Sandalwood Leading OnlineMedia

ಗಾರುಡಿಗ ಚಿತ್ರದ ಆಡಿಯೋ ಅನಾವರಣಗೊಳಿಸಿದ ರಾಜ್ ಬಹಾದ್ದೂರ್

‘ಗಾರುಡಿಗ’ ಸಿನಿಮಾದಲ್ಲಿ ಹಳ್ಳಿಯ ಯುವಕನಾಗಿ ಮಾಗಡಿ ಮೂಲದ ರುದ್ವಿನ್ ಅವರು ನಟಿಸಿದ್ದಾರೆ. ನಾಯಕಿಯಾಗಿ ಎರಡು ಶೇಡ್‌ಗಳು ಇರುವ ಪಾತ್ರದಲ್ಲಿ ಮಾನಸಾ ನಟಿಸಿದ್ದಾರೆ. ಅರ್ಚನಾ, ಅರ್ಜುನ್, ಸೋನು, ಮೋಹನ್, ಗಿರೀಶ್, ಸಂಜು ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡು ಬಿಡುಗಡೆ ಆಗಿದೆ.

ಇದನ್ನೂ ಓದಿ ದೀಪಾವಳಿ ಹಬ್ಬದ ದಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಂದ ಬಿಡುಗಡೆಯಾಯಿತು “ಬ್ಯಾಡ್ ಮ್ಯಾನರ್ಸ್” ಚಿತ್ರದ ಟ್ರೇಲರ್ .

ಚಿತ್ರರಂಗಕ್ಕೆ ಬರುವ ಹೊಸಬರ ಸಂಖ್ಯೆಗೆ ಕೊರತೆಯಿಲ್ಲ. ಈಗ ‘ಗಾರುಡಿಗ’ (Gaarudiga) ಶೀರ್ಷಿಕೆಯ ಚಿತ್ರದಲ್ಲಿ ಕೂಡ ಅನೇಕ ಹೊಸಬರು ಎಂಟ್ರಿ ನೀಡುತ್ತಿದ್ದಾರೆ. ಈ ಸಿನಿಮಾದ ಪ್ರಮೋಷನ್​ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಅದರ ಮೊದಲ ಹಂತವಾಗಿ ಸಾಂಗ್ ರಿಲೀಸ್ ಕಾರ್ಯಕ್ರಮ ಮಾಡಲಾಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಕಟ್ಟಡದಲ್ಲಿ ಗ್ರ್ಯಾಂಡ್​ ಆಗಿ ಈ ಕಾರ್ಯ್ರಕಮ ನಡೆಯಿತು. ‘ಸೂಪರ್ ಸ್ಟಾರ್’ ರಜನಿಕಾಂತ್ ಅವರ ಆಪ್ತ ಗೆಳೆಯರಾದ ರಾಜ್‌ ಬಹದ್ದೂರ್ (Raj Bahadur) ಅವರು ಈ ಸಮಾರಂಭಕ್ಕೆ ಆಗಮಿಸಿ, ಚಿತ್ರತಂಡಕ್ಕೆ ಶುಭ ಕೋರಿದ್ದು ವಿಶೇಷ. ‘ಗಾರುಡಿಗ’ ಸಿನಿಮಾ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..

ಇದನ್ನೂ ಓದಿ ಟೀಸರ್ ನಲ್ಲೇ ಕುತೂಹಲ ಮೂಡಿಸಿದೆ ಧನ್ವೀರ್ ಅಭಿನಯದ “ಕೈವ” ..

ವಕೀಲರಾಗಿರುವ ಡಾ. ಎಂ. ವೆಂಕಟಸ್ವಾಮಿ ಅವರು ‘ಎಂ.ವಿ. ಫಿಲ್ಮ್ಸ್​’ ಸಂಸ್ಥೆಯ ಮೂಲಕ ‘ಗಾರುಡಿಗ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವಿಧ ಆರ್. ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಏನು ಈ ಸಿನಿಮಾದ ಕಥೆ ಎಂಬ ಬಗ್ಗೆ ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ. ‘ರೈತನಾಗಿದ್ದವನು ನಗರಕ್ಕೆ ಬಂದು ತನ್ನ ಬುದ್ಧಿಶಕ್ತಿಯ ಬಲದಿಂದ ಒಂದು ಚಕ್ರವ್ಯೂಹವನ್ನು ಯಾವ ರೀತಿ ಭೇದಿಸುತ್ತಾನೆ ಎಂಬುದು ಈ ಚಿತ್ರದಲ್ಲಿದೆ’ ಎಂದು ತಂಡವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ  ಒಟಿಟಿ ಎಂಟ್ರಿಗೆ ರೆಡಿ ಶಿವಣ್ಣನ ‘ಘೋಸ್ಟ್’…ಯಾವಾಗ…ಎಲ್ಲಿ…? ಇಲ್ಲಿದೆ‌ ನೋಡಿ ಮಾಹಿತಿ…

‘ಶ್ರೀಮಂತ ಕುಟುಂಬದ ಹುಡುಗರು ಘೋರ ಅಪಘಾತಗಳನ್ನು ಮಾಡಿ, ಅದನ್ನು ಮುಚ್ಚಿಟ್ಟು ಆರಾಮಾಗಿ ಇರುತ್ತಾರೆ. ಆದರೆ ಅವರ ಬದುಕಿನಲ್ಲಿ ಬದಲಾವಣೆ ಆಗುತ್ತದೆ. ಹೀರೋ ತನ್ನ ಚಾಣಾಕ್ಷತನದಿಂದ ಕೆಲಸ ಸಾಧಿಸುತ್ತಾನೆ. ಆ ಶ್ರೀಮಂತರನ್ನು ಅಪರಾಧದ ಸ್ಥಳಕ್ಕೆ ಕರೆದುಕೊಂಡು ಹೋಗಿ, ಅವರಿಂದಲೇ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡುತ್ತಾನೆ. ಆ ಮೂಲಕ ಗೆಲುವು ಕಾಣುತ್ತಾನೆ. ಆ ಬಳಿಕ ದುಷ್ಟರಿಗೆ ಶಿಕ್ಷೆ ಆಗುತ್ತಾ ಎಂಬುದು ಕುತೂಹಲ. ಮನಸಾಕ್ಷಿಗಿಂತಲೂ ದೊಡ್ಡದು ಯಾವುದೂ ಇಲ್ಲ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ’ ಎಂದು ‘ಗಾರುಡಿಗ’ ತಂಡದವರು ಹೇಳಿದ್ದಾರೆ.

ಇದನ್ನೂ ಓದಿ  ಚೀತಾ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಎದುರು ನಾಯಕಿಯಾಗಿ ಮೇಘಾ ಶೆಟ್ಟಿ ನಟಿಸಿದ್ದಾರೆ.

ಈ ಸಿನಿಮಾದಲ್ಲಿ ಹಳ್ಳಿಯ ಯುವಕನಾಗಿ ಮಾಗಡಿ ಮೂಲದ ರುದ್ವಿನ್ ಅವರು ನಟಿಸಿದ್ದಾರೆ. ನಾಯಕಿಯಾಗಿ ಎರಡು ಶೇಡ್‌ಗಳು ಇರುವ ಪಾತ್ರದಲ್ಲಿ ಮಾನಸಾ ನಟಿಸಿದ್ದಾರೆ. ಅರ್ಚನಾ, ಅರ್ಜುನ್, ಸೋನು, ಮೋಹನ್, ಗಿರೀಶ್, ಸಂಜು ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ, ದೇವನಹಳ್ಳಿ, ದೊಡ್ಡಬಳ್ಳಾಪುರ, ಆನೇಕಲ್, ಹೊಸಪೇಟೆ, ಕನಕಪುರ, ಹಾರೋಹಳ್ಳಿ ಮುಂತಾದೆಡೆ ಶೂಟಿಂಗ್​ ಮಾಡಲಾಗಿದೆ. ‘ಬಡವರ ಮಕ್ಕಳು ಬರುತ್ತಿದ್ದೇವೆ. ಪ್ರೀತಿ ಕೊಡಿ’ ಎಂದು ‘ಗಾರುಡಿಗ’ ಟೀಮ್​ ಕೇಳಿಕೊಂಡಿದೆ. ಚಿತ್ರದ ಬಿಡುಗಡೆಗೆ ತಯಾರಿ ನಡೆಯುತ್ತಿದೆ. ಎಂ. ಸಂಜೀವ್‌ ರಾವ್ ಅವರು ಸಂಗೀತ ನಿರ್ದೇಶನ, ಅನಿರುದ್ದ್-ಭರತ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಭಾರ್ಗವ್-ಚೆಲುವಮೂರ್ತಿ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ವಿಧ ಆರ್., ಎಂ. ಸಂಜೀವ್‌ ರಾವ್ ಸಾಹಿತ್ಯ ಬರೆದಿದ್ದಾರೆ.

 

 

Share this post:

Related Posts

To Subscribe to our News Letter.

Translate »