Sandalwood Leading OnlineMedia

ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ   ‘ಸಪ್ತ ಸಾಗರದಾಚೆ ಎಲ್ಲೋ’  ತಂಡದಿoದ  `ಡಬಲ್’ ಧಮಾಕ!    

ಸ್ಯಾಂಡಲ್​ವುಡ್ ಸಿಂಪಲ್ ಸ್ಟಾರ್​ ರಕ್ಷಿತ್ ಶೆಟ್ಟಿಯವರಿಗೆ ಇಂದು ಜೂನ್ 6 ಜನ್ಮದಿನದ ಸಂಭ್ರಮ. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ ಸಪ್ತ ಸಾಗರದಾಚೆ ಎಲ್ಲೋ(SSE)(Sapta Sagaradaache Ello Movie) 2 ಪಾರ್ಟ್​ಗಳಲ್ಲಿ ಜನರ ಮುಂದೆ ಬರಲಿದೆ ಎಂದು ಸ್ವತಃ ರಕ್ಷಿತ್ ಶೆಟ್ಟಿ ಮತ್ತು ಚಿತ್ರತಂಡ ಘೋಷಿಸಿದೆ.

ಜೂನ್ 15ಕ್ಕೆ SSE ಸಿನಿಮಾ ಬಿಡುಗಡೆ ದಿನ ಘೋಷಣೆಯಾಗಲಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 2 ಪಾರ್ಟ್​ಗಳಾಗಿ ತೆರೆ ಮೇಲೆ ಬರಲಿದೆ ಎಂದು ತಿಳಿಸಿದ್ದಾರೆ. ನಿಮ್ಮ ಮನು ಇಂದು ಸ್ಪೆಷಲ್ ಅನೌನ್ಸ್​ಮೆಂಟ್ ಮಾಡಲು ಬಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಸಮಯ, ಪ್ರೀತಿ ಮತ್ತು ಕನಸುಗಳನ್ನು ಸ್ಪಷ್ಟವಾಗಿ ಕೆತ್ತಿದ ಎಸ್‌ಎಸ್‌ಇ ಈಗ ಎರಡು ಭಾಗಗಳಲ್ಲಿ ನಿಮ್ಮ ಮುಂದೆ ಬರಲಿದೆ , ಸೈಡ್ ಎ ಮತ್ತು ಸೈಡ್ ಬಿ  ಚಿತ್ರೀಕರಣ ಮುಗಿದಿದೆ. ಈ ಸಿನಿಮಾದ ಎರಡೂ ಭಾಗಗಳ ಬಿಡುಗಡೆ ದಿನಾಂಕವನ್ನು ಜೂನ್​ 15 ರಂದು ಪ್ರಕಟಿಸಲಾಗುವುದು. ನೀವು ನಮ್ಮನ್ನು ಯಾವಾಗಲೂ ಪ್ರೀತಿಯಿಂದ ಸ್ವೀಕರಿಸುತ್ತೀರಿ ಎಂದು ನಾವು ಭಾವಿಸುತ್ತೇವೆ ಎಂದು ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದಾರೆ.

 

ಮನು-ಸುರಭಿ ಪ್ರೇಮಕಥೆ: ಸಪ್ತ ಸಾಗರದಾಚೆ ಸಿನಿಮಾ​ ಟೀಸರ್​ ರಿಲೀಸ್ ಆಗಿದ್ದು, ಟೀಸರ್​ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರೇಮಿಗಳ ದಿನದಂದು 36 ಸೆಕೆಂಡ್ ಇರುವ ಈ ಟೀಸರ್​ ನ್ನು ಬಿಡುಗಡೆ ಮಾಡಲಾಗಿತ್ತು. ಟೀಸರ್​ನಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್  ಮಾತ್ರ ಕಾಣಿಸಿಕೊಂಡಿದ್ದರು. ಮನು-ಸುರಭಿ ಪ್ರೇಮ ಕಥೆಯ ಝಲಕ್​ ನ್ನು ಟೀಸರ್​ ನಲ್ಲಿ  ಕಾಣಬಹುದಾಗಿದ್ದು, ಚಿತ್ರದ ಬಗ್ಗೆ ಸಿನಿಪ್ರೇಮಿಗಳಲ್ಲಿ ಅಪಾರ ನಿರೀಕ್ಷೆಯಿದೆ. ತೆರೆ ಮೇಲೆ ಸದಾ ಹೊಸತನವನ್ನು ತೋರಿಸುವ, ಹೊಸ ವಿಷಯಗಳಿಗಾಗಿ ಸದಾ ಮನ ತುಡಿಯುವ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ಜೋಡಿ ಈ ಬಾರಿ ಮೋಡಿ ಮಾಡುತ್ತಾ ಎಂದು ನೋಡಬೇಕಿದೆ. ನಿರ್ದೇಶಕ ಹೇಮಂತ್‌ ರಾವ್‌ ಮತ್ತು ರಕ್ಷಿತ್‌ ಶೆಟ್ಟಿ ಕಾಂಬಿನೇಷನ್‌ನಲ್ಲಿ ಸಪ್ತ ಸಾಗರದಾಚೆ ಎಲ್ಲೋಸಿನಿಮಾ ತಯಾರಾಗಿದೆ. ಸಿನಿಮಾದ ಶೂಟಿಂಗ್‌ ಬಹುತೇಕ ಮುಕ್ತಾಯಗೊಂಡಿದೆ. ಸಿನಿಮಾದಲ್ಲಿ ರಕ್ಷಿತ್‌ ಶೆಟ್ಟಿ ಮನುಪಾತ್ರ ಮಾಡಿದ್ದರೆ ನಟಿ ರುಕ್ಮಿಣಿ ವಸಂತ್ ಸುರಭಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 

Share this post:

Related Posts

To Subscribe to our News Letter.

Translate »