ರಂಜಾನ’ ಚಿತ್ರದ ಆಡಿಯೋ & ಟ್ರೈಲರ್ ಬಿಡುಗಡೆ ಶನಿವಾರ ಸಾಯಂಕಾಲ ಬೆಂಗಳೂರಿನ ಮಲ್ಲೇಶ್ವರಂ ದ ರೇಣುಕಾಂಬಿಕ ಡಿಜಿಟಲ್ ಸ್ಟುಡಿಯೋ ದಲ್ಲಿ ಜರುಗಿತು. ಫಕೀರ್ ಮುಹ್ಮದ ಕಟ್ಪಾಡಿ ಅವರ “ನೋಂಬು” ಸಣ್ಣ ಕತೆ ಆಧಾರಿತ ಒಟ್ಟು ಮುಸ್ಲಿಮ್ ಸಮುದಾಯದ ಹಸಿವು ನಿತ್ಯ ಬಡತನದ ಕುರಿತಾದ ಕಥಾವಸ್ತು.ಕಥಾ ನಾಯಕ ರಂಜಾನ್ ನ ಮಗ ಸತ್ತಾಗ ಆಗುವ ನೋವು,ಚಿತ್ರೀಕರಣದ ಸಂದರ್ಭ ನೆನೆದು ಸಂಗಮೇಶ ಗದ್ಗತಿಕರಾಗಿ ಗಂಟಲು ಬಿಗಿದು ಮಾತೇ ಹೊರಡಲಿಲ್ಲ ; ಹಾಗೇ ಲೇಖಕ ಕಟ್ಪಾಡಿ ಅವರಿಗೂ ಇದೆಲ್ಲ ಹೇಳುವಾಗ ಕಣ್ಣೀರು ಹರಿದು ಬಿಟ್ಟಿತು. ನಿಜಕ್ಕೂ ಥಿಯೇಟರ್ ಸ್ತಬ್ಧ.. ಮಾಧ್ಯಮ ಮಿತ್ರರೂ,ಗೆಳೆಯರು,ಅಭಿಮಾಗಳು ಮೂಕರಾದರು.ಭಾವುಕನಾದ ನನಗೂ ಕಣ್ಣಂಚಿನಲಿ ನೀರು. ಏನಿದು? ಒಂದು ಕಥೆ ಇಷ್ಟೊಂದು ಪರಿಣಾಮ ಬೀರಬಲ್ಲದು ಎನ್ನುವದಕ್ಕೂ ಇದು ಸಾಕ್ಷಿಯಾಯ್ತು.
ಅರ್ಜುನ್ ಜನ್ಯ ನಿರ್ದೇಶನದ ‘45’ ಚಿತ್ರಕ್ಕೆ ಕೌಸ್ತುಭ ಮಣಿ ನಾಯಕಿ
ಇನ್ನು ಮೌಲ್ವಿ ಸಲೀಂ ಗೆ ಮಾತೇ ಬರಲಿಲ್ಲ. ಈ ಚಿತ್ರದ ಸಾಂಗ್ ಇವರ ಆಳಕ್ಕೆ ಇಳಿದಿತ್ತು. ಇಂಥದು ನೋಡುವ ಅರಗಿಸಕೊಳ್ಳುವ ಭಾಗ್ಯ ನನ್ನದಾಗಿದ್ದು ಕಾಕತಾಳಿಯೇ ಇರಬೇಕು. ಸದ್ಗುರುವಿನ ದಯೆ ಕೂಡ.. ಅಧ್ಯಾತ್ಮಕ ಚಿಂತಕ ಸ್ವಾಮಿ ನಾರಾಯಣ ಸರಸ್ವತಿ ಅವರು ಇಡೀ ಚಿತ್ರ ತಂಡಕ್ಕೆ ಶುಭ ಹರಸಿದರು. ಸಂಗೀತ ನಿರ್ದೇಶಕ ಕೆ ಎಂ ಇಂದ್ರ ಇಡೀ ತಂಡದ ಸಾಹಸ ಅಲ್ಲದೆ ಚಿತ್ರದ ಮೊದಲ ಹಾಡು ಹಾಡಿದ ಸೋರೇಗಾವಿ ಅವರಿಗೆ ಅಭಿನಂದಿಸಿದರು.ಈ ಹಾಡು ಒಂದು ಲಕ್ಷ ಜನ ಒಂದೇ ದಿನದಲ್ಲಿ ಲೈಕ್ ಮಾಡಿದ್ದು ಆ ಖುಷಿ ಹಂಚಿಕೊಂಡರು. ನಿರ್ದೇಶಕ,ಷಡಕ್ಷರಿ ಅವರು ಇಂಥ ಸಣ್ಣ ಕತೆ ಸಿನೆಮಾ ಮಾಡುವದು ಬಹಳ ಕಷ್ಟ ಕಾರ್ಯ. ಅದನ್ನು ಈಗ ಆಗು ಮಾಡಿದ್ದೇವೆ. ಇದನ್ನು ಕನ್ನಡಿಗರು ಹೇಗೆ ಸ್ವೀಕಾರ ಮಾಡುವರೆಂಬುದು ನನಗೆ ಕುತೂಹಲವಿದೆ. ನನಗಂತೂ ತೃಪ್ತಿ ತಂದಿದೆ.
ಫಿಸಿಕ್ಸ್ ಟೀಚರ್ ಈಗ ಚಾಕೊಲೇಟ್ ಬಾಯ್
ಸಂಗಮೇಶ ಉಪಾಸೆ ಅವರ ಸತಿ ಕೂಡ ಚಿತ್ರದಲ್ಲಿ ರಂಜಾನ್ ಪತ್ನಿ..,ಪಾತ್ರದ ಆಳಹೊಕ್ಕು ನಟಿಸಿದ್ದಾರೆ. ಅವರೂ ತಮ್ಮ ಇಂಗಿತ ಸಭಿಕರ ಮಧ್ಯ ಇಟ್ಟರು. ಇದರ ನಿರ್ಮಾಪಕ ಆಪ್ತ.. ಮಲ್ಲಿಕಾರ್ಜುನ ಗೋಗಿ ಇಷ್ಟೊಂದು ಚಂದ ಮಾತಾಡಿದ್ದು ನನಗೆ ವಿಸ್ಮಯ ತಂದಿತು. ಈ ರಂಜಾನ್ ಇಂಗ್ಲಿಷ್, ಮಾಲಿಯಾಳ್,ತೆಲಗು,ತಮಿಳುದಲ್ಲೂ ಬರಲಿದೆ.ಬರುವ ಏಪ್ರಿಲ್ 21 ರಂದು ರಾಜ್ಯಾದಂತ ಬಿಡುಗಡೆ.
https://www.youtube.com/watch?v=197vrRXGhOY&ab_channel=SQUAREREELSTUDIO