Sandalwood Leading OnlineMedia

`ರಾಕ್ಷಸ’ನ ಅವತಾರದಲ್ಲಿ ಪ್ರಜ್ವಲ್! ಕನ್ನಡದಲ್ಲೊಂದು `ಹಾರಾರ್ ಟೈಂಲೂಪ್ ವರ್ಷನ್’ ಚಿತ್ರ

  • ರಾಕ್ಷಸನ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಪ್ರಜ್ವಲ್ ಸಜ್ಜು !
  • ಮೊದಲ ಬಾರಿಗೆ ಹಾರಾರ್ ಸಿನಿಮಾದಲ್ಲಿ ಡೈನಾಮಿಕ್‌ ಪ್ರಿನ್ಸ್
  • ಹಾರಾರ್ ಟೈಂ ಲೂಪ್ ಸಿನಿಮಾ ಮೂಲಕ ದಾಖಲೆ ಬರೆಯಲು ಸಜ್ಜಾದ ಪ್ರಜ್ವಲ್ ದೇವರಾಜ್
  • ಶಾನ್ವಿ ಎಂಟರ್ಪ್ರೈಸಸ್ ಅಡಿಯಲ್ಲಿ ಪ್ರದೀಪ್ ಮಹೀಶಿ ಪ್ರಸೆಂಟ್ಸ್ ನಲ್ಲಿ ದೀಪು ಬಿ ಎಸ್ ಮತ್ತು ನವೀನ್ ಗೌಡ ಹಾಗೂ ಮಾನಸ ಜಂಟಿಯಾಗಿ  ನಿರ್ಮಾಣ

ಇತ್ತೀಚಿನ ದಿನಗಳಲ್ಲಿ ನಟ ಪ್ರಜ್ವಲ್ ದೇವರಾಜ್ ವಿಭಿನ್ನ ರೀತಿಯ ಸಿನಿಮಾಗಳನ್ನ ಆಯ್ಕೆ ಮಾಡಿಕೊಳ್ಳೋದ್ರಲ್ಲಿ ಮುಂದಿದ್ದಾರೆ…ಇದೇ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಹಾರಾರ್ ಸಿನಿಮಾದಲ್ಲಿ ಕಾಣಿಸಿಕೊಳ್ತದ್ದಾರೆ. ಹಾರಾರ್ ಸಿನಿಮಾ ಮೂಲಕವೇ ಪ್ರಖ್ಯಾತಿ ಗಳಿಸಿರೋ ನಿರ್ದೇಶಕ ಲೋಹಿತ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ….ರಾಕ್ಷಸ ಸಿನಿಮಾ ಮೂಲಕ ಪ್ರಜ್ವಲ್ ಹಾಗೂ ಲೋಹಿತ್ ಹೊಸ ದಾಖಲೆ ಬರೆಯಲು ಸಿದ್ದರಾಗಿದ್ದಾರೆ..ಹೌದು ಇದೇ ಮೊದಲ ಬಾರಿಗೆ ವರ್ಲ್ಡ್ ಸಿನಿಮಾದಲ್ಲಿ ಹಾರಾರ್ ಟೈಂಲೂಪ್ ವರ್ಷನ್ ಟ್ರೈ ಮಾಡಿದ್ದಾರೆ ನಿರ್ದೇಶಕ ಲೋಹಿತ್…

 ‘ಕರಾವಳಿ’ಯಲ್ಲಿ ಪ್ರಜ್ವಲ್ ಅಭಿಮಾನಿಗಳಿಗೆ ತ್ರಿಬಲ್ ಧಮಾಕಾ?! ನಿರೀಕ್ಷೆ ಮೂಡಿಸುತ್ತಿದೆ ಗುರುದತ್ ಗಾಣಿಗ ನಿರ್ದೇಶನದ ಚಿತ್ರ

ಇನ್ನು ಶಾನ್ವಿ ಎಂಟರ್ಪ್ರೈಸಸ್ ಅಡಿಯಲ್ಲಿ ಪ್ರದೀಪ್ ಮಹೀಶಿ ಪ್ರಸೆಂಟ್ಸ್ ನಲ್ಲಿ ದೀಪು ಬಿ ಎಸ್ ಮತ್ತು ನವೀನ್ ಗೌಡ ಹಾಗೂ ಮಾನಸ ಜಂಟಿಯಾಗಿ ರಾಕ್ಷಸ ಸಿನಿಮಾ ನಿರ್ಮಾಣ ಮಾಡಿದ್ದಾರೆ …ನೋಬಿನ್ ಪೌಲ್ ಸಂಗೀತ ನಿರ್ದೇಶನ ಜೇಬಿನ್ ಪಿ ಜೋಕಬ್ ಕ್ಯಾಮೆರಾ ವರ್ಕ್ ಸಿನಿಮಾಗಿದೆ…ಸುಮಾರು 55 ದಿನಗಳ ಕಾಲ ರಾಕ್ಷಸ ಸಿನಿಮಾ ಚಿತ್ರೀಕರಣ ಮಾಡಲಾಗಿದ್ದು ಸಂಪೂರ್ಣ ಸಿನಿಮಾ ಚಿತ್ರೀಕರಣ ರಾಮೋಜಿ ರಾವ್ ಫಿಲ್ಮಂ ಸಿಟಿಯಲ್ಲಿ ಮಾಡಿರೋದು ವಿಶೇಷ…

 `ಸ್ಟ್ರಾಂಗ್’ ಕಥೆ ಹಿಂದೆ `ಸಿಂಪಲ್’ ಸುನಿ?! ‘ದೇವರು ರುಜು ಮಾಡಿದನು’ ಚಿತ್ರ ಶೀಘ್ರದಲ್ಲೇ ಆರಂಭ

ಪ್ರಜ್ವಲ್ ಜೊತೆಯಾಗಿ ಅರುಣ್ ರಾಥೋಡ್, ಶ್ರೀಧರ್,ಗೌತಮ್, ಸೋಮಶೇಖರ್, ವಿಹಾನ್ ಕೃಷ್ಣ ಜಯಂತ್ ಇನ್ನು ಅನೇಕರು ಅಭಿನಯಿಸಿದ್ದಾರೆ…ಸದ್ಯ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಿದ್ದವಾಗಿರೋ ರಾಕ್ಷಸ ಸಿನಿಮಾ.ಪ್ರಜ್ವಲ್ ಹುಟ್ಟುಹಬ್ಬದ ವಿಶೇಷವಾಗಿ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಸಿನಿಮಾತಂಡ ಚಿತ್ರದ ಪ್ರಚಾರದ ಕೆಲಸ ಶುರು ಮಾಡಿದೆ..ಇಷ್ಟು ದಿನಗಳ ಕಾಲ ಕಮರ್ಷಿಯಲ್ ಚಿತ್ರಗಲ್ಲಿ ಕಾಣಿಸಿಕೊಳ್ತಿದ್ದ ಪ್ರಜ್ವಲ್ ಇದೇ ಮೊದಲ ಬಾರಿಗೆ ವಿಭಿನ್ನವಾಗಿ ಹಾರಾರ್ ಲುಕ್ ನಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

Share this post:

Related Posts

To Subscribe to our News Letter.

Translate »