Sandalwood Leading OnlineMedia

ಸಿಹಿ ಮುತ್ತು, ಸಿಹಿ ಮುತ್ತು ಮತ್ತೊಂದು, ರಾಜ್ ಬಿ ಶೆಟ್ಟಿಗೆ ಮುತ್ತು ಕೊಟ್ಟ ಚೈತ್ರಾ ಆಚಾರ್, ಸಮಜಾಯಿಸಿ ಕೊಟ್ಟ ಶೆಟ್ಟರು.

ಸ್ಯಾಂಡಲ್‌ವುಡ್ ನಟ ರಾಜ್ ಬಿ.ಶೆಟ್ಟಿ ಹಾಗೂ ನಟಿ ಚೈತ್ರಾ ಆಚಾರ್ ಒಟ್ಟಿಗೆ ಟೋಬಿ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಲುಕ್ ರಿಲೀಸ್ ಆಗಿದ್ದು ಇಬ್ಬರ ಲುಕ್ ಗೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಚಂದನವನದ ಯುವನಟಿ ಚೈತ್ರಾ ಆಚಾರ್ ನಟ ರಾಜ್ ಬಿ ಶೆಟ್ಟಿ ಕೆನ್ನೆಗೆ ಮುತ್ತಿದ್ದು, ಬಹಿರಂಗ ಸಭೆಯಲ್ಲಿ ಅಪ್ಪಿಕೊಂಡಿದ್ದು ಸುದ್ದಿಯಾಗಿದ್ದರು.ಇದಕ್ಕೆ ಶೆಟ್ಟರು ಉತ್ತರ ನೀಡುವ ಮೂಲಕ ಮುತ್ತಿನ ಪ್ರಕರಣಕ್ಕೆ ಮುಕ್ತಿ ನೀಡಿದ್ದಾರೆ.

ಟೋಬಿ ರಾಜ್ ಬಿ.ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾ. ಹದಿನೈದು ಕೋಟಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದಲ್ಲಿ ಬೆಚ್ಚಿ ಬೀಳಿಸುವ ಅವತಾರದಲ್ಲಿ ಶೆಟ್ಟರು ಕಾಣಿಸಿಕೊಂಡಿದ್ದಾರೆ. ಟಿ.ಕೆ.ದಯಾನಂದ್ ಬರೆದ ವಿಕ್ಷಿಪ್ತ ವ್ಯಕ್ತಿಯ ಕತೆಗೆ ಮಾಸ್ ಚಿತ್ರಕತೆ ಹೆಣೆದಿದ್ದಾರೆ. ಫಸ್ಟ್‌ ಲುಕ್ ಟೀಸರ್ ಅನಾವರಣ ಮಾಡುವಾಗ ಏಕಾಏಕಿ ನಾಯಕಿ ಚೈತ್ರಾ ಆಚಾರ್, ಶೆಟ್ಟರ ಕೆನ್ನೆಗೆ ಮುತ್ತಿಟ್ಟಿದ್ದರು.

 

ಚೈತ್ರಾ ಮಗುವಿನ ಮನಸಿನ ಹುಡುಗಿ. ಆಕೆ ಮುಗ್ಧೆ. ಆಕೆ ಮುತ್ತಿಟ್ಟಿದ್ದರಲ್ಲಿ ಯಾವುದೇ ರೀತಿ ಕೆಟ್ಟ ಉದ್ದೇಶ ನನಗೆ ಕಾಣಿಸಲಿಲ್ಲ. ಗೆಳೆಯ ಗೆಳತಿ, ಅಣ್ಣ-ತಂಗಿ ಹಗ್ ಮಾಡೋದು.ಮುತ್ತಿಡೋದು ಸಾಮಾನ್ಯ. ಅದನ್ನೇ ಚೈತ್ರಾ ಮಾಡಿದ್ದಾರೆ. ಅದರಲ್ಲಿ ತಪ್ಪೇನಿಲ್ಲ ಎಂದು ರಾಜ್ ಬಿ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

Share this post:

Translate »