೇಲೆ ಚಿತ್ರದಲ್ಲಿ ಎನೋ ಇದೆ ಎಂದೆನಿಸಿತ್ತು, ಆದರೆ Trailerನಲ್ಲಿರೋದಷ್ಟೇ ಸಿನಿಮಾದಲ್ಲಿರೋದು. Trailer ಅನ್ನೇ ಉದ್ದುದ್ದ ಸಂಭಾಷಣೆಯ ಮೂಲಕ ಎಲಾಸ್ಟಿಕ್ನಂತೆ ಎಳೆಯಲಾಗಿದೆತಾನೇ ಸ್ಕಿçÃನ್ ತುಂಬಾ ಕಾಣಿಸಿಕೊಳ್ಳುತ್ತಾ.. Trailer ಎಳೆದೂ ಎಳೆದೂ ಇಂಟರವಲ್ಗೆ ತಂದು ನಿಲ್ಲಿಸುವ ಗುರುವಿನ ಚಾಣಾಕ್ಷತನಕ್ಕೆ ಅದಾಗಲೇ ಪ್ರೇಕ್ಷಕ ಗುರು ಮೇಲೆ `ಗರ್ರ್..’ ಅನ್ನಲು ಆರಂಭಿಸಿರುತ್ತಾನೆ. ತಾನೇ ಎಲ್ಲಾ ಮಾಡಲು ಹೋಗಿ.. ಕೊನೆಗೆ ಪ್ರೇಕ್ಷಕನೂ ಗುರು ಒಬ್ಬರೇ ಆಗಿದ್ದಾರೆ! ತೆರೆಯ ಹಿಂದೆ ಇನ್ನೊಬ್ಬರಿಗೆ ಟಾರ್ಚರ್ ಆಗುವಂತೆ ಮಾತನಡುವ ಗುರು, ತೆರೆಯ ಮೆಲೂ ಬರೀ ಟಾರ್ಚರ್. ಇಂತವರು ಸಿನಿಮಾ ನಿರ್ದೇಶನದ ಪಾಠ ಬೇರೆ ಮಾಡುತ್ತಾರಂತೆ

Read More : Kreem Movie Review: ಜನ ಸಾಮಾನ್ಯನಿಗೆ ನಿಲುಕದ ಅಸಮಾನ್ಯ ಚಿತ್ರ!

1911ನೇ ಇಸವಿಯಲ್ಲಿ ಸಿನಿಮಾ ಮಾಡುವುದಕ್ಕೆ ಮುಂದಾದ ನಿರ್ದೇಶಕನೊಬ್ಬನ ವ್ಯಥೆ ಇದು, ಅಲ್ಲಲ್ಲ ಕಥೆ ಇದು. ಸಿನಿಮಾಗೆ ರಂಗನಾಯಕನೇ (ಜಗ್ಗೇಶ್) ಹೀರೋ. ಕನ್ನಡ ಚಿತ್ರರಂಗದ ಮೇಲೆ ಪರಭಾಷಿಕರು ಹೇಗೆ ಅಂದೇ ದಾಳಿ ಮಾಡಿದರೂ ಎಂಬುದನ್ನು ರಂಗನಾಯಕ ಸಿನಿಮಾದಲ್ಲಿ ಹೇಳಲಾಗಿದೆ. ಕಥೆಯನ್ನು ಸಂಭಾಷಣೆಯ ಮೂಲಕವೇ ಪ್ರೇಕ್ಷಕನಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ. ಒಬ್ಬ ನಿರ್ದೇಶಕನಿಗೆ ದೃಶ್ಯ ಮಾಧ್ಯಮದ ಉದ್ದೇಶವೇ ಅರಿವಾಗದಿದ್ದಾಗ ಇಂತಹ ಚಿತ್ರಗಳು ನಿರ್ಮಾಣವಾಗುತ್ತದೆ. ಬರೀ ಸಂಭಾಷಣೆಯಲ್ಲೇ ಎಲ್ಲಾ ಹೇಳುತ್ತೇನೆ ನಾಟಕವೋ ಇನ್ನೊಂದೋ ಮಾಡಿಕೊಂಡಿರಬಹುದು. ಅದು ಬಿಟ್ಟು ದುಡ್ಡು ಮತ್ತು ಸಮಯ ಎರಡನ್ನೂ ಕೊಡುವ ಪ್ರೇಕ್ಷಕನಿಗೆ ಟಾರ್ಚರ್ ಕೊಡುವುದು ನ್ಯಾಯವೇ ಗುರುಪ್ರಸಾದ್ಸಂಬಾಷಣೆ ತುಂಬಾ ತ್ರಿಬಲ್ ಮೀನಿಂಗ್, ಪಂಚಿ0ಗ್, ತುಂಟತನ, ತರಲೆ, ತಮಾಷೆ, ಅನವಶ್ಯಕ, ಅತಿರೇಕ ಎಲ್ಲವೂ ಸೇರಿ ತಲೆ ಚಿಟ್ಟು ಹಿಡಿಯುತ್ತದೆ. ಒಂದು ರೀತಿಯಲ್ಲಿ ಮಾತಲ್ಲೇ ಸಿನಿಮಾ ಕಟ್ಟಿದ್ದಾರೆ ಗುರುಪ್ರಸಾದ್.

Read More : Kappu Bilupina Naduve Movie Review : ದೇವಗಿರಿಯ ಡೆವಿಲ್ ರಹಸ್ಯ!

ಸಿನಿಮಾದಲ್ಲಿ ಉಪ್ಪಿನಕಾಯಿಯಂತಿರಬೇಕಾದ ಸಂಭಾಷಣೆ ಇಲ್ಲಿ ಉಪ್ಪಿನಕಾಯಿಯೇ ಊಟವಾಗಿದೆ. ಪಂಚ್ ಹೆಸರಿನಲ್ಲಿ ಅಲ್ಲಲ್ಲಿ ಕಥೆಗೆ ಸಂಬ0ಧವಿರದ ಸಂಭಾಷಣೆ ಬರುತ್ತದೆ, ಅಲ್ಲದೇ ಯಾರಿಗೋ ಟಾಂಟ್ ಕೊಡುವ ಉದ್ದೇಶದಿಂದ ಸಿನಿಮಾದ ಆಶಯ ಮರೆತು ಬೇಕಾ ಬಿಟ್ಟಿ ಸಂಭಾಷಣೆ ಬರುತ್ತದೆ. ಮೊದಲಾರ್ಧದ ಹರಟೆ ಕಟ್ಟೆ ದ್ವಿಯಾರ್ಧದಲ್ಲೂ ಮುಂದು ವರೆಯುತ್ತದೆ.ಗುರುಪ್ರಸಾದ್ ಅವರ ಆಸ್ತಾನ ಕಲಾವಿದ ಅನೂಪ್ ಸೀಳಿನ್ ಸಂಗೀತ ಅವಾಗವಾಗ ಬೋರಿಂಗ್ ಸಂಭಾಷಣೆಯನ್ನು ಸೀಳಿ ಸ್ವಲ್ಲ ತಂಪು ನೀಡುತ್ತದೆ.  ‘ಗಾಳಿ ತಂಗಾಳಿ..’, ‘ಎನ್ನ ಮನದರಸಿ..’ ಹಾಡುಗಳಲ್ಲಿ ರೆಟ್ರೋ ಟಚ್ ನೀಡಿರುವುದರಿಂದ ಕೇಳುವುದಕ್ಕೂ ನೋಡುವುದಕ್ಕೂ ಹಾಡುಗಳು ಇಷ್ಟವಾಗುತ್ತವೆ. ಅಶೋಕ್ ಅವರ ಕ್ಯಾಮೆರಾಕ್ಕೆ ಹೆಚ್ಚು ಕೆಲಸವಿಲ್ಲ, ಕ್ಲೋಸ್ ಶಾಟ್ನಲ್ಲೇ ಕಥೆ ಕಟ್ಟುವ ಗುರುಪ್ರಸಾದ್ ಸಿನಿಮಾದಲ್ಲಿ ಕ್ಯಾಮರಗೆ ಕೆಲಸ ಮೊದಲಿನಿಂದಲೂ ಕಮ್ಮಿ.

Read More :  Baanadariyalli Review: ದಾರಿ ತಪ್ಪಿದ ಬಾನ`ದಾರಿ’, ಪ್ರೇಕ್ಷಕನಿಗಿದು ದುಬಾರಿ!

ಜಗ್ಗೇಶ್ ಎಂದಿನ0ತೆ ತ್ರಿಬಲ್ ಮೀನಿಂಗ್ ಡೈಲಾಗ್ನಲ್ಲಿ ತಾನೇ ಕಿಂಗ್ ಎಂಬುದನ್ನು ಪ್ರೂವ್ ಮಾಡಿದ್ದಾರೆ. ಅವರ ಕಾಮಿಡಿ ಟೈಮಿಂಗ್, ಅಂಗಿಕಾಭಿನಯ ಕಥೆಯನ್ನು ದೂರ ಇಟ್ಟು ನೋಡಿದರೆ ಅಲ್ಲಲ್ಲಿ ಕಚಗುಳಿ ನೀಡುತ್ತದೆ. ಆಗಾಗ ಬಂದು ನಾಯಕನ ಜೊತೆಗೆ ಡ್ಯುಯೆಟ್ ಹಾಡುವ ರಚಿತಾ ಮಹಾಲಕ್ಷೀಮಿಗೆ ಅದಷ್ಟೇ ಕೆಲಸ. ಇನ್ನು ಚೈತ್ರಾ ಕೋಟೂರ್, ಅವಿನಾಶ್ ಶಠಮರ್ಷಣ, ಶೋಭಾ ರಾಘವೇಂದ್ರ, ಎಂ.ಕೆ ಮಠಸಿಕ್ಕಿದ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಳಡಿದ್ದಾರೆ. ಇವರಲ್ಲಿ ಹೆಚ್ಚು ಗಮನಸೆಳೆಯುವುದು ನಟ ಎಂ.ಕೆ ಮಠ. ಪುನೀತ್ ಅಭಿನಯದ ಯುವರತ್ನ ಚಿತ್ರದಲ್ಲಿ ಮನೋಜ್ನ ಅಭಿನಯ ನೀಡಿದ್ದ ಎಂ.ಕೆ ಮಠ `ರಂಗನಾಯಕದಲ್ಲೂ ತಮ್ಮ ರಂಗಭೂಮಿಯ ಅನುಭವವನ್ನು ಧಾರೆ ಎರೆದಿದ್ದಾರೆ. psychiatrist ಪಾತ್ರಕ್ಕೆ ಯೋಗರಾಜ್ ಭಟ್, ಗುರುಪ್ರಸಾದ್  ಅವರದ್ದು ಅದ್ಭುತ ಆಯ್ಕೆಇನ್ನು, ಇಡೀ ಸಿನಿಮಾವನ್ನು ವಿಚಿತ್ರ ಮ್ಯಾನರಿಸಂ ಮೂಲಕ ಆವರಿಸಿಕೊಂಡಿರುವ `ನಿದ್ರೇಶಕರ ಅಭಿನಯ ಅವರಿಗಷ್ಟೇ ಪ್ರೀತಿ.

 

 

Share this post:

Related Posts

To Subscribe to our News Letter.

Translate »