ರಮ್ಯಾ ಚಿತ್ರರಂಗದಿಂದ ದೂರವಾಗಿ ಕೆಲವು ವರ್ಷಗಳೇ ಆಗಿವೆ. ರಮ್ಯಾ ಈಗ ವಾಪಸ್ ಬರುತ್ತಿರುವುದು ಕೂಡಾ ನಿರ್ಮಾಪಕಿಯಾಗಿ. ನಾಯಕಿಯಾಗಿ ಕೂಡಾ ಬರುತ್ತಾರೆ ಎಂದು ಸ್ವತಃ ನಿರೀಕ್ಷೆ ಮೂಡಿಸಿದ್ದ ರಮ್ಯಾ, ಕೊನೆ ಗಳಿಗೆಯಲ್ಲಿ ಹಿಂದೆ ಸರಿದಿದ್ದರು. ತಾವೇ ನಿರ್ಮಾಪಕಿಯಾಗಿರುವ ಸ್ವಾತಿ ಮುತ್ತಿನ ಮಳೆ ಹನಿಯೇ.. ಚಿತ್ರಕ್ಕೆ ಅವರೇ ನಾಯಕಿಯಾಗಿದ್ದರು. ಆದರೆ ಕಡೆ ಕ್ಷಣದಲ್ಲಿ ರಮ್ಯಾ ತಮ್ಮ ಜಾಗಕ್ಕೆ ಸಿರಿ ಅವರನ್ನು ನಾಯಕಿಯನ್ನಾಗಿಸಿದರು. ಇಷ್ಟಕ್ಕೂ ರಮ್ಯಾ ಅವರು ನಟನೆಯಿಂದ ಹಿಂದೆ ಸರಿದಿದ್ದೇಕೆ..? ಅದನ್ನು ಸ್ವತಃ ರಮ್ಯಾ ಅವರೇ ಹೇಳಿದ್ದಾರೆ.

ಇದನ್ನೂ ಓದಿ ಸೀರಿಯಲ್ ದಿನಗಳನ್ನು ನೆನಪಿಸಿಕೊಂಡ ರಚಿತಾ ರಾಮ್
ನಿಮ್ಮಲ್ಲಿ ಹಲವರಿಗೆ ಈ ಪ್ರಶ್ನೆ ಇದೆ ಎಂದು ನನಗೆ ತಿಳಿದಿದೆ. ನಾನು ಚಿತ್ರದಿಂದ ಹೊರಗುಳಿದದ್ದು ಏಕೆಂದರೆ, ಅದು ಓಟಿಟಿಯಲ್ಲಿ ಬಿಡುಗಡೆಯಾಗುವುದೆಂದು ನಿರ್ಧರಿಸಿದ್ದೆವು. ನನ್ನ ಕಮ್‌ಬ್ಯಾಕ್ ಚಿತ್ರವು ಚಿತ್ರಮಂದಿರದಲ್ಲಿಯೇ ಬಿಡುಗಡೆ ಆಗಬೇಕೆಂದು ನಾನು ಬಯಸಿದ್ದೆ. ಚಿತ್ರವನ್ನು ಖರೀದಿಸುವುದಾಗಿ ಭರವಸೆ ನೀಡಿದ ಓಟಿಟಿ ವೇದಿಕೆಯು ನಂತರ ಹಿಂದೆ ಸರಿಯಿತು. ಕನ್ನಡದಲ್ಲಿ ಇದು ಹೆಚ್ಚಾಗಿ ನಡೆಯುತ್ತದೆ ಎಂದು ರಮ್ಯಾ ಹೇಳಿದ್ದಾರೆ.

ಇದನ್ನೂ ಓದಿ ಜೀವನದ ರಹಸ್ಯ ಬಹಿರಂಗಪಡಿಸಿದ ದೀಪಿಕಾ ಪಡುಕೋಣೆ..
ಅಂದರೆ ಅರ್ಥ ಸಿಂಪಲ್. ರಮ್ಯಾ ಅವರಿಗೆ ನಟಿಸುವ ಆಸೆ ಇದೆ. ಆದರೆ ಅದು ಚಿತ್ರಮಂದಿರದಲ್ಲಿಯೇ ಬಿಡುಗಡೆಯಾಗುವ ಸಿನಿಮಾದ ಮೂಲಕ ಆಗಬೇಕು ಎಂಬ ಆಸೆಯೂ ಇದೆ. ಹೀಗಾಗಿಯೇ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದಿಂದ ಹೊರಬಂದೆ ಎಂದಿರುವ ರಮ್ಯಾ, ಇದೇ ವೇಳೆ ಒಟಿಟಿಗಳು ಮಾಡುತ್ತಿರುವ ಡಬಲ್ ಗೇಮ್ʻನ್ನೂ ಬಹಿರಂಗಪಡಿಸಿದ್ದಾರೆ.
ಒಟಿಟಿ ವೇದಿಕೆಗಳು ಮೊದಲು ಚಿತ್ರವನ್ನು ತೆಗೆದುಕೊಳ್ಳುತ್ತೇವೆ ಎಂದು ಒಪ್ಪಿಕೊಳ್ಳುವುದು ಆಮೇಲೆ ತಾರಮ್ಮಯ್ಯ ಆಡಿಸುವುದು ಮಾಮೂಲಾಗಿ ಬಿಟ್ಟಿದೆ. ಅದರಲ್ಲೂ ಕನ್ನಡ ಚಿತ್ರಗಳೆಂದರೆ ಒಟಿಟಿ ವೇದಿಕೆಗಳಿಗೆ ಒಂಥರಾ ಅಲರ್ಜಿ. ಒಟಿಟಿ ವೇದಿಕೆಗಳಲ್ಲಿ ಕನ್ನಡ ಚಿತ್ರಗಳಿಗೆ ಎರಡನೇ ದರ್ಜೆಯಲ್ಲ, 3ನೇ ದರ್ಜೆಯ ಗೌರವವೂ ಸಿಗುತ್ತಿಲ್ಲ ಎನ್ನುವುದು ವಾಸ್ತವವೂ ಹೌದು. ಕೆಲವು ನಟರು, ನಿರ್ದೇಶಕರ ಚಿತ್ರಗಳಿಗಷ್ಟೇ ಒಟಿಟಿ ವೇದಿಕೆಗಳು ಫಿಕ್ಸ್ ಆಗಿಬಿಟ್ಟಿವೆ. ಹೊಸಬರಿಗಂತೂ ಕಿರಿಕ್ಕುಗಳೇ ಹೆಚ್ಚು.
ರಮ್ಯಾ ಅವರಂತಹ ಸ್ಟಾರ್ ನಟಿ, ರಾಜ್ ಬಿ ಶೆಟ್ಟಿಯಂತಹ ಸ್ಟಾರ್ ಹೀರೋ ಕಂ ಡೈರೆಕ್ಟರ್ ಇದ್ದೂ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ ಒಟಿಟಿಗಳಲ್ಲಿ ಸಿಕ್ಕ ಗೌರವ ನೋಡಿದರೆ ಚಿತ್ರರಂಗ ಒಗ್ಗಟ್ಟಾಗಿಲ್ಲದಿದ್ದರೆ ಉಳಿಗಾಲ ಇಲ್ಲ ಎಂಬ ಸಂದೇಶವಂತೂ ಸ್ಪಷ್ಟವಾಗಿದೆ.
ಸ್ವಾತಿ ಮುತ್ತಿನ ಮಳೆ ಹನಿಯೇ ಇದೇ ನವೆಂಬರ್ 24ಕ್ಕೆ ರಿಲೀಸ್ ಆಗುತ್ತಿದೆ.
