Sandalwood Leading OnlineMedia

ಸೋಶಲ್ ಮಿಡಿಯಾ ವದಂತಿಗಳಿಗೆ ಉತ್ತರ ಕೊಟ್ಟ ರಕ್ಷಿತ್ ಶೆಟ್ಟಿ!

ಸದ್ಯ ತಾವು ಯಾವ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ, ಮುಂದಿನ ತಮ್ಮ ಸಿನಿಮಾಗಳು ಯಾವುದು ಎಂಬ ಬಗ್ಗೆ ರಕ್ಷಿತ್ ಶೆಟ್ಟಿ ಮಾಹಿತಿ  ನೀಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮುಗಿದ ಬಳಿಕ ನನ್ನ ಸಿನಿಮಾ ಲೈನ್ಅಪ್ಹೀಗಿರಲಿದೆ.. ರಿಚರ್ಡ್ಆಂಟನಿ, ಪುಣ್ಯಕೋಟಿ 1, ಪುಣ್ಯಕೋಟಿ 2 ಮತ್ತು ಮಿಡ್ನೈಟ್ಟು ಮೋಕ್ಷ ನಾಲ್ಕು ಸಿನಿಮಾಗಳಿಗೆ ನಾನು ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದೇನೆ. ಸದ್ಯಕ್ಕೆ ಕಿರಿಕ್ಪಾರ್ಟಿ 2 ಇಲ್ಲ. ಆದರೆ, ಸಿನಿಮಾ ಬಗ್ಗೆ ಬೇರೆಯದೇ ಆಲೋಚನೆ ಇದೆ. ಸೋಷಿಯಲ್ಮೀಡಿಯಾದಲ್ಲಿ ಹರಿದಾಡುತ್ತಿರುವುದೆಲ್ಲ ನಿಜವಲ್ಲ..” ಎಂದಿದ್ದಾರೆ.

‘ಅಯಾಲಿ’ ಸೀರೀಸ್ಗೆ ದುಲ್ಕರ್ ಸಲ್ಮಾನ್, ವಿಜಯ್ ಸೇತುಪತಿ ಸೇರಿದಂತೆ ಹಲವರಿಂದ  ಪ್ರಶಂಸೆ

ಹೊಂಬಾಳೆ ಫಿಲಂಸ್ಜತೆಗೆ ರಿಚರ್ಡ್ಆಂಟನಿ ಸಿನಿಮಾಕ್ಕೂ ರಕ್ಷಿತ್ಹೆಚ್ಚು ಶ್ರಮ ವಹಿಸುತ್ತಿದ್ದಾರೆ. ತೆರೆಮರೆಯಲ್ಲಿ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ನಡುವೆ, ಕನ್ನಡದ ಜತೆಗೆ ಪರಭಾಷೆಯ ಸಿನಿಮಾಗಳಲ್ಲಿಯೂ ಅವರು ನಟಿಸಲಿದ್ದಾರೆ ಎಂಬೆಲ್ಲ ಸುದ್ದಿಯಾಗಿತ್ತು. ತಮಿಳಿನ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ದಳಪತಿ ವಿಜಯ್ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ ಎಂದೆಲ್ಲ ಹೇಳಲಾಗಿತ್ತು. ಇದೀಗ ಸುದ್ದಿಯ ಬಗ್ಗೆ ರಕ್ಷಿತ್ಮಾತನಾಡಿದ್ದಾರೆ. ಹರಿದಾಡಿದ ವದಂತಿಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ.

`ದಳಪತಿ 67′ ಚಿತ್ರಕ್ಕೆ ಲೋಕೇಶ್‌ ಕನಗರಾಜ್‌ ನಿರ್ದೇಶನ

ರಕ್ಷಿತ್ ಅವರು ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ರಿಚರ್ಡ್ ಆಂಟನಿ ಅವರ ಮುಂದಿನ ನಿರ್ದೇಶನದ ಸ್ಕ್ರಿಪ್ಟ್ನಲ್ಲಿ ಕೆಲಸ ಮಾಡುತ್ತಿದ್ದಾರೆಪುಣ್ಯಕೋಟಿ ಎರಡು ಭಾಗಗಳಲ್ಲಿ ಹೊರಬರಲಿದೆ. ಇದರ ನಂತರ, ಅವರು ಮಿಡ್ನೈಟ್ಟು ಮೋಕ್ಷ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ. ರಕ್ಷಿತ್ ಶೆಟ್ಟಿ ಚಿತ್ರ ಜೀವನದಲ್ಲಿ ಕಿರಿಕ್ ಪಾರ್ಟಿ ವಿಶೇಷವಾದ ಸಿನಿಮಾನೇ ಆಗಿದೆ. ಚಿತ್ರ ಹಿಟ್ ಆದ್ಮೇಲೆ ಪಾರ್ಟ್-2 ವಿಷಯವೂ ಹರಿದಾಡಿತ್ತು. ಅದೇ ವಿಷಯಕ್ಕೆ ಸಂಬಂಧಿಸಿದಂತೆ ರಕ್ಷಿತ್ ಶೆಟ್ಟಿ ಸ್ಪಷ್ಟವಾಗಿಯೇ ಈಗ ಹೇಳಿಕೊಂಡಿದ್ದಾರೆ. ಕಿರಿಕ್ ಪಾರ್ಟಿ-2 ಸಿನಿಮಾದ ಬಗ್ಗೆ ಬೇರೆ ಪ್ಲಾನ್ ಇದೆ. ಆದರೆ ಈಗ ಹರಿದಾಡುತ್ತಿರೋ ಸುದ್ದಿಗಳು ನಿಜ ಅಲ್ಲವೇ ಅಲ್ಲ. ಮುಂದೆ ಎಂದೂ ಇವು ನಿಜ ಆಗೋದೂ ಇಲ್ಲ. ಲವ್ ಯೂ ಆಲ್ ಅಂತಲೇ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

Share this post:

Related Posts

To Subscribe to our News Letter.

Translate »