Sandalwood Leading OnlineMedia

ಬ್ಯಾಚುಲರ್ ಪಾರ್ಟಿ ಕೊಡಲು ರೆಡಿಯಾದ ರಕ್ಷಿತ್ ಶೆಟ್ಟಿ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇದೀಗ ಬ್ಯಾಚುಲರ್ ಪಾರ್ಟಿ ಕೊಡಲು ರೆಡಿಯಾಗಿದ್ದಾರೆ. ನಿನ್ನೆಯೇ ಹೊಸ ಸುದ್ದಿ ಕೊಡುವುದಾಗಿ ಹೇಳಿದ್ದರು. ಅದೀಗ ನಿಜವಾಗಿದೆ.ಕಿರಿಕ್ ಪಾರ್ಟಿ ಸಿನಿಮಾ ಬಂದು ಏಳು ವರ್ಷವಾಗಿದೆ. ಆದರೆ ಇದುವರೆಗೆ ಪರಂವಾ ಸ್ಟುಡಿಯೋ ಕಡೆಯಿಂದ ಅಂತಹದ್ದೇ ಮತ್ತೊಂದು ಕಾಮಿಡಿ ಸಿನಿಮಾ ಬಂದಿಲ್ಲ ಎನ್ನುವುದು ಪ್ರೇಕ್ಷಕರ ಆರೋಪ. ಇದು ನಮ್ಮ ಕಿವಿಗೂ ಬಿದ್ದಿದೆ. ನಾಳೆಯೇ ನಿಮಗೆ ಅಪ್ ಡೇಟ್ ಕೊಡುತ್ತೇವೆ ಎಂದು ರಕ್ಷಿತ್ ಹೇಳಿದ್ದರು.
ಇದನ್ನೂ ಓದಿ  ಮನದಾಳವನ್ನು ಬಿಚ್ಚಿಟ್ಟ ಹಾಟ್ ನಟಿ ಕಂಗನಾ ರನಾವತ್

ಇದನ್ನು ಕೇಳಿ ಎಷ್ಟೋ ಜನ ಮತ್ತೆ ರಕ್ಷಿತ್ ಕಿರಿಕ್ ಪಾರ್ಟಿ ಪಾರ್ಟ್ 2 ಕೈಗೆತ್ತಿಕೊಳ್ಳುತ್ತಾರಾ ಎಂದು ಅಂದುಕೊಂಡಿದ್ದರು. ಆದರೆ ಇದು ಕಿರಿಕ್ ಪಾರ್ಟಿ ಅಲ್ಲ. ಈ ಬಾರಿ ಬ್ಯಾಚುಲರ್ ಪಾರ್ಟಿಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.ರಕ್ಷಿತ್ ನಿರ್ಮಾಣದಲ್ಲಿ ಮೂಡಿಬಂದಿರುವ ಬ್ಯಾಚುಲರ್ ಪಾರ್ಟಿ ಸಿನಿಮಾ ರೆಡಿಯಾಗಿದ್ದು ಸದ್ಯದಲ್ಲೇ ನಿಮ್ಮ ಮುಂದೆ ಬರಲಿದೆ ಎಂದು ಪ್ರಕಟಿಸಿದ್ದಾರೆ. ಕಿರಿಕ್ ಪಾರ್ಟಿಗೆ ಏಳು ವರ್ಷ ತುಂಬಿದ ಹಿನ್ನಲೆಯಲ್ಲಿ ಈಗ ಮತ್ತಷ್ಟು ಕ್ರೇಜಿಯಾಗಿ ಬ್ಯಾಚುಲರ್ ಪಾರ್ಟಿ ಬರಲಿದೆ ಎಂದಿದ್ದಾರೆ. ಜೊತೆಗೆ ಸಿನಿಮಾದ ಫಸ್ಟ್ ಲುಕ್ ಟೀಸರ್ ಕೂಡಾ ಬಿಡುಗಡೆ ಮಾಡಿದ್ದಾರೆ.
ಬ್ಯಾಚುಲರ್ ಪಾರ್ಟಿ ಸಿನಿಮಾ ಕಾಮಿಡಿ ಎಂಟರ್ ಟೈನರ್ ಆಗಿದ್ದು, ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್, ದಿಗಂತ್ ಮಂಚಾಲೆ, ಲೂಸ್ ಮಾದ ಯೋಗಿ, ಸಿರಿ ರವಿಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Share this post:

Related Posts

To Subscribe to our News Letter.

Translate »