Sandalwood Leading OnlineMedia

`ಬಾಹುಬಲಿ’ ಚಿತ್ರದ ಬಗ್ಗೆ ಅಪರೂಪದ ಅನುಭವ ಹಂಚಿಕೊ0ಡ ರಾಜಮೌಳಿ

’ಬಾಹುಬಲಿ’ ಹೊಸ ಅಧ್ಯಾಯದೊಂದಿಗೆ ಅನಿಮೇಟೆಡ್ ಫಾರ್ಮೆಟ್‌ದಲ್ಲಿ ಹೇಳಲು ಯೋಜನೆ ಸಿದ್ದಗೊಂಡಿದೆ ಎಂಬುದು ಸುದ್ದಿಯಾಗಿತ್ತು. ಎ ಗ್ರಾಫಿಕ್ ಇಂಡಿಯಾ ಮತ್ತು ಆರ್ಕ ಮೀಡಿಯಾ ವರ್ಕ್ಸ್ ಪ್ರೊಡಕ್ಷನ್ ಅಡಿಯಲ್ಲಿ ಎಸ್.ಎಸ್.ರಾಜಮೌಳಿ-ಶರದ್‌ದೇವರಾಜನ್ ಕ್ರಿಯೆಟೀವ್ ಮುಖ್ಯಸ್ಥರಾಗಿರುತ್ತಾರೆ. ಜೀವನ್.ಜೆ.ಕಾಂಗ್-ನವೀನ್ ಜಾನ್ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಇವರೆಲ್ಲರೂ ನಿರ್ಮಾಣದಲ್ಲಿ ಪಾಲುದಾರರಾಗಿರುತ್ತಾರೆ.

READ MORE; ಬಂಪರ್ ಆಫರ್.. ಕೇವಲ ರೂ.99ಕ್ಕೆ `ರಾಮನ ಅವತಾರ’!

ಮೊನ್ನೆ ಹೈದರಬಾದ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ರಾಜಮೌಳಿ ಮಾತನಾಡಿ, ಬಾಹುಬಲಿ ಫ್ರಾಂಚಸಿಯನ್ನು ಸೃಷ್ಟಿಸಿದ ನಗರ ಹೈದರಬಾದ್. ಅದಕ್ಕಾಗಿ ನನ್ನ ಹೃದಯದಲ್ಲಿ ಈ ಸ್ಥಳವು ವಿಶೇಷ ಸ್ಥಾನವನ್ನು ಹೊಂದಿದೆ. ಇವರೆಲ್ಲರ ಸಹಯೋಗದೊಂದಿಗೆ ಇರುವುದು ಊಹಿಸಲಾಗದ ಅನುಭವ. ಭಾರತದಲ್ಲಿ ಹಳೆಯ ಕಾಲದ ಅನಿಮೇಷನ್ ಚಿತ್ರ ನಿರ್ಮಾಣಕ್ಕೆ ಅವರ ಉತ್ಸಾಹ ಸಮರ್ಪಣೆಗಳೇ ಸ್ಪೂರ್ತಿಯಾಗಿದೆ. ನಾವು ಬಹುಬಲಿ ಜಗತ್ತನ್ನು ವಿಸ್ತರಿಸುವ ಕಥೆಯನ್ನು ರಚಿಸಿದ್ದೇವೆ. ಮಾಹಿಷ್ಮತಿಯ ಯೋಧರು ತಮ್ಮ ತಾಯ್ನಾಡನ್ನು ಉಳಿಸಲು ಒಂದಾದಾಗ ಸಾಮ್ರಾಜ್ಯಗಳ ನಡುವೆ ಮಹಾ ಘರ್ಷಣೆ ಉಂಟಾಗುವುದನ್ನು ಇದರಲ್ಲಿ ವೀಕ್ಷಿಸಬಹುದು ಎಂದರು.

READ MORE; “I’m Superstitious about – RCB winning IPL! ‘’ -Manikanth Kadri ; Chittara Exclusive

ಈ ಸಂದರ್ಭದಲ್ಲಿ ಬರಹಗಾರ ಮತ್ತು ನಿರ್ಮಾಪಕ ಶರದ್‌ದೇವರಾಜನ್, ಡಿಸ್ನಿ ಹಾಟ್‌ಸ್ಟಾರ್, ಹೆಚ್‌ಎಸ್‌ಎಂ ಎಂಟರ್‌ಟೈನ್‌ಮೆಂಟ್ ಮುಖ್ಯಸ್ಥ ಗೌರವ್ ಬ್ಯಾನರ್ಜಿ, ನಟ ಹಾಗೂ ಅನಿಮೇಟೆಡ್‌ಗೆ ಧ್ವನಿ ನೀಡಿರುವ ಶರದ್‌ಕೇಳ್ಕರ್ ಉಪಸ್ತಿತರಿದ್ದು, ಒಂದಷ್ಟು ಅನುಭವಗಳನ್ನು ಹಂಚಿಕೊಂಡರು. ಅನಿಮೇಟೆಡ್‌ದಲ್ಲಿ ಸಾಹಸ, ರಾಜಕೀಯ ಅಚ್ಚರಿಗಳು, ನಾಟಕ, ಮೋಸ, ಯುದ್ದ, ಹೀರೋಗಿರಿ, ವಿಶ್ವಾಸ, ಧೈರ್ಯ ಎಲ್ಲ ಅಂಶಗಳು ಸೇರಿಕೊಂಡಿದೆ. ಇಂತಹ ಪವರ್ ಪ್ಯಾಕ್ಡ್ ಆಕ್ಷನ್ ಸೀರೀಸ್ ಕನ್ನಡ ಸೇರಿದಂತೆ, ಎಲ್ಲಾ ಭಾಷೆಗಳಲ್ಲಿ ಮೇ 17,2024ರಿಂದ ಡಿಸ್ನಿ+ಹಾಟ್‌ಸ್ಟಾರ್‌ದಲ್ಲಿ ಸ್ಟ್ರೀಮ್ ಆಗಲು ಸಜ್ಜಾಗಿದೆ.

 

Share this post:

Related Posts

To Subscribe to our News Letter.

Translate »