Sandalwood Leading OnlineMedia

ರಕ್ಷಿತ್ ಶೆಟ್ಟಿಯವರ ರಿಚರ್ಡ್ ಆಂಟನಿ ಮುಹೂರ್ತಕ್ಕೆ ಡೇಟ್ ಫಿಕ್ಸ್

ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಲಿರುವ ರಿಚರ್ಡ್ ಆಂಟನಿ ಸಿನಿಮಾದ ಮುಹೂರ್ತ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಎಲ್ಲಾ ಗೊಂದಲಗಳಿಗೂ ತೆರೆ ಬಿದ್ದಿದೆ.ರಕ್ಷಿತ್ ಶೆಟ್ಟಿ ನಿರ್ದೇಶಿಸಿದ್ದ ಮೊದಲ ಸಿನಿಮಾ ಉಳಿದವರು ಕಂಡಂತೆ. ಈ ಸಿನಿಮಾ ಅವರನ್ನು ಚಿತ್ರರಂಗದಲ್ಲಿ ಗುರುತಿಸುವಂತೆ ಮಾಡಿತ್ತು. ಇದೇ ಸಿನಿಮಾ ಮುಂದುವರಿದ ಭಾಗ ರಿಚರ್ಡ್ ಆಂಟನಿ ಮಾಡುವುದಾಗಿ ರಕ್ಷಿತ್ ಎರಡು ವರ್ಷದ ಹಿಂದೆಯೇ ಘೋಷಣೆ ಮಾಡಿದ್ದರು. ಇದಕ್ಕೆ ಹೊಂಬಾಳೆ ಫಿಲಂಸ್ ಬಂಡವಾಳ ಹೂಡುವುದಾಗಿ ಹೇಳಿತ್ತು. ಆದರೆ ಇತ್ತೀಚೆಗೆ ಹೊಂಬಾಳೆ ಫಿಲಂಸ್ ಆ ಪ್ರಾಜೆಕ್ಟ್ ಕೈ ಬಿಟ್ಟಿದೆ ಎಂಬ ಸುದ್ದಿ ಹರಿದಾಡಿತ್ತು.

ಈ ಸಿನಿಮಾಗೆ ರಕ್ಷಿತ್ 100 ಕೋಟಿ ಬಜೆಟ್ ಮಾಡಿಕೊಂಡಿದ್ದರು. ಆದರೆ ಇಷ್ಟು ಬಜೆಟ್ ಹಾಕಲು ಹೊಂಬಾಳೆ ಫಿಲಂಸ್ ಸಿದ್ಧವಿಲ್ಲ.  ಹೀಗಾಗಿ ರಿಚರ್ಡ್ ಆಂಟನಿ ಪ್ರಾಜೆಕ್ಟ್ ನ್ನು ಹೊಂಬಾಳೆ ಫಿಲಂಸ್ ಕೈ ಬಿಟ್ಟಿದೆ ಎಂದು ಸುದ್ದಿಯಾಗಿತ್ತು. ಆದರೆ ಈಗ ಇದೆಲ್ಲಾ ಸುಳ್ಳು ಹೊಂಬಾಳೆ ಫಿಲಂಸ್ ಚಿತ್ರಕ್ಕೆ ಬಂಡವಾಳ ಹಾಕಲಿದೆ ಎಂದು ಗೊತ್ತಾಗಿದೆ.

ರಿಚರ್ಡ್ ಆಂಟನಿಗೆ ಮುಹೂರ್ತ ಫಿಕ್ಸ್
ಮಾರ್ಚ್ 28 ಕ್ಕೆ ಉಳಿದವರು ಕಂಡಂತೆ ಸಿನಿಮಾ ಬಿಡುಗಡೆಯಾಗಿ 10 ವರ್ಷಗಳಾಗಲಿವೆ. ಇದೇ ದಿನಕ್ಕೆ ರಿಚರ್ಡ್ ಆಂಟನಿ ಮುಹೂರ್ತ ನಡೆಯಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ. 2014 ರಲ್ಲಿ ಉಳಿದವರು ಕಂಡಂತೆ ಸಿನಿಮಾ ರಿಲೀಸ್ ಆಗಿತ್ತು. ಅದಾಗಿ ಇಂದಿಗೆ 10 ವರ್ಷವಾಗಿದೆ. ಇದೀಗ ಮತ್ತೆ ರಕ್ಷಿತ್ ನಿರ್ದೇಶನಕ್ಕೆ ಮರಳುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

Share this post:

Related Posts

To Subscribe to our News Letter.

Translate »