ಟಾಲಿವುಡ್ ಸ್ಟಾರ್ ನಿರ್ದೇಶಕ ರಾಜಮೌಳಿ ಇತ್ತೀಚೆಗೆ ಜಾಹೀರಾತುವೊಂದರಲ್ಲಿ ನಟಿಸಿದ್ದರು. ಇದೀಗ ಆ ಜಾಹೀರಾತು ರಿಲೀಸ್ ಆಗಿ ಸದ್ದು ಮಾಡ್ತಿದೆ. ಬಹಳ ವಿಭಿನ್ನವಾಗಿ ಇದನ್ನು ಡಿಸೈನ್ ಮಾಡಲಾಗಿತ್ತು. ಬ್ಲೇಸರ್ ತೊಟ್ಟು ಜಕ್ಕಣ್ಣ ಮಿಂಚಿದ್ದಾರೆ. ಚಿತ್ರವೊಂದಕ್ಕೆ ಮೌಳಿ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಹಾಗಾದ್ರೆ ಈ ಜಾಹೀರಾತಿಗೆ ಎಷ್ಟು ಕೋಟಿ ಕೇಳಿದ್ರು ಎನ್ನುವ ಚರ್ಚೆ ಶುರುವಾಗಿದೆ. ನಿರ್ದೇಶಕ ರಾಜಮೌಳಿ ತೆರೆಹಿಂದೆ ಇದ್ದು ಸ್ಟಾರ್ ಸ್ಟೇಟಸ್ ಧಕ್ಕಿಸಿಕೊಂಡಿದ್ದಾರೆ. ‘RRR’ ಸಿನಿಮಾ ಮಾಡಿ ಹಾಲಿವುಡ್ ಫಿಲ್ಮ್ ಮೇಕರ್ಸ್ ಕಣ್ಣಿಗೂ ಬಿದ್ದಿದ್ದಾರೆ. ಹಾಗಾಗಿ ಜಕ್ಕಣ್ಣನ ಸ್ಟಾರ್‌ಡಮ್ ಹೆಚ್ಚಾಗಿದೆ. ಅದೇ ಕಾರಣಕ್ಕೆ ಒಪ್ಪೋ ಸಂಸ್ಥೆ ರಾಯಭಾರಿಯಾಗಿ ನೇಮಿಸಿದೆ. ಜಾಹೀರಾತಿನಲ್ಲಿ ಕೂಡ ಮೌಳಿ ಕಾಣಿಸಿಕೊಂಡಿದ್ದಾರೆ. ರಾಜಸ್ಥಾನದಲ್ಲಿ ಚಿತ್ರೀಕರಿಸಿದ್ದ ಆ ಜಾಹೀರಾತು ಈಗ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ. ಸ್ಟಾರ್ ನಿರ್ದೇಶಕನನ್ನು ಡೈರೆಕ್ಟ್ ಮಾಡಿದ ಆ ಡೈರೆಕ್ಟರ್ ಯಾರಪ್ಪಾ? ಎಂದು ಅಭಿಮಾನಿಗಳು ಕೇಳ್ತಿದ್ದಾರೆ.
ಇದನ್ನೂ ಓದಿ: `ಜವಾನ್’ ಸಿನಿಮಾ ವಿಚಾರವಾಗಿ ಶಾರುಖ್ ಖಾನ್ ಕೊಟ್ಟ ಕರೆ ಏನು ಗೊತ್ತಾ?!
ರಾಜಮೌಳಿ ಡಬ್ಕಿ ಡಬಲ್ ರೋಲ್ ಜಾಹಿರಾತು ಹೇಗಿದೆ ಅನ್ನುವದನ್ನು ನೋಡುವುದಾದರೆ ಒಬ್ಬ ವ್ಯಕ್ತಿ ಫೋನ್ನಲ್ಲಿ ಫೋಟೊ ಕ್ಲಿಕ್ಕಿಸಲು ಪ್ರಯತ್ನಿಸುತ್ತಿರುತ್ತಾನೆ. ರಾಜಮೌಳಿ ಆತನಿಗೆ ಕರೆಕ್ಟ್ ಫ್ರೇಮ್ ಸೆಟ್ ಮಾಡಿ ಕೊಡ್ತಾರೆ. ಆ ಫ್ರೇಮ್‌ನಲ್ಲಿ ಫೋಟೊ ತೆಗೆಯುತ್ತಿದ್ದಂತೆ ಫೋಟೊ ತೆಗೆದ ವ್ಯಕ್ತಿ ರಾಜಮೌಳಿಯಾಗಿ ಬದಲಾಗುತ್ತಾನೆ. ಅದೇ ರೀತಿ ಜಕ್ಕಣ್ಣ ಮತ್ತೊಬ್ಬರಿಗೆ ಐಡಿಯಾ ಕೊಟ್ಟರೆ ಆತ ಕೂಡ ರಾಜಮೌಳಿ ರೂಪ ತಳೆದುಬಿಡುತ್ತಾನೆ. ಆ ನಂತರ ಎಲ್ಲಿ ನೋಡಿದರು ರಾಜಮೌಳಿಯೇ ಕಾಣಿಸಲು ಶುರುವಾಗುತ್ತದೆ. ಮೊದಲ ಬಾರಿ ಕ್ಯಾಮರಾ ಮುಂದೆ ಮೌಳಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ ರಾಜಮೌಳಿ ಇದೇ ಮೊದಲ ಬಾರಿಗೆ ಕ್ಯಾಮರಾ ಮುಂದೆ ಬಂದಿದ್ದಾರೆ. ಈ ಹಿಂದೆ ತಮ್ಮದೇ ಸಿನಿಮಾಗಳ ಸಣ್ಣ ಸಣ್ಣ ಝಲಕ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ರೀತಿ ಸಂಪೂರ್ಣವಾಗಿ ಕ್ಯಾಮರಾ ಎದುರಿಸಿದ್ದು ಅದರಲ್ಲೂ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದೇ ಇದೇ ಮೊದಲು. ಸದ್ಯ ರಿಲೀಸ್ ಆಗಿರುವ ಜಾಹೀರಾತಿನ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: “COZ I LUV U” ಆಲ್ಬಂ ಹಾಡಿನ ಮೂಲಕ ವಿನೂತನ ಪ್ರಯೋಗ
ಜಕ್ಕಣ್ಣ ಚಿತ್ರವೊಂದರ ನಿರ್ದೇಶನಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ‘RRR’ ಚಿತ್ರಕ್ಕಂತೂ ಏಕಾಏಕಿ ಶೇ. 30ರಷ್ಟು ಶೇರ್ ತಗೊಂಡಿದ್ದರು ಎನ್ನಲಾಗಿತ್ತು. ಆ ಅರ್ಥದಲ್ಲಿ 100 ಕೋಟಿವರೆಗೂ ಹಣ ಸಿಕ್ಕಿತ್ತು ಎನ್ನುವ ಗುಸುಗುಸು ಕೇಳಿಬಂದಿತ್ತು. ಇದೀಗ ಈ ಒಪ್ಪೋ ಜಾಹೀರಾತಿಗೆ ಎಷ್ಟು ಸಂಭಾವನೆ ಪಡೆದಿರಬಹುದು ಎನ್ನುವ ವಿಚಾರ ಈಗ ಸದ್ದು ಮಾಡ್ತಿದೆ. ಈ ಜಾಹೀರಾತಿಗಾಗಿ ಅಂದಾಜು 3 ಕೋಟಿ ರೂ. ಸಂಭಾವನೆ ಜೇಬಿಗಿಳಿಸಿದ್ದಾರೆ ಎನ್ನಲಾಗ್ತಿದೆ.