ಸ್ಯಾಂಡಲ್ವುಡ್ ಕ್ವೀನ್, ಮೋಹಕ ತಾರೆ ರಮ್ಯಾ ಅವರ ಕಮ್ ಬ್ಯಾಕ್ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಆಗಿದೆ, ಹಲವು ವರ್ಷಗಳ ನಂತರ ಮತ್ತೆ ರಮ್ಯಾ ಸ್ಯಾಂಡಲ್ ವುಡ್ ಗೆ ಬಂದರಲ್ಲ ಅಂತ ಸಂಭ್ರಮಿಸುವ ಹೊತ್ತಿನಲ್ಲೇ ಅವರೇ ನಿರ್ಮಾಣ ಮಾಡುತ್ತಿದ್ದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಿಂದ ರಮ್ಯಾ ಹೊರ ಬಂದಿದ್ದಾರೆ.
ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಮೂಲಕ ರಾಜ್ ಬಿ ಶೆಟ್ಟಿ ಜೊತೆ ಸ್ಯಾಂಡಲ್ವುಡ್ನಲ್ಲಿ ಕಮ್ ಬ್ಯಾಕ್ ಮಾಡುತ್ತಾರೆ ಎಂದಿದ್ದ ರಮ್ಯಾ ಅವರು ಮೊದಲ ಬಾರಿ ಪ್ರೊಡ್ಯೂಸರ್ ಹಾಗೂ ನಟಿಯಾಗಿ ಸಿನಿಮಾ ಮಾಡುವವರಿದ್ದರು. ಆದರೆ ಈಗ ಪ್ಲಾನ್ ಚೇಂಜ್ ಆಗಿದೆ. ಇದೀಗ ನಾಯಕಿಯ ಸ್ಥಾನವನ್ನು ಬೇರೊಬ್ಬರು ತುಂಬಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಸಿರಿ ರವಿಕುಮಾರ್ ಲೀಡ್ ಪಾತ್ರದಲ್ಲಿ ಮಾಡಲಿದ್ದಾರೆ ಎಂದು ಸ್ವತಃ ರಮ್ಯಾ ಅವರ ಪ್ರೊಡಕ್ಷನ್ ಹೌಸ್ ತಿಳಿಸಿದೆ.
ಹೀರೋಯಿನ್ ಆಗಿ ಸಿನಿಮಾದಿಂದ ಹೊರಬಂದಿದ್ದರೂ ಸಿನಿಮಾಗೆ ರಮ್ಯಾ ಬಂಡವಾಳ ಹೂಡಲಿರುವುದರಲ್ಲಿ ವ್ಯತ್ಯಾಸವಾಗಿಲ್ಲ. ಸಿನಿಮಾಗೆ ರಮ್ಯಾ ಅವರೇ ಹೂಡಿಕೆ ಮಾಡಲಿದ್ದು ಆ್ಯಪಲ್ ಬಾಕ್ಸ್ ಸಿನಿಮಾ ನಿರ್ಮಿಸಲಿದೆ. ಆದರೆ ನಟಿಯಾಗಿ ರಮ್ಯಾ ಹೊರಬಂದಿದ್ದು ನಟಿ ಸಿರಿ ತಂಡ ಸೇರಿದ್ದಾರೆ.
ಅವರು ಕಮ್ ಬ್ಯಾಕ್ ಮಾಡುತ್ತೇನೆಂದು ಹಲವು ಸಲ ಹೇಳಿರುವ ಕಾರಣ ನಟನೆಯಿಂದ ಹಿಂದೆ ಸರಿಯಲ್ಲ ಎನ್ನುವುದು ಕೆಲವರ ಚರ್ಚೆ. ಬಿಗ್ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿ ರಮ್ಯಾ ರೀ ಲಾಂಚ್ ಆಗಲು ಬಯಸುತ್ತಿದ್ದಾರೆ ಎನ್ನುತ್ತಿದ್ದಾರೆ ಜನ.
ನಿರ್ಮಾಣ ಸಂಸ್ಥೆ ಬಗ್ಗೆ ಮಾತನಾಡಿದ್ದ ರಮ್ಯಾ ಅವರು, “ಈಗಾಗಲೇ ನಮ್ಮ ಪ್ರೊಡಕ್ಷನ್ ಸಂಸ್ಥೆ ಮೂಲಕ ಎರಡು ಚಿತ್ರಗಳು ನಿರ್ಮಾಣವಾಗಲು ತಯಾರಾಗಿದೆ ಎಂದು ಹೇಳುವಲ್ಲಿ ನನಗೆ ಖುಷಿಯಿದೆ. ಈ ಎರಡೂ ಚಿತ್ರಗಳು ಕೆ ಆರ್ ಜಿ ಸಂಸ್ಥೆಯ ವಿತರಣೆಯ ಮೂಲಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿವೆ. ಅದರ ಜೊತೆಯಲ್ಲಿ ಓಟಿಟಿ ಪ್ಲಾಟ್ ಫಾರಂಗಳಿಗಾಗಿ ಸಿನಿಮಾ, ವೆಬ್ ಸಿರೀಸ್ ನಿರ್ಮಾಣ ಮಾಡಲು ಆಪಲ್ ಬಾಕ್ಸ್ ಸ್ಟುಡಿಯೋಸ್ ಸಿದ್ಧವಾಗುತ್ತಿದೆ” ಎಂದಿದ್ದಾರೆ.