Sandalwood Leading OnlineMedia

ಕನ್ನಡದಲ್ಲಿ ತಮ್ಮದೇ ಶೈಲಿಯ ಸಿನಿಮಾ ಮೂಲಕ ಜನಮನ ಗೆದ್ದಿರುವ ರಾಜ್ ಬಿ ಶೆಟ್ಟಿ ಈಗ ಮಲಯಾಳಂನಲ್ಲಿ ಬಿಗ್ ಆಫರ್ ಪಡೆದಿದ್ದಾರೆ.

ಸೂಪರ್ ಸ್ಟಾರ್ ಮಮ್ಮೂಟ್ಟಿ ನಾಯಕರಾಗಿರುವ ‘ಟರ್ಬೊ’ ಸಿನಿಮಾಗೆ ರಾಜ್ ಬಿ ಶೆಟ್ಟಿ ಸೇರ್ಪಡೆಯಾಗಿದ್ದಾರೆ. ಚಿತ್ರತಂಡ ರಾಜ್ ಬಿ ಶೆಟ್ಟಿ ನಟಿಸುತ್ತಿರುವ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.
ಟೋಬಿ ಸಿನಿಮಾ ಮೂಲಕ ಮಲಯಾಳಂನಲ್ಲೂ ಗಮನಸೆಳೆದಿರುವ ರಾಜ್ ಬಿ ಶೆಟ್ಟಿ ಈಗ ಮಮ್ಮೂಟ್ಟಿ ಕಂಪನಿ ಪ್ರಸ್ತುತಪಡಿಸುತ್ತರುವ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ರಾಜ್ ಬಿ ಶೆಟ್ಟಿ ವಿಲನ್ ಪಾತ್ರ ಮಾಡುತ್ತಿರುವುದು ಖಚಿತವಾಗಿದೆ.

ಈ ಹಿಂದೆಯೇ ಮಮ್ಮೂಟ್ಟಿ ಪುತ್ರ, ನಟ ದುಲ್ಕರ್ ಸಲ್ಮಾನ್ ತಮ್ಮ ನಿರ್ಮಾಣದಲ್ಲಿ ರಾಜ್ ಬಿ ಶೆಟ್ಟಿ ನಟಿಸಲಿರುವುದಾಗಿ ಹೇಳಿದ್ದರು. ಅದೀಗ ನಿಜವಾಗಿದೆ. ರಾಜ್ ಬಿ ಶೆಟ್ಟಿಗೆ ಇದು ಮೊದಲ ಮಲಯಾಳಂ ಸಿನಿಮಾವಾಗಿದೆ. ಇದೊಂದು ಆಕ್ಷನ್ ಕಾಮಿಡಿ ಸಿನಿಮಾವಾಗಿದೆ. ಖ್ಯಾತ ನಿರ್ದೇಶಕ ವೈಶಾಖ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Share this post:

Translate »