Sandalwood Leading OnlineMedia

ಹಾಸ್ಟೆಲ್ ಹುಡುಗರಿಗೆ  ನಟಿ ರಮ್ಯಾ ಲೀಗಲ್ ನೋಟೀಸ್, ಒಂದು ಕೋಟಿ ಪರಿಹಾರ ಬೇಡಿಕೆ

ಬಿಡುಗಡೆಗೆ ಸಜ್ಜಾಗಿರುವ ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಚಿತ್ರತಂಡಕ್ಕೆ ಶಾಕ್ ಒಂದು ಎದುರಾಗಿದೆ. ಶಾಕ್​ ಕೊಟ್ಟವರು ಬೇರೆ ಯಾರು ಅಲ್ಲ, ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ. ಹಾಸ್ಟೆಲ್​ ಹುಡುಗರ ವಿರುದ್ಧ ತಿರುಗಿ ಬಿದ್ದಿರುವ ಮೋಹಕ ತಾರೆ, 1 ಕೋಟಿ ರೂ. ಪರಿಹಾರಕ್ಕೆ ಒತ್ತಾಯ ಮಾಡಿದ್ದಾರೆ ಕೆಲ ದಿನಗಳ ಹಿಂದೆಯೇ ಚಿತ್ರದ ಟ್ರೈಲರ್​ ಬಿಡುಗಡೆಯಾಗಿ ಭಾರೀ ಮೆಚ್ಚುಗೆ ಗಳಿಸಿದೆ. ಟ್ರೈಲರ್​ನಲ್ಲಿ ರಮ್ಯಾ ಅವರನ್ನು ಕಂಡು ಅಭಿಮಾನಿಗಳು ತುಂಬಾ ಖುಷಿ ವ್ಯಕ್ತಪಡಿಸಿದ್ದರು. ಆದರೆ, ಇದು ರಮ್ಯಾ ಅವರಿಗೆ ಆಘಾತವಾಗಿದೆ. ಏಕೆಂದರೆ, ಅವರ ಅನುಮತಿ ಇಲ್ಲದೆ ಟ್ರೈಲರ್​ನಲ್ಲಿ ಅವರ ದೃಶ್ಯಗಳನ್ನು ಬಳಸಲಾಗಿದೆಯಂತೆ. ಹಿನ್ನೆಲೆ ಇದೀಗ ಚಿತ್ರತಂಡದ ವಿರುದ್ಧ ರಮ್ಯಾ ಕಾನೂನು ಸಮರ ಸಾರಿದ್ದಾರೆ.

ರಮ್ಯಾ  ಹಾಸ್ಟೆಲ್ ಹುಡುಗರಿಗೆ ಮಾಡಿರುವ ತಾಕೀತು ಏನು? …ಗುಲ್ಮರ್​​ ಫಿಲ್ಮ್ಸ್​​​​​​​​, ಝೀ ಎಂಟರ್ಟೈನ್​​ಮೆಂಟ್, ನಿರ್ಮಾಪಕ ವರುಣ್​​​​​​ ಗೌಡ, ನಿರ್ದೇಶಕ ನಿತಿನ್​ ಕೃಷ್ಣ ಮೂರ್ತಿ ಹಾಗೂ ಕ್ಯಾಮೆರಾ ಮೆನ್​​ ಅರಂವಿದ್​ ಕಶ್ಯಪ್ ವಿರುದ್ಧ ರಮ್ಯಾ ದೂರು ದಾಖಲಿಸಿದ್ದಾರೆ. ಅನುಮತಿ ಇಲ್ಲದೆ ನನ್ನ ದೃಶ್ಯಗಳನ್ನು ಬಳಸಿರುವ ಹಿನ್ನೆಲೆಯಲ್ಲಿ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ರಮ್ಯಾ ಪಟ್ಟು ಹಿಡಿದಿದ್ದಾರೆ. ಎಲ್ಲ ಕಡೆಗಳಿಂದ ತಮ್ಮ ದೃಶ್ಯ, ಫೋಟೋ ಸೇರಿದಂತೆ ಇನ್ನಿತರ ಕಂಟೆಂಟ್​ಗಳನ್ನು ಕೂಡಲೇ ತೆಗೆಯುವಂತೆ ರಮ್ಯಾ ತಾಕೀತು ಮಾಡಿದ್ದಾರೆ. ಈಗಾಗಲೇ ಬಳಸಿಕೊಂಡಿರುವುದಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಕೂಡ ಅವರು ನೋಟೀಸ್​ನಲ್ಲಿ ಒತ್ತಾಯಿಸಿದ್ದಾರೆ.

ಆರೋಪ :- ಬರೀ ಪ್ರೋಮೋಗೆ ಮಾತ್ರ ಬಳಕೆ ಮಾಡುತ್ತೇವೆ  ಎಂದು ಹೇಳಿ ಚಿತ್ರಕ್ಕೂ ಬಳಕೆ ಮಾಡಿದ್ದಾರೆ…..ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ತಮ್ಮ ದೃಶ್ಯಗಳನ್ನು ತೆಗೆಯುವಂತೆ ರಮ್ಯಾ ಪಟ್ಟು ಹಿಡಿದಿದ್ದಾರೆ. ಕೇವಲ ಪ್ರೋಮೋದಲ್ಲಿ ಮಾತ್ರ ಬಳಸುವುದಾಗಿ ಹೇಳಿದ್ದರು. ಆದರೆ, ಈಗ ಸಿನಿಮಾದಲ್ಲೂ ನನ್ನ ದೃಶ್ಯಗಳನ್ನು ಬಳಿಸಿದ್ದಾರೆ ಎಂದು ರಮ್ಯಾ ಆರೋಪ ಮಾಡಿದ್ದು, ಸಿನಿಮಾದಲ್ಲಿರುವ ತಮ್ಮ ದೃಶ್ಯವನ್ನು ತೆಗೆಯುವಂತೆ ಕೋರಿ ಕೋರ್ಟ್​ ಮೊರೆ ಹೋಗಿದ್ದಾರೆ.ದೃಶ್ಯಗಳನ್ನು ತೆಗೆಯದಿದ್ದಲ್ಲಿ 1 ಕೋಟಿ ರೂ. ಮಾನನಷ್ಟ ಕಟ್ಟಿಕೊಡಬೇಕೆಂದು ರಮ್ಯಾ ದೂರು ದಾಖಲಿಸಿದ್ದಾರೆ. ಇದು ಈಗ ಚಿತ್ರತಂಡಕ್ಕೆ ತಲೆ ನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.

Share this post:

Related Posts

To Subscribe to our News Letter.

Translate »