Sandalwood Leading OnlineMedia

 ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜ ಈಗ ಮೈಸೂರಿನಲ್ಲಿದ್ದಾರೆ. ಖಾಸಗಿ ಜೆಟ್ ನಲ್ಲಿ ಅವರು ಸ್ಟೈಲಿಶ್ ಲುಕ್ ನಲ್ಲಿ ಮೈಸೂರಿಗೆ ಬಂದಿಳಿದಿದ್ದಾರೆ.

ರಾಮ್ ಚರಣ್ ಅಭಿನಯದ ಸಿನಿಮಾ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಶೂಟಿಂಗ್ ನಡೆಯುತ್ತಿದೆ. ಈ ಕಾರಣಕ್ಕೆ ಚಿತ್ರೀಕರಣದಲ್ಲಿ ಭಾಗಿಯಾಗಲು ಅವರು ತಮ್ಮ ಖಾಸಗಿ ಜೆಟ್ ನಲ್ಲಿ ಸಾಂಸ್ಕೃತಿಕ ನಗರಿಗೆ ಬಂದಿಳಿದಿದ್ದಾರೆ.
ಗೇಮ್ ಚೇಂಜರ್ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದ್ದು, ರಾಮ್ ಚರಣ್ ಮತ್ತು ಕಿಯಾರಾ ಈ ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ.
ಇತ್ತೀಚೆಗೆ ಚಿತ್ರೀಕರಣದ ದೃಶ್ಯ ಸೋರಿಕೆ ಮಾಡಿದ ವಿಚಾರದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಹೀಗಾಗಿಯೇ ಚಿತ್ರೀಕರಣ ಮೈಸೂರಿಗೆ ಶಿಫ್ಟ್ ಆಗಿರಬಹುದು ಎನ್ನಲಾಗಿದೆ.ರಾಮ್ ಚರಣ್ ಸಿನಿಮಾ ಎಂದರೆ ಅಭಿಮಾನಿಗಳಲ್ಲಿ ಕುತೂಹಲವಿರುತ್ತದೆ.  ಈ ನಡುವೆ ಸೋರಿಕೆ ಕಾಟದಿಂದ ಚಿತ್ರತಂಡ ಬೆಸತ್ತಿದೆ. ನಿರ್ದೇಶಕ  ಶಂಕರ್ ಗೆ ಇದು ತೆಲುಗಿನಲ್ಲಿ ಮೊದಲ ಸಿನಿಮಾ. ಹೀಗಾಗಿ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿದೆ.

Share this post:

Related Posts

To Subscribe to our News Letter.

Translate »