ಯಶಸ್ವಿ ಸಿನಿಮಾ ನಿರ್ಮಾಪಕ, ಮಾಧ್ಯಮ ಲೋಕದ ದಿಗ್ಗಜ, ಕ್ರಿಯಾಶೀಲ ಉದ್ಯಮಿ ರಾಮೋಜಿ ರಾವ್ ನಿನ್ನೆ (ಜೂನ್ 8ಕ್ಕೆ) ನಿಧನ ಹೊಂದಿದ್ದಾರೆ. ರಾಮೋಜಿ ರಾವ್ ಕೆಲವು ಕನ್ನಡ ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. 1983 ರಲ್ಲಿ ಉಷಾಕಿರಣ್ ಮೂವೀಸ್ ಹೆಸರಿನ ನಿರ್ಮಾಣ ಸಂಸ್ಥೆ ಆರಂಭ ಮಾಡಿದರು. ನಾಲ್ಕು ದಶಕಗಳ ಕಾಲ ರಾಮೋಜಿ ರಾವ್ ಸಿನಿಮಾ ನಿರ್ಮಾಣ ಮಾಡುತ್ತಲೇ ಬಂದರು. ಹಲವಾರು ಸೂಪರ್-ಡೂಪರ್ ಹಿಟ್ ತೆಲುಗು ಸಿನಿಮಾಗಳ ನಿರ್ಮಿಸಿದ ರಾಮೋಜಿ ರಾವ್, ಕೆಲವು ಸೂಪರ್ ಹಿಟ್ ಕನ್ನಡ ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದ್ದಾರೆ.ಇದನ್ನೂ ಓದಿ:ದೀಕ್ಷಿತ್ ಶೆಟ್ಟಿ ಅಭಿನಯದ “ಬ್ಯಾಂಕ್ of ಭಾಗ್ಯಲಕ್ಷ್ಮಿ” ಚಿತ್ರದ ಅನಿಮೇಷನ್ ಟೀಸರ್ ಗೆ ಮೆಚ್ಚುಗೆಯ ಮಹಾಪೂರ .
ಕನ್ನಡದಲ್ಲಿ ರಾಮೋಜಿ ರಾವ್ ಅವರು ಮೊದಲಿಗೆ ನಿರ್ಮಿಸಿದ್ದು ಪ್ರಭುದೇವ ಸಹೋದರ ಪ್ರಸಾದ್ ನಾಯಕನಾಗಿ ನಟಿಸಿದ ‘ಚಿತ್ರ’ ಸಿನಿಮಾ. ಈ ಸಿನಿಮಾ ತೆಲುಗಿನ ‘ಚಿತ್ರಂ’ ರೀಮೇಕ್. ತೆಲುಗಿನಲ್ಲಿಯೂ ಸಹ ಉಷಾಕಿರಣ್ ಮೂವೀಸ್ನಿಂದಲೇ ಈ ಸಿನಿಮಾ ನಿರ್ಮಿಸಲಾಗಿತ್ತು. ತೆಲುಗು, ಕನ್ನಡ ಎರಡರಲ್ಲೂ ಸೂಪರ್ ಹಿಟ್ ಆಯ್ತು ಈ ಸಿನಿಮಾ. ಅದಾದ ಬಳಿಕ 2002 ರಲ್ಲಿ ‘ನಿನಗಾಗಿ’ ಸಿನಿಮಾ ನಿರ್ಮಾಣ ಮಾಡಿದರು. ಈ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿದರೆ, ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸಿ ಇಬ್ಬರೂ ಸ್ಟಾರ್ಗಳಾದರು.
ನಿನಗಾಗಿ ಸಿನಿಮಾ ಸಹ ಅವರದ್ದೇ ನಿರ್ಮಾಣದ ತೆಲುಗು ಸಿನಿಮಾ ‘ನುವ್ವೆ ಕಾವಾಲಿ’ ರೀಮೇಕ್. ಆ ಸಿನಿಮಾದಲ್ಲಿಯೂ ಹೊಸಬರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು ರಾಮೋಜಿ ರಾವ್. ಬಳಿಕ ‘ಸಿಕ್ಸರ್’ ಹೆಸರಿನ ನಿರ್ಮಾಣ ಮಾಡಿದರು. ಪ್ರಜ್ವಲ್ ದೇವರಾಜ್ ಅವರ ಮೊದಲ ಸಿನಿಮಾ ಅದಾಗಿತ್ತು. ಆ ಸಿನಿಮಾ ಸಹ ಸೂಪರ್ ಹಿಟ್ ಆಯ್ತು. ರಾಮೋಜಿ ರಾವ್ ನಿರ್ಮಾಣ ಮಾಡಿದ ಏಕೈಕ ಒರಿಜಿನಲ್ ಕನ್ನಡ ಸಿನಿಮಾ ಇದಾಗಿತ್ತು.ಇದನ್ನೂ ಓದ:ಐರಾ- ಯಥರ್ವ್ಗೆ ಬೊಂಬಾಟ್ ಗಿಫ್ಟ್ ಕಳಿಸಿದ ‘ಕಲ್ಕಿ’ ಮಾಮ ಪ್ರಭಾಸ್
2009 ರಲ್ಲಿ ‘ಸವಾರಿ’ ಸಿನಿಮಾ ನಿರ್ಮಾಣ ಮಾಡಿದರು. ಈ ಸಿನಿಮಾ ಸಹ ತೆಲುಗಿನ ‘ಗಮ್ಯಂ’ ಸಿನಿಮಾ ರೀಮೇಕ್ ಆಗಿತ್ತು. ‘ಸವಾರಿ’ ಬಳಿಕ ಇನ್ಯಾವುದೇ ಕನ್ನಡ ಸಿನಿಮಾವನ್ನು ರಾಮೋಜಿ ರಾವ್ ನಿರ್ಮಾಣ ಮಾಡಲಿಲ್ಲ. ಅಲ್ಲದೆ 2015 ರ ಬಳಿಕ ಯಾವುದೇ ತೆಲುಗು ಸಿನಿಮಾವನ್ನು ಸಹ ನಿರ್ಮಾಣ ಮಾಡಲಿಲ್ಲ ರಾಮೋಜಿ ರಾವ್ ಅವರು. ಪ್ರೇಕ್ಷಕರ ಅಭಿರುಚಿ ಬದಲಾಗುತ್ತಿದ್ದಂತೆ ರಾಮೋಜಿ ರಾವ್ ಅವರು ಸಿನಿಮಾ ನಿರ್ಮಾಣ ನಿಲ್ಲಿಸಿ ಬೇರೆ ಉದ್ಯಮಗಳ ಕಡೆಗೆ ಗಮನ ಹರಿಸಿದರು.