18ನೇ ವಯಸ್ಸಿನ ಫೋಟೊ ಶೇರ್ ಮಾಡಿದ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ: ಸೋ ಕ್ಯೂಟ್ ಅಂದ್ರು ಫ್ಯಾನ್ಸ್
ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಈ ಫೋಟೋಗೆ ಸಾವಿರಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ರಮ್ಯಾ ನೋಡಿ ಅವರ ಅಭಿಮಾನಿಗಳಂತೂ ಫುಲ್ ಫಿಧಾ ಆಗಿರುವುದಂತೂ ಗ್ಯಾರಂಟಿ. ಸ್ಯಾಂಡಲ್‌ವುಡ್ ಕ್ವೀನ್ ಯಾವಾಗ ಸಿನಿಲೋಕಕ್ಕೆ ಪುಲ್ ಟೈಮ್‌ನಲ್ಲಿ ಕಾಲಿಡುತ್ತಾರೋ? ಮತ್ತೆ ಯಾವಾಗ ಸಿನಿಮಾ ನೋಡುತ್ತೇವೋ ಅಂತ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ನೋಡುಗರು ತಮ್ಮ ನೋಟವನ್ನು ಬೇರೆಡೆಗೆ ತಿರುಗಿಸಲಾಗದಷ್ಟು ತನ್ನ ಮುಖದ ಕಾಂತಿಯನ್ನು ಉಳಿಸಿಕೊಂಡಿದ್ದಾರೆ ವಿನಃ ಕಡಿಮೆಯಂತು ಆಗಿಲ್ಲ.
ಇತ್ತೀಚಿನ ದಿನಗಳಲ್ಲಿ ರಮ್ಯಾ ಮತ್ತೆ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದು,ಸಿನಿಮಾ ಸಂಬಂಧಿ ಅನೇಕ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗುತ್ತಿದ್ದಾರೆ.ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವೈಯಕ್ತಿಕ ಫೋಟೋಗಳನ್ನು ಹಂಚಿಕೊಳ್ಳುವುದು ಕೊಂಚ ಕಡಿಮೆಯೇ. ಈಗ ಅವರು ಇನ್ಸ್ಟಾಗ್ರಾಮ್ನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಫ್ಯಾನ್ಸ್ಗೆ ಟ್ರೀಟ್ ನೀಡಿದ್ದಾರೆ.