ನಟಿ ರಾಧಿಕಾ ಪಂಡಿತ್ ಐದು ವರ್ಷಗಳ ಹಿಂದೆ ಭರವಸೆಯೊಂದನ್ನು ನೀಡಿದ್ದರು ಆದರೆ ಅದನ್ನು ಈಡೇರಿಸಿಲ್ಲ. ಏನು ಆ ಭರವಸೆ?ಕನ್ನಡ ಚಿತ್ರರಂಗ ಇತ್ತೀಚಿನ ಹತ್ತು-ಹದಿನೈದು ವರ್ಷಗಳಲ್ಲಿ ಕಂಡ ಅತ್ಯುತ್ತಮ ನಟಿಯರಲ್ಲಿ ರಾಧಿಕಾ ಪಂಡಿತ್ ಮದುವೆಯಾದ ಮೇಲೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ರಾಧಿಕಾ ಪತಿ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆದ ಬಳಿಕ ಏಕೋ ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಅಂದಹಾಗೆ ರಾಧಿಕಾ ಪಂಡಿತ್, ಸಿನಿಮಾ ರಂಗಕ್ಕೆ ಕಾಲಿಟ್ಟು ಹದಿನೈದು ವರ್ಷಗಳಾಗಿದ್ದು ಇದೇ ಖುಷಿಯಲ್ಲಿ ಐದು ವರ್ಷ ಹಿಂದೆ ಹಂಚಿಕೊಂಡಿದ್ದ ಪೋಸ್ಟ್ ಒಂದನ್ನು ಮತ್ತೆ ಹಂಚಿಕೊಂಡಿದ್ದಾರೆ.
ಸುದೀಪ್ ವಿವಾದ ಬಗೆ-ಹರಿಯೋದು ಯಾವಾಗ?
ಧಾರಾವಾಹಿ ಮೂಲಕ ನಟನೆ ಆರಂಭಿಸಿದ ರಾಧಿಕಾ ಪಂಡಿತ್, ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು ಕಲ್ಟ್ ಎಂದು ಕರೆಯಬಹುದಾದ ‘ಮೊಗ್ಗಿನ ಮನಸ್ಸು’ ಸಿನಿಮಾ ಮೂಲಕ. ಅದೇ ಸಿನಿಮಾದಲ್ಲಿ ರಾಧಿಕಾರ ಬಾಯ್ಫ್ರೆಂಡ್ ಪಾತ್ರದಲ್ಲಿ ಯಶ್ ನಟಿಸಿದ್ದನ್ನು ಮರೆಯುವಂತಿಲ್ಲ. ರಾಧಿಕಾರ ಎಂಟ್ರಿಗೆ ಕಾರಣವಾದ ‘ಮೊಗ್ಗಿನ ಮನಸ್ಸು’ ಸಿನಿಮಾ ಬಿಡುಗಡೆ ಆಗಿ ನಿನ್ನೆಗೆ ಜುಲೈ 18 ಕ್ಕೆ 15 ವರ್ಷಗಳಾಗಿವೆ. ಸತತವಾಗಿ ಸಕ್ರಿಯ ಹತ್ತು ವರ್ಷಗಳನ್ನು ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದಲ್ಲಿ ಕಳೆದಿದ್ದಾರೆ.
ದಳಪತಿ ವಿಜಯ್ ರಾಜಕೀಯ ಎಂಟ್ರಿ, ನಡುಕ ಹುಟ್ಟಿದ ಪಕ್ಷಗಳಾವ್ಯಾವು ಗೊತ್ತಾ?
”ಜುಲೈ 18, 2008 ‘ರಾಧಿಕಾ ಪಂಡಿತ್’ ಆಗಿ ನಿಮಗೆಲ್ಲ ಪರಿಚಿತಳಾದೆ, ನನಗೆ ಚಿತ್ರಪ್ರಪಂಚದ ಪರಿಚಯವಾಯ್ತು. ನಟಿಯರ ಜೀವನ ಚಿಕ್ಕದು ಎನ್ನುತ್ತಾರೆ ಆದರೆ 10 ವರ್ಷ ಎಂಬುದು ಸಣ್ಣದಲ್ಲ. 10 ವರ್ಷ ಹೋರಾಡಿ ಉಳಿದದ್ದೇನೂ ಅಲ್ಲ ಬದಲಿಗೆ ಗಟ್ಟಿಯಾಗಿ ನೆಲೆಗೊಂಡಿದ್ದು. ಈ ಹತ್ತು ವರ್ಷಗಳಲ್ಲಿ ನಿನ್ನ ಸಾಧನೆ ಏನು? ಎಂದು ನೀವು ಕೇಳಬಹುದು, ನಿಮ್ಮನ್ನು ಅಭಿಮಾನಿಗಳು ಗಳಿಸಿರುವುದೇ ನನ್ನ ಸಾಧನೆ. ಇಂದಿಗೂ ನನ್ನನ್ನು ಪ್ರೀತಿಸುವ ಅಭಿಮಾನಿಗಳನ್ನು ಪಡೆದಿದ್ದೇನೆ. ಗೌರವಿಸುವ ಚಿತ್ರೋದ್ಯಮವನ್ನು ಪಡೆದಿದ್ದೇನೆ” ಎಂದು ಐದು ವರ್ಷಗಳ ಹಿಂದಿನ ಪೋಸ್ಟ್ನಲ್ಲಿ ನಟಿ ರಾಧಿಕಾ ಪಂಡಿತ್ ಬರೆದಿದ್ದರು.
ಹಾಸ್ಟೆಲ್ ಹುಡುಗರಿಗೆ ನಟಿ ರಮ್ಯಾ ಲೀಗಲ್ ನೋಟೀಸ್, ಒಂದು ಕೋಟಿ ಪರಿಹಾರ ಬೇಡಿಕೆ
ಮುಂದುವರೆದು, ”ಈ ಪಯಣ ಸುಲಭದ್ದೇನು ಆಗಿರಲಿಲ್ಲ. ಆದರೆ ಇದನ್ನು ಸಾಧ್ಯವಾಗಿಸುವುದರಲ್ಲಿ ನನ್ನ ಸುತ್ತಲಿನವರ ಶ್ರಮ ದೊಡ್ಡದು. ಅದರಲ್ಲಿಯೂ ನನ್ನ ಕುಟುಂಬದವರ ಶ್ರಮ ದೊಡ್ಡದು. ನನ್ನ ಕುಟುಂಬದವರು ನನಗೆ ಬೆಂಬಲ ನೀಡಿದರು, ಮಾರ್ಗದರ್ಶನ ಮಾಡಿದರು. ಎಲ್ಲ ರೀತಿಯ ಋಣಾತ್ಮಕತೆಗಳಿಂದಲೂ ನನ್ನನ್ನು ಕಾಪಾಡಿದರು. ನನ್ನ ಪ್ರತಿದಿನದ ಶೂಟಿಂಗ್ನಲ್ಲೂ ನನ್ನ ತಾಯಿ ಜೊತೆಯಾಗಿರುತ್ತಿದ್ದರು, ಅಂತೆಯೇ ನನ್ನ ಸಹಾಯಕ ಶಂಕರ್ ಸಹ. ಶಂಕರ್ ನನ್ನ ಸಹಾಯಕನಾಗಿ ಕೆಲಸ ಆರಂಭಿಸಿ ಹತ್ತು ವರ್ಷಗಳಾಗಿವೆ” ಎಂದು ತಮ್ಮ ಸಿನಿಮಾ ಪಯಣಕ್ಕೆ ಸಹಾಯ ಮಾಡಿದ ಬೆಂಬಲವಾಗಿ ನಿಂತವರಿಗೆ ಧನ್ಯವಾದಗಳನ್ನು ರಾಧಿಕಾ ಪಂಡಿತ್ ಐದು ವರ್ಷಗಳ ಹಿಂದೆ ಹೇಳಿದ್ದರು.
ಸುದೀಪ್ ಮತ್ತು ಎಂ ಎನ್ ಕುಮಾರ ವಿವಾದ : ಬಗೆಹರಿಸುತ್ತಾರ ರವಿಚಂದ್ರನ್?
ತಮ್ಮ ಐದು ವರ್ಷಗಳ ಹಿಂದಿನ ಪೋಸ್ಟ್ನಲ್ಲಿ ”ಇದು ಸಿನಿಮಾ ರಂಗದ ನಿವೃತ್ತಿ ಭಾಷಣವಲ್ಲ, ‘ಪಿಕ್ಚರ್ ಇನ್ನೂ ಇದೆ’ ಎಂದಿದ್ದರು. ಆ ಮೂಲಕ ಸಿನಿಮಾಗಳಲ್ಲಿ ನಟಿಸುವುದಾಗಿ ಸೂಚನೆ ನೀಡಿದ್ದರು. ಆದರೆ ಆ ಬಳಿಕ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಲಿಲ್ಲ. 2019 ರಲ್ಲಿ ಬಿಡುಗಡೆ ಆದ ‘ಆದಿಲಕ್ಷ್ಮಿ ಪುರಾಣ’ ರಾಧಿಕಾರ ಕೊನೆಯ ಸಿನಿಮಾ ಆಗಿದೆ. ಅದಾದ ಬಳಿಕ ಇನ್ಯಾವ ಸಿನಿಮಾದಲ್ಲಿಯೂ ರಾಧಿಕಾ ನಟಿಸಿಲ್ಲ. ಹಾಗೆಂದು ಸಿನಿಮಾಗಳಿಂದ ನಂಟು ಕಳೆದುಕೊಂಡಿಲ್ಲ, ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾಗಳಿಗಾಗಿ ತೆರೆ ಮರೆಯಲ್ಲಿ ರಾಧಿಕಾ ಕೆಲಸ ಮಾಡಿದ್ದರು. ಯಶ್ರ ಮುಂದಿನ ಸಿನಿಮಾ ತಂಡದಲ್ಲಿಯೂ ರಾಧಿಕಾ ಇರುವ ಸಾಧ್ಯತೆ ದಟ್ಟವಾಗಿದೆ.ಆದ್ರೇ ಮತ್ತೇ ಸಿನಿಮಾಗೆ ಬರೋದು ಯಾವಾಗ ಅಂತಾ ಗೊತ್ತಾಗಲಿಲ್ಲಾ, ಅಥವಾ ನಟಿಸುವುದನ್ನು ಬಿಟ್ಟುಬಿಡುತ್ತಾರ? ತೆರೆಯ ಹಿಂದೆಯೇ ಉಳಿದುಬಿಡುತ್ತಾರ?.ಈ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತಾರ?