ರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾಜಾಹುಲಿ ಸೂಪರ್ ಹಿಟ್ ಸಿನಿಮಾ. ಆ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸಮಾಡಿದ್ದ ಹೊನ್ನರಾಜ್ ಅವರೀಗ ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ ಎಂಬ ಹೆಸರಲ್ಲಿ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಆ ಚಿತ್ರವನ್ನು ಸತ್ಯಲಕ್ಷ್ಮಿ ಕ್ರಿಯೇಶನ್ಸ್ ಅಡಿ ಸಂಜಯ್ ಶ್ರೀನಿವಾಸ್ ಅವರು ನಿರ್ಮಾಣ ಮಾಡಿದ್ದಾರೆ. ಈ ನಿರ್ಮಾಣ ಸಂಸ್ಥೆಯ ಬ್ಯಾನರ್ ಉದ್ಘಾಟನೆ ಹಾಗೂ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ವಿಶೇಷವಾಗಿ ಚಿತ್ರದ ಶೀರ್ಷಿಕೆಯನ್ನು ಕನ್ನಡದ ಐದು ಜನ ಹೆಸರಾಂತ ನಿರ್ದೇಶಕರು ಅನಾವರಣಗೊಳಿಸಿದರೆ, ಬ್ಯಾನರನ್ನು ಫಿಲಂ ಚೇಂಬರ್ ಅಧ್ಯಕ್ಷ ರಾದ ಭಾಮ ಹರೀಶ್ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಉದ್ಘಾಟಿಸಿದರು. ನಿರ್ದೇಶಕರುಗಳಾದ ಕೆ.ರಾಮ್ ನಾರಾಯಣ್, ನಂಜುಂಡೇಗೌಡ, ಮರಡಿಹಳ್ಳಿ ನಾಗಚಂದ್ತ, ನಿತ್ಯಾನಂದಪ್ರಭು, ಹಾಗೂ ಚಂದ್ರಕಾಂತ್ ಚಿತ್ರದುರ್ಗ ವೇದಿಕೆಯಲ್ಲಿ ಉಪಸ್ಥಿತರಿದ್ದು, ಟೈಟಲ್ ಲಾಂಚ್ ಮಾಡಿ ಶುಭ ಹಾರೈಸಿದರು. ಇವರ ಜೊತೆಗೆ ರಕ್ಷಣಾವೇದಿಕೆಯ ಅಧ್ಯಕ್ಷ ಸೀನು, ಎಸಿ ಶ್ರೀಕಾಂತ್ ರೆಡ್ಡಿ, ರಾಘವೇಂದ್ರರೆಡ್ಡಿ ಮುಂತಾದವರು ಹಾಜರಿದ್ದು ಶುಭ ಕೋರಿದರು. ಸ್ನೇಹ ಸಂಬಂಧಗಳ ಬೆಸುಗೆ ಎಂಬ ಅಡಿಬರಹ ಈ ಚಿತ್ರಕ್ಕಿದೆ.
`ಅಮರಾವತಿ ಪೋಲೀಸ್ ಸ್ಟೇಷನ್’ ಗೆ ಚಾಲನೆ
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಹೊನ್ನರಾಜ್, ಕಳೆದ ೨೨ ವರ್ಷಗಳಿಂದ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ. ಎಲ್ಲರಂತೆ ನನಗೂ ನಿರ್ದೇಶಕನಾಗಬೇಕೆಂಬ ಆಸೆಯಿತ್ತು. ಎಲ್ಲೂ ಸರಿಯಾದ ಪ್ರೋತ್ಸಾಹ ಸಿಗಲಿಲ್ಲ. ಸ್ನೇಹಿತರ ಸಲಹೆಯಂತೆ ಒಂದು ಕಾನ್ಸೆಪ್ಟ್ ಮಾಡಿಕೊಂಡು ಒಂದಷ್ಟು ಜನ ಸೇರಿ ಚಿತ್ರವನ್ನು ಆರಂಭಿಸಿದೆವು. ನಂತರ ಸಂಜಯ್ ಶ್ರೀನಿವಾಸ್ ಅವರು ಸಿಕ್ಕರು. ಮತ್ತೊಂದು ಸ್ಟೋರಿಯೂ ಸಿಕ್ಕಿತು, ಅದೇ ಈ ರಾಜಾಹುಲಿ, ಬಾಮ ಹರೀಶ್ ಅವರು ತುಂಬಾ ಸಲಹೆ ಕೊಟ್ಟರು. ಖಂಡಿತ ಒಂದೊಳ್ಳೆ ಸಿನಿಮಾ ಕೊಡುತ್ತೇನೆ. ಫ್ಯಾ ಮಿಲಿ ಸಬ್ಜೆಕ್ಟ್. ಕೂಡು ಕುಟುಂಬದ ಕಥೆ ಎಂದು ಹೇಳಿದರು. ನಂತರ ಬಾಮ ಹರೀಶ್ ಮಾತನಾಡುತ್ತ ಹೊನ್ನರಾಜ್ ಸಾಕಷ್ಟು ವರ್ಷಗಳಿಂದ ಕೆಲಸ ಮಾಡಿದ್ದಾರೆ. ಈಗ ಒಂದೊಳ್ಳೆ ಸಿನಿಮಾ ಮಾಡಿದ್ದಾರೆ, ಅವರಿಗೆ ಸಂಜಯ್ ಸಾಥ್ ಕೊಟ್ಟಿದ್ದಾರೆ. ಚಿತ್ರವು ಯಶಸ್ವಿಯಾಗಲಿ ಎಂದು ಹಾರೈಸಿದರು. ನಂತರ ಮಾತನಾಡಿದ ಉಮೇಶ್ ಬಣಕಾರ್, ಹೊನ್ನರಾಜ್ ಅವರ ನೂತನ ಚಿತ್ರ ಯಶಸ್ವಿಯಾಗಲಿ, ಆಗ ಹಿಟ್ ಆದಂತೇ ಈ ಚಿತ್ರವೂ ಹಿಟ್ ಆಗಲಿ, ಮನೆತುಂಬಾ ಹೊನ್ನು ತುಂಬಿಕೊಳ್ಳಲಿ ಎಂದು ಹಾರೈಸಿದರು. ನಿರ್ದೇಶಕ ರಾಮನಾರಾಯಣ್ ಮಾತನಾಡಿ ಹೊಸ ಸಂಸ್ಥೆಗೆ ಶುಭಾಶಯ, ಹೊನ್ನರಾಜ್ ನನ್ನ ಸ್ನೇಹಿತ, ಜೊತೆಗೂ ಕೆಲಸ ಮಾಡಿದ್ದಾರೆ. ಕೆಲಸದಲ್ಲಿ ತುಂಬಾ ಸ್ಪೀಡ್ ಎಂದು ಹೇಳಿದರು. ಮರಡಿಹಳ್ಳಿ ನಾಗಚಂದ್ರ ಮಾತನಾಡಿ ಸಹಾಯಕ ನಿರ್ದೇಶಕರಾಗಿ ದ್ದ ಹೊನ್ನರಾಜ್ ಈಗ ನಿರ್ದೇಶಕರಾಗಿದ್ದಾರೆ. ನನ್ನಜೊತೆ ೧೮ ವರ್ಷದ ಹಿಂದೆ ಕೆಲಸ ಮಾಡಿದ್ದರು ಒಳ್ಳೆವ್ಯಕ್ತಿತ್ವ ಇರುವಂಥ ಮನುಷ್ಯ. ಯಾರನ್ನು ಬೇಕಾದರೂ ಮಾತಾಡಿಸಿ ಕೆಲಸ ಮಾಡಿಸಿಕೊಂಡು ಬರುವ ಸಾಮರ್ಥ್ಯ ಇದೆ ಎಂದು ಹೇಳಿದರು. ನಮ್ಮ ಬ್ಯಾನರ್ ಮೊದಲ ಪ್ರಯತ್ನ, ಮುಂದೆ ಉತ್ತಮ ಚಿತ್ರಗಳನ್ನು ಮಾಡುವ ಉದ್ದೇಶವಿದೆ. ಸದ್ಯದಲ್ಲೇ ಈ ಚಿತ್ರದ ಬಗ್ಗೆ ಉಳಿದ ವಿವರಗಳನ್ನು ಬಹಿರಂಗಪಡಿಸಲಾಗುವುದೆಂದು ನಿರ್ಮಾಪಕ ಸಂಜಯ್ ಶ್ರೀನಿವಾಸ್ ಹೇಳಿದರು.