Sandalwood Leading OnlineMedia

ಸಂಗೀತ ಲೋಕದ ದಿಗ್ಗಜ ರಾಜೇಶ್ ಕೃಷ್ಣನ್ ಅವರಿಗೆ ಇಂದು ಜನ್ಮಮದಿನದ ಸಂಭ್ರಮ.

ಸಂಗೀತ ಲೋಕದ ದಿಗ್ಗಜ ರಾಜೇಶ್ ಕೃಷ್ಣನ್ ಅವರಿಗೆ ಇಂದು ಜನ್ಮಮದಿನದ ಸಂಭ್ರಮ.

ಸ್ಯಾಂಡಲ್​ವುಡ್​ನ ಖ್ಯಾತ ಹಿನ್ನಲೆ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಇಂದು ಜನ್ಮಮದಿನದ ಸಂಭ್ರಮ. ನೂರಾರು ಹಾಡುಗಳಿಗೆ ಕಂಠದಾನ ಮಾಡುವ ಮೂಲಕ ಕನ್ನಡದ ಸನಿಪ್ರೇಮಿಗಳ ಕಿವಿಗಳಿಗೆ ಇಂಪನ್ನು ನೀಡಿರುವ ರಾಜೇಶ್​ ಅವರಿಗೆ ಹುಟ್ಟುಹಬ್ಬದ ಸಂತಸದಲ್ಲಿದ್ದು, ಅಭಿಮಾನಿಘಲು ಸಾಮಾಜಿಕ ಜಾಲತಾಣಗಳಲ್ಲಿ ಶುಭಕೋರುತ್ತಿದ್ದಾರೆ.

       

ರಾಜೇಶ್ ಕೃಷ್ಣನ್ ಅವರು 3 ಜೂನ್ 1973 ತಮಿಳುನಾಡಿನಲ್ಲಿ ರಂಗನಾಥನ್ ಮತ್ತು ಮೀರಾ ಕೃಷ್ಣನ್ ಅವರ ಪುತ್ರರಾಗಿ ಜನಿಸಿದರು. ಆದರೆ ಬಾಲ್ಯದ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ.

ರಾಜೇಶ್ ಚಿಕ್ಕ ವಯಸಿನಲ್ಲೇ ತಾಯಿ ಬಳಿಯೇ ಇವರು ಸಂಗೀತವನ್ನು ಕಲಿತು ಇಂದು ಕನ್ನಡ ಚಿತ್ರರಂಗದಲ್ಲಿ ಖ್ಯಾತ ಗಾಯಕನಾಗಿ ಮಿಂಚುತ್ತಿದ್ದಾರೆ.

1991 ರಲ್ಲಿ ಬಿಡುಗಡೆಗೊಂಡ ಗೌರಿ ಗಣೇಶ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹಿನ್ನಲೆ ಗಾಯಕರಾಗಿ ಹೊರ ಹೊಮ್ಮಿದರು.ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಹಂಸಲೇಖ, ಮನೋಮೂರ್ತಿ, ಕಲ್ಯಾಣ್, ಹೀಗೆ ಹಲವಾರು ನಿರ್ದೇಶಕರ ಚಿತ್ರಗಳಲ್ಲಿ ತಮ್ಮ ಕಂಠಸಿರಿಯಿಂದ ಅಪಾರ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಇವರೆಗೂ 3000ಕ್ಕೂ ಹೆಚ್ಚು ಕನ್ನಡ, 500ಕ್ಕೂ ಹೆಚ್ಚು  ತೆಲುಗು, 250 ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ಹಿನ್ನಲೆ ಗಾಯಕರಾಗಿ ಹಾಡಿ ಸೈ ಅನಿಸಿಕೊಂಡಿದ್ದಾರೆ.


ಅನೇಕ ಕಾರ್ಯಕ್ರಮಗಳಲ್ಲು ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡ ಚಿತ್ರದಲ್ಲೂ ಇವರು ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.ಕೇವಲ ಹಾಡುಮಾತ್ರವಲ್ಲದೆ ಇವರು ಕನ್ನಡದಲ್ಲಿ ಗಾಳಿಪಟ, ಸಂತೋಷ್ ಚಿತ್ರಗಳಲ್ಲಿ ಮತ್ತು ತೆಲುಗಿನಲ್ಲಿ ಓರೆ ನೀ ಪ್ರೇಮ ಬಂಗಾರಂ ಕಾನು ಚಿತ್ರಗಳಲ್ಲಿಯೂ ನಟಿದ್ದಾರೆ.

ಜೊತೆಗೆ ಅನೇಕ ಚಿತ್ರಗಳಲ್ಲಿ ಡಬ್ಬಿಂಗ್ ಸಹ ಮಾಡಿದ್ದಾರೆ. ಅವರು ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಪ್ರಸಿದ್ದ ಸರೆಗಮಪ ಮತ್ತು ಎದೆ ತುಂಬಿ ಹಾಡುವೆನು ರಿಯಾಲಿಟಿ ಶೊ ಗಳಲ್ಲಿ ಜಡ್ಜ್​ ಆಗಿ ಸಹ ಗುರುತಿಸಿಕೊಂಡಿದ್ದಾರೆ.

Share this post:

Translate »