`ಕಿರಿಕ್ ಪಾರ್ಟಿ’ 2 ಮಾಡೋಕೆ ರೆಡಿಯಾದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ
ಕಿರಿಕ್ ಪಾರ್ಟಿ… ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆ ಸೃಷ್ಟಿಸಿದ ಸಿನಿಮಾ. ಬಾಕ್ಸಾಫೀಸ್ ಧೂಳಿಪಟ ಮಾಡಿದ್ದ ಈ ಸಿನಿಮಾ ಮೂಲಕ ಅನೇಕ ಹೊಸ ಪ್ರತಿಭೆಗಳು ಬೆಳಕಿಗೆ ಬಂದಿದ್ದವುರಕ್ಷಿತ್ ಶೆಟ್ಟಿ ಕೆರಿಯರ್‌ನ ದಿಕ್ಕನ್ನೇ ಬದಲಿಸಿದ ಸಿನಿಮಾ `ಕಿರಿಕ್ ಪಾರ್ಟಿ’ ಕಥೆಯನ್ನ ಎಲ್ಲರೂ ನೋಡಿ ಮೆಚ್ಚಿಕೊಂಡಿದ್ದರು.
ಕರ್ಣ ಮತ್ತು ಸಾನ್ವಿ ಲವ್‌ಸ್ಟೋರಿಯಿಂದ ಹಿಡಿದು ಹಾಡುಗಳು ಸೂಪರ್ ಡೂಪರ್ ಹಿಟ್ ಆಗಿದ್ದವು. ಈ ಚಿತ್ರದಿಂದ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಸಿನಿ ಬದುಕೆ ಬದಲಾಗಿತ್ತು. ಈಗ ರಶ್ಮಿಕಾ ನ್ಯಾಷನಲ್ ಸ್ಟಾರ್ ಆಗಿ ಮಿಂಚ್ತಿದ್ದಾರೆ. ಜತೆಗೆ ರಕ್ಷಿತ್ ಶೆಟ್ಟಿ ಕೂಡ ಬಹುಬೇಡಿಕೆಯ ನಟನಾಗಿ ಹೊರಹೊಮ್ಮಿದ್ದರು. ಇಷ್ಟೇಲ್ಲಾ ಮೋಡಿ ಮಾಡಿರುವ `ಕಿರಿಕ್ ಪಾರ್ಟಿ’ ಚಿತ್ರದ ಸೀಕ್ವೆಲ್‌ಗೆ ಸಕಲ ಸಿದ್ಧತೆ ನಡೆಯುತ್ತಿದೆ.
ಕಾಲೇಜ್ ಕಥೆಯನ್ನ ತೆರೆಯ ಮೇಲೆ ಎಳೆ ಎಳೆಯಾಗಿ ತೋರಿಸಿಕೊಟ್ಟ ಸ್ಯಾಂಡಲ್‌ವುಡ್‌ನ ಬ್ಲಾಕ್ ಬಸ್ಟರ್ ಸಿನಿಮಾ `ಕಿರಿಕ್ ಪಾರ್ಟಿ’ ಟೀಮ್‌ನಿಂದ ಈಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಕಿರಿಕ್ ಪಾರ್ಟಿ ಸೀಕ್ವೆಲ್ ಮಾಡೋಕೆ ರಕ್ಷಿತ್ ಶೆಟ್ಟಿ ಆ್ಯಂಡ್ ಟೀಮ್ ಯೋಜನೆ ಹಾಕಿಕೊಂಡಿದೆ. ಹೊಚ್ಚ ಹೊಸ ಕಥೆಯ ಜತೆ ಹೊಸ ಪಾತ್ರ ವರ್ಗ ಕೂಡ ಇರಲಿದೆ. ತೆರೆಮರೆಯಲ್ಲಿ ಚಿತ್ರಕ್ಕಾಗಿ ಸಕಲ ತಯಾರಿ ನಡೆಯುತ್ತಿದೆ.