Sandalwood Leading OnlineMedia

ಅತ್ಯಂತ ಜನಪ್ರಿಯ ನಾಯಕಿ ಪಟ್ಟಿಯಲ್ಲಿ ರಮ್ಯಾ: ನಂಬರ್ ಒನ್ ಹೀರೋಯಿನ್ ಅಂದ್ರು ಫ್ಯಾನ್ಸ್

ಓರಾಮ್ಯಾಕ್ಸ್​ ಸಂಸ್ಥೆಯು ಕನ್ನಡದ ಫೇಮಸ್ ಟಾಪ್​ ನಟಿಯರ ಸಮೀಕ್ಷೆ ಮಾಡಿದ್ದು ಈ ಸಂಸ್ಥೆ ಬಿಡುಗಡೆ ಮಾಡಿರುವ ಟಾಪ್​ 5 ನಟಿಯರ ಪಟ್ಟಿಯಲ್ಲಿ ರಮ್ಯಾ 4ನೇ ಸ್ಥಾನ ಪಡೆದಿದ್ದಾರೆ. ಈ ಸಮೀಕ್ಷೆಯನ್ನು ಟ್ವಿಟ್ಟರ್​ನಲ್ಲಿ ಶೇರ್ ಮಾಡಿಕೊಂಡಿರುವ ಅವರು ನಾನು ಕಳೆದ 8 ವರ್ಷಗಳಿಂದ ಸಿನಿಮಾ ರಂಗದಿಂದ ದೂರವಿದ್ದರೂ ಸಹ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದ್ದು ಬಹಳ ಸಂತೋಷವಾಗಿದೆ. ರಚಿತಾ ರಾಮ್​, ಆಶಿಕಾ ರಂಗನಾಥ್, ರಾಧಿಕಾ ಪಂಡಿತ್ ಹಾಗೂ ರಶ್ಮಿಕಾ ಜೊತೆ ಸ್ಥಾನ ಪಡೆದಿರುವುದು ಖುಷಿಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಕಳೆದ ಕೆಲ ವರ್ಷದಿಂದ ಸಿನಿಮಾದಿಂದ ದೂರವಿರುವ ರಾಧಿಕಾ ಪಂಡಿತ್ ಸಹ ಈ ಪಟ್ಟಿಯಲ್ಲಿ ಮೂರನೇ ಸ್ಥಾನಗಳಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಆಶಿಕಾ ರಂಗನಾಥ ಇದ್ದು, 2ನೇ ಸ್ಥಾನ ರಚಿತಾ ರಾಮ್​ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ನಟಿ ರಶ್ಮಿಕಾ ಮಂದಣ್ಣ ಪಡೆದುಕೊಂಡಿದ್ದಾರೆ.  ಇನ್ನು ಅವರ ಈ ಪೋಸ್ಟ್​ ಗೆ ಅಭಿಮಾನಿಗಳು ಸಹ ಕಾಮೆಂಟ್​ ಮಾಡುತ್ತಿದ್ದು, ಎಷ್ಟೇ ವರ್ಷವಾದರೂ ಸಹ ನೀವೇ ನಮ್ಮ ನೆಚ್ಚಿನ ನಟಿ ಎಂದು ಹೇಳಿದ್ದಾರೆ.

ಸ್ಯಾಂಡಲ್​ ವುಡ್​ ಕ್ವೀನ್​ ರಮ್ಯಾ  ಕಳೆದ 8 ವರ್ಷದಿಂದ ಸಿನಿಮಾ ರಂಗದಿಂದ ದೂರವಿದ್ದಾರೆ. ಆದರೆ ಅವರ ಬಗ್ಗೆ ಅಭಿಮಾನ ಮಾತ್ರ ಇಂದಿಗೂ ಒಂದಿಂಚೂ ಕಡಿಮೆಯಾಗಿಲ್ಲ. ಈಗಲೂ ಅವರೆಂದರೆ ಅದೇ ಪ್ರೀತಿ ಜನರಿಗಿದೆ. ಇತ್ತೀಚೆಗಷ್ಟೇ ಸಿನಿಮಾ ರಂಗಕ್ಕೆ ಮರಳಿ ಬರುವುದಾಗಿ ಹೇಳಿದ್ದು, ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ. . ಆದರೆ ಯಾವ ಚಿತ್ರ? ಹೀರೋ ಯಾರು? ಯಾವಾಗ ಶೂಟಿಂಗ್ ಸೇರಿದಂತೆ ಯಾವುದೇ ಮಾಹಿತಿಗಳನ್ನು ರಮ್ಯಾ ಬಿಟ್ಟುಕೊಟ್ಟಿಲ್ಲ.

 

 

 

 

Share this post:

Related Posts

To Subscribe to our News Letter.

Translate »