Sandalwood Leading OnlineMedia

ಕೊನೆಗೂ ಸಾಕಾರವಾಯ್ತು ರಕ್ಷಿತ್ ಶೆಟ್ಟಿ ಬಹುಕಾಲದ ಕನಸು!

ರಕ್ಷಿತ್ ಶೆಟ್ಟಿ  ನಟಿಸಿ, ನಿರ್ದೇಶನ ಮಾಡುತ್ತಿರುವ ರಿಚರ್ಡ್ ಆಂಟನಿ  ಸಿನಿಮಾದ ಶೂಟಿಂಗ್  ನಾಳೆಯಿಂದ ಶುರುವಾಗಲಿದೆ. ಮೇ 1ರಿಂದ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡುವುದಾಗಿ ಸ್ವತಃ ರಕ್ಷಿತ್ ಅವರೇ ಮಾಹಿತಿ ನೀಡಿದ್ದಾರೆ. ಮೊನ್ನೆ ಉಡುಪಿಯಲ್ಲಿ ಮತದಾನ ಮಾಡಿ, ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ನಮ್ ಟೀಮ್ ಉಡುಪಿ ತಲುಪಲಿದೆ. ಮೇ 1 ರಿಂದ ಚಿತ್ರೀಕರಣ ಶುರು ಮಾಡುತ್ತೇವೆ ಎಂದಿದ್ದಾರೆ. 1980-90 ರ ದಶಕದಲ್ಲಿ ನಡೆಯುವ ಕಥೆ ಇದಾಗಿದ್ದರಿಂದ ಆಯಾ ಕಾಲಘಟ್ಟವನ್ನು ಕಟ್ಟಿಕೊಡುವ ಪ್ರಯತ್ನವನ್ನೂ ಅವರು ಮಾಡಲಿದ್ದಾರಂತೆ. ಹಾಗಾಗಿ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದಾರಂತೆ. ಶೇಕಡಾ 50 ರಷ್ಟು ಚಿತ್ರೀಕರಣ ಉಡುಪಿ ಸುತ್ತಮುತ್ತ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

READ MORE ;

 “Family is My Weakness” -Ragini Dwivedi ; Chittara Exclusive

ಹಲವು ತಿಂಗಳ ಹಿಂದೆಯೇ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿತ್ತು.ರಕ್ಷಿತ್ ಶೆಟ್ಟಿ ನಟನೆಯಲ್ಲೇ ಬ್ಯುಸಿಯಾಗಿದ್ದರಿಂದ ಮುಹೂರ್ತಕ್ಕೆ ತಡವಾಗಿತ್ತು. ಸಪ್ತ ಸಾಗರದಾಚೆ ಶೂಟಿಂಗ್ ಮತ್ತು ಬಿಡುಗಡೆಯ ಎಲ್ಲ ಕೆಲಸಗಳನ್ನು ಮುಗಿಸಿ, ಸ್ಕ್ರಿಪ್ಟ್ ನಲ್ಲಿ ತೊಡಗಿದ್ದರು ರಕ್ಷಿತ್ ಶೆಟ್ಟಿ, ಈಗ ಸ್ಕ್ರಿಪ್ಟ್ ಕೆಲಸ ಕೂಡ ಬಹುತೇಕ ಮುಗಿದಿದೆ. ಈ ನಡುವೆ ಹೊಂಬಾಳೆ ಮತ್ತು ರಕ್ಷಿತ್ ನಡುವೆ ಬಿರುಕುಉಂಟಾಗಿದ್ದು, ಬೇರೊಂದು ಸಂಸ್ಥೆಯು ರಿಚರ್ಡ್ ಆಂಟನಿ ಚಿತ್ರವನ್ನು ನಿರ್ಮಾಣ ಮಾಡಲಿದೆ ಎನ್ನುವ ಸುದ್ದಿಯೂ ಹರಿದಾಡಿತ್ತು. ಈ ಕುರಿತು ಹೊಂಬಾಳೆ ಫಿಲ್ಮ್ಸ್ ಆಪ್ತರೇ ಹೇಳುವಂತೆ, ‘ಸಿನಿಮಾ ಮುಹೂರ್ತಕ್ಕೆ ಹೊಂಬಾಳೆಯೇ ತಯಾರಿ ಮಾಡಿಕೊಳ್ಳುತ್ತಿದೆ ಅಂದ ಮೇಲೆ ಈ ಪ್ರಶ್ನೆಯೇ ಅಪ್ರಸ್ತುತ’ ಎನ್ನುತ್ತಾರೆ.

Share this post:

Related Posts

To Subscribe to our News Letter.

Translate »