ಸಂಕ್ರಾಂತಿ ಹಬ್ಬ ಸಮೀಪಿಸಿದೆ. ನಾಡಿನೆಲ್ಲೆಡೆ ಎಳ್ಳು ಬೆಲ್ಲ ಬೀರಿ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಣೆ ಮಾಡುತ್ತಾರೆ. ಈಗಾಗಲೇ ಎಳ್ಳು-ಬೆಲ್ಲ, ಕಬ್ಬಿನ ಮಾರಾಟ ಜೋರಾಗಿದೆ. ಈ ಹಬ್ಬ ಆಚರಣೆ ಮಾಡುವುದಕ್ಕೆ ರಾಮ್ ಚರಣ್ ಹಾಗೂ ಉಪಾಸನಾ ಬೆಂಗಳೂರಿಗೆ ಬಂದಿಳಿದಿದ್ದಾರೆ.
ತಮ್ಮ ಮುದ್ದಾದ ಮಗುವಿನೊಂದಿಗೆ ಹೈದ್ರಾಬಾದ್ ಏರ್‌ಪೋರ್ಟ್‌ನಿಂದ ಬೆಂಗಳೂರು ಏರ್‌ಪೋರ್ಟ್ ತಲುಪಿದ್ದಾರೆ. ಈ ವೇಳೆ ಕ್ಯಾಪ್ಚರ್ ಆಗಿರುವ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಬಹುಬೇಡಿಕೆಯ ನಟರಾಗಿದ್ದರು, ರಾಮ್ ಚರಣ್ ಪಕ್ಕಾ ಫ್ಯಾಮಿಲಿ ಮ್ಯಾನ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಿನಿಮಾಗಳ ಬ್ಯುಸಿ ಶೆಡ್ಯೂಲ್‌ನಲ್ಲಿಯೂ ಕುಟುಂಬಕ್ಕೆ ಸಮಯ ನೀಡುತ್ತಾರೆ. ಇದೀಗ ಮಗಳು ಕ್ಲಿನ್‌ಕಾರಾ ಹಾಗೂ ಪತ್ನಿ ಜೊತೆಗೆ ಸಂಕ್ರಾಂತಿ ಆಚರಿಸುವುದಕ್ಕೆ ಬೆಂಗಳೂರು ಬಂದಿದ್ದಾರೆ.
ಉಪಾಸನಾ ತಮ್ಮ ಮುದ್ದು ನಾಯಿಮರಿಯನ್ನು ಜೊತೆಗೆ ತಂದಿದ್ದಾರೆ. ಪಾಪರಾಜಿಗಳಿಗೆ ಮಗಳ ಮುಖ ಕಾಣದಂತೆ ತಂದೆ ರಾಮ್ ಚರಣ್ ಕವರ್ ಮಾಡಿಕೊಂಡಿದ್ದಾರೆ. ಸಂಕ್ರಾಂತಿ ಹಬ್ಬವನ್ನು ಬೆಂಗಳೂರಿನಲ್ಲಿ ಆಚರಿಸಿದ ಬಳಿಕ, ಜನವರಿ 22ಕ್ಕೆ ರಾಮ ಮಂದಿರ ಉದ್ಘಾಟನೆ ಕಾರ್ಯದಲ್ಲೂ ಈ ದಂಪತಿ ಭಾಗಿಯಾಗಲಿದ್ದಾರೆ. ಹೀಗಾಗಿ 22ರಂದು ಅಯೋಧ್ಯೆಗೆ ತೆರಳಲಿದ್ದಾರೆ. ರಾಮಮಂದಿರ ಉದ್ಘಾಟನೆಯ ಆಹ್ವಾನ ಬಂದಿರುವ ಬಗ್ಗೆ ಈಗಾಗಲೇ ರಾಮ್ ಚರಣ್ ಮಾಹಿತಿ ನೀಡಿದ್ದಾರೆ.