Sandalwood Leading OnlineMedia

ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಬಗ್ಗೆ  ಪ್ರತಿಕ್ರಿಯಿಸಿದ ರಕ್ಷಿತ್ ಶೆಟ್ಟಿ 

ಕಿಡಿಗೇಡಿಗಳು ಬೇರೆ ಯುವತಿಯ ವಿಡಿಯೋಗೆ ರಶ್ಮಿಕಾ ಮಂದಣ್ಣ ಮುಖ ಅಂಟಿಸಿ ಇತ್ತೀಚೆಗೆ ವಿಡಿಯೋ ವೈರಲ್ ಮಾಡಿದ್ದರು. ಈ ಬಗ್ಗೆ ಸಾಕಷ್ಟು ಸೆಲೆಬ್ರೆಟಿಗಳು ದನಿ ಎತ್ತಿದ್ದರು. ಇದು ಪುನರಾವರ್ತನೆ ಆಗಬಾರದು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು, ಸಾಮಾಜಿಕ ಜಾಲತಾಣದಲ್ಲಿ ಇಂತಹ ಕೃತ್ಯ ನಡೆಯದಂತೆ ತಡೆಯಬೇಕು ಎಂದು ಆಗ್ರಹಿಸಿದ್ದರು.

ಇದನ್ನೂ ಓದಿ  ಬೆಂಗಳೂರಿನಲ್ಲಿ ನಟ ಲೂಸ್ ಮಾದ ಯೋಗಿ ತಮಿಳು ಭಾಷಣ: ಕ್ಷಮೆ ಕೇಳುವಂತೆ ಕನ್ನಡಿಗರ ಪಟ್ಟು

ರಶ್ಮಿಕಾ ಮಂದಣ್ಣ ತುಂಡು ಬಟ್ಟೆ ಧರಿಸಿ ಲಿಫ್ಟ್‌ ಪ್ರವೇಶಿಸುತ್ತಿರುವಂತೆ ಕಾಣುವ ವೀಡಿಯೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿತ್ತು. ಜರಾ ಪಟೇಲ್ ಎಂಬ ಯುವತಿಯ ವೀಡಿಯೋಗೆ ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ರಶ್ಮಿಕಾ ಮುಖ ಮಾರ್ಪ್‌ ಮಾಡಿ ತೇಲಿ ಬಿಡಲಾಗಿತ್ತು. ಕೆಲವರು ರಶ್ಮಿಕಾ ಮಂದಣ್ಣ ಇಷ್ಟು ಬೋಲ್ಡ್ ಆಗಿ ಬಟ್ಟೆ ಧರಿಸಿ ಕಾಣಿಸಿಕೊಳ್ಳುತ್ತಾರಾ? ಎಂದು ಅಚ್ಚರಿಗೊಂಡಿದ್ದರು. ಸೂಕ್ಷ್ಮವಾಗಿ ಗಮನಿಸಿದರೆ ಅದು ಫೇಕ್‌ ವಿಡಿಯೋ ಅನ್ನೋದು ಅರ್ಥವಾಗುತ್ತಿತ್ತು.
ಪತ್ರಕರ್ತ ಅಮಿತ್ ವೈರಲ್ ವಿಡಿಯೋ ಬಗ್ಗೆ ಮಾಹಿತಿ ನೀಡಿದ್ದರು. ನಟ ಅಮಿತಾಬ್ ಬಚ್ಚನ್ ಕೂಡ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ತೆಲುಗು ನಟ ನಾಗಚೈತನ್ಯ, ಗಾಯಕಿ ಚಿನ್ಮಯಿ, ನಟ ವಿಜಯ್ ದೇವರಕೊಂಡ ಸೇರಿದಂತೆ ಹಲವರು ರಶ್ಮಿಕಾ ಬೆಂಬಲಕ್ಕೆ ನಿಂತಿದ್ದರು. ರಶ್ಮಿಕಾ ಕೂಡ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಬೇಸರ ವ್ಯಕ್ತಪಡಿಸಿದ್ದರು. ಜೊತೆಗೆ ತಮಗೆ ಬೆಂಬಲವಾಗಿ ನಿಂತವರಿಗೆ ಧನ್ಯವಾದ ತಿಳಿಸಿದ್ದರು.

ಇದನ್ನೂ ಓದಿ  ಬೆಂಗಳೂರಿನಲ್ಲಿ ನಟ ಲೂಸ್ ಮಾದ ಯೋಗಿ ತಮಿಳು ಭಾಷಣ: ಕ್ಷಮೆ ಕೇಳುವಂತೆ ಕನ್ನಡಿಗರ ಪಟ್ಟು

ಈ ವಿಡಿಯೋಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನವೆಂಬರ್ 10ರಂದು ವಿಶೇಷ ಸೆಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ವರದಿಯಾಗಿತ್ತು. ಭಾರತೀಯ ದಂಡ ಸಂಹಿತೆ, 1860 ರ ಸೆಕ್ಷನ್ 465 ಮತ್ತು 469 (ಪ್ರತಿಷ್ಠೆಗೆ ಹಾನಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 66 ಸಿ ಮತ್ತು 66ಇ(ಗೌಪ್ಯತೆ ಉಲ್ಲಂಘನೆ) ಅಡಿಯಲ್ಲಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಬಿಹಾರ ಮೂಲದ 19 ವರ್ಷದ ಯುವಕನನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ  ಬಹುಕಾಲದ ಗೆಳತಿ ಜೊತೆ ವಾಸುಕಿ ವೈಭವ್ ಮದುವೆ..

ಇದೇ ವಿಚಾರಕ್ಕೆ ನಟಿಯರಾದ ರುಕ್ಮಿಣಿ ವಸಂತ್, ಚೈತ್ರಾ ಆಚಾರ್, ನಟ ಅಭಿಷೇಕ್ ಅಂಬರೀಶ್ ಸೇರಿದಂತೆ ಹಲವರಿಗೆ ಈ ಡೀಪ್ ಫೇಕ್ ವಿಡಿಯೋ ಬಗ್ಗೆ ಮಾಧ್ಯಮಗಳಿಂದ ಪ್ರಶ್ನೆ ಎದುರಾಗಿತ್ತು. ಎಲ್ಲರೂ ಇಂತಹ ಘಟನೆ ನಡೆಯಬಾರದು. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದಿದ್ದರು. ಇದೀಗ ನಡ ರಕ್ಷಿತ್ ಶೆಟ್ಟಿ ಕೂಡ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತೆಲುಗಿನ ಪ್ರೇಮ ಜರ್ನಲಿಸ್ಟ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
“ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ವಿಡಿಯೋ ವೈರಲ್ ಆಗುವ ಮುಂಚೆ ಅದು ಆಗಬೇಕು. ಯಾಕಂದರೆ ಏನು? ಬೇಕಾದರೂ ಆಗಬಹುದು. ಇಂತಹ ಸಾಫ್ಟ್‌ವೇರ್‌ಗಳು ಎಲ್ಲರ ಕೈಗೆ ಸಿಕ್ಕರೆ ಏನಾಗುತ್ತೆ? ಸೂಕ್ತ ನಿಯಮಗಳೊಂದಿಗೆ ಇಂತಹ ಸಾಫ್ಟ್‌ವೇರ್‌ಗಳು ಬರಬೇಕು. ಇಲ್ಲದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ” ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ರಕ್ಷಿತ್ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್- B’ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದಾರೆ. ಸಿನಿಮಾ ಪ್ರಚಾರಕ್ಕಾಗಿ ಸಿಂಪಲ್ ಸ್ಟಾರ್ ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಸದ್ಯ ಈ ಸಂದರ್ಶನದ ಪ್ರೋಮೊ ಮಾತ್ರ ರಿಲೀಸ್ ಆಗಿದ್ದು ಸಂಪೂರ್ಣ ಸಂದರ್ಶನ ಇನ್ನಷ್ಟೆ ಬರಬೇಕಿದೆ. ಈ ವಾರವೇ ಸಿನಿಮಾ 4 ಭಾಷೆಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ಬಳಿಕ ಇಬ್ಬರೂ ಪ್ರೀತಿಸಿ ಮದುವೆಗೆ ಮುಂದಾಗಿದ್ದರು. ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಕೂಡ ನಡೆದಿತ್ತು. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ ಎಂಗೇಜ್‌ಮೆಂಟ್ ಮುರಿದುಬಿದ್ದಿತ್ತು. ಬಳಿಕ ಇಬ್ಬರೂ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾದರು. ರಶ್ಮಿಕಾ ಈಗ ಟಾಲಿವುಡ್‌, ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ

 

Share this post:

Translate »