ಪ್ರಜ್ವಲ್ ಮತ್ತು ರಾಗಿಣಿ ಹಲವಾರು ಬಾರಿ ತಮ್ಮ ಲವ್ ಸ್ಟೋರಿ ಬಗ್ಗೆ ಹೇಳಿದ್ದಾರೆ. ಇದೀಗ ಮತ್ತೊಮ್ಮೆ ಚಿತ್ತಾರ ಅವಾರ್ಡ್ ಸಮಾರಂಭದಲ್ಲಿ ತಮ್ಮ ಪ್ರೀತಿ ಆರಂಭವಾದ ಬಗ್ಗೆ ಹೇಳಿದ್ದಾರೆ. ಇವರದ್ದು ಇಂದು ನಿನ್ನೆಯ ಪ್ರೀತಿ ಅಲ್ಲ, 20 ವರ್ಷಗಳಿಂದಲೂ ಇವರು ಲವ್ ಮಾಡಿದ್ದರು.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ಚಿತ್ತಾರ ಅವಾರ್ಡ್ ಕಾರ್ಯಕ್ರಮದ ಪ್ರೊಮೋ ರಿಲೀಸ್ ಆಗಿದ್ದು, ಪ್ರಶಸ್ತಿ ಗೆದ್ದಿರುವ ಪ್ರಜ್ವಲ್ ದೇವರಾಜ್ ಅವರಿಗೆ ನಿರೂಪಕ ನಿರಂಜನ್ ದೇಶಪಾಂಡೆ, ನಿಮ್ಮ ಲವ್ ಸ್ಟೋರಿ ಬಗ್ಗೆ ಹೇಳಿ ಎಂದು ಹೇಳಿದಾಗ ಪ್ರಜ್ವಲ್ ಪತ್ನಿ ರಾಗಿಣಿ ಸ್ಕೂಲ್ ಅಲ್ಲಿ ಇರೋವಾಗ್ಲೇ ತಮ್ಮ ಲವ್ ಸ್ಟೋರಿ ಶುರುವಾಗಿತ್ತು ಎಂದು ಹೇಳಿದ್ದಾರೆ.
ಪ್ರಜ್ವಲ್ ಮೊದಲ ಬಾರಿ ತಮಗೆ ಪ್ರಪೋಸ್ ಮಾಡಿರೋದನ್ನು ನೆನಪಿಸಿಕೊಂಡ ರಾಗಿಣಿ, ಪ್ರಜ್ವಲ್ ಒಂಭತ್ತನೇ ಕ್ಲಾಸಲ್ಲಿ ಹಾಗೂ ರಾಗಿಣಿ 6ನೇ ಕ್ಲಾಸಲ್ಲಿ ಇರೋವಾಗ್ಲೇ ಪ್ರಪೋಸ್ ಮಾಡಿದ್ರಂತೆ. ನೋಟ್ ಬುಕ್ ಅಲ್ಲಿ ಪೂರ್ತಿಯಾಗಿ ಐ ಲವ್ ಯೂ ರಾಗಿಣಿ ಎಂದು ಬರೆದು ರಾಗಿಣಿಗೆ ಕೊಟ್ಟಿದ್ರಂತೆ ಪ್ರಜ್ವಲ್.