Left Ad
Radheyaa Review: ಸಮಾಜಘಾತುಕರ ವಿರುದ್ಧ ʻಅಜೇಯʼ ಸಮರ! - Chittara news
# Tags

Radheyaa Review: ಸಮಾಜಘಾತುಕರ ವಿರುದ್ಧ ʻಅಜೇಯʼ ಸಮರ!

Director: ವೇದ ಗುರು

Cast: ಅಜಯ್‌ ರಾವ್‌, ಸೋನಲ್ ಮೊಂಥೆರೋ, ಧನ್ಯಾ ಬಾಲಕೃಷ್ಣ, ಅರವಿಂದ್‌ ರಾವ್‌, ಗಿರಿ ಶಿವಣ್ಣ,

Rating: 3/5

ಸಿನಿಮಾದ ಆರಂಭದಲ್ಲೇ, ಮೂವತ್ತಕ್ಕೂ ಹೆಚ್ಚು ಭಯಾನಕ ಕೊಲೆ ಮಾಡಿದ ವ್ಯಕ್ತಿಗೆ ಮರಣದಂಡನೆ ಘೋಷಿಸಲ್ಪಟ್ಟಿದೆ! ಅಷ್ಟೇ ಅಲ್ಲ, ಅದು ಅವನದ್ದೇ ಆಸೆಯೂ ಆಗಿದೆ! ಈಗ ಗಲ್ಲಿಗೇರಬೇಕಿರುವ ರಾಧೇಯ, ಜೈಲಿನೊಳಗೂ ಅನಿರೀಕ್ಷಿತ ಟ್ವಿಸ್ಟ್‌ಗಳನ್ನು ಸೃಷ್ಟಿಸುತ್ತಾನೆ. ಅಲ್ಲಿಂದ ಸಿನಿಮಾ ತೀವ್ರ ಸಸ್‌ಪೆನ್ಸ್‌ಹಾದಿಯನ್ನು ಹಿಡಿಯುತ್ತದೆ. ಗುಮ್ಮ ನಿಧಾನಕ್ಕೆ ಪ್ರೇಕ್ಷಕರನ್ನು ಆವರಿಸುತ್ತಾನೆ.

ವೇದ ಗುರು ನಿರ್ದೇಶಿಸಿದ ತಮ್ಮ ಮೊದಲ ಚಿತ್ರ ‘ರಾಧೇಯ’ಯಲ್ಲಿ ಅಜಯ್ ರಾವ್, ಸೋನಲ್ ಮೋಂಥೆರೋ ಮತ್ತು ಧನ್ಯಾ ಬಾಲಕೃಷ್ಣ ಪ್ರಮುಖ ಪಾತ್ರಗಳಲ್ಲಿ ಅದ್ಭುತವಾಘಿ ನಟಿಸಿದ್ದಾರೆ. ನಿರ್ದೇಶಕರು ಮೊದಲ ಪ್ರಯತ್ನದಲ್ಲೇ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಕಥೆಯನ್ನು ಆಯ್ಕೆ ಮಾಡಿ, ಅದರಲ್ಲಿ ಅಜಯ್ ರಾವ್‌ರನ್ನು ತಮ್ಮ ಕಥೆಗೆ ಬೇಕಾದ ಹಾಗೆ ಬ್ಲೆಂಡ್‌ ಮಾಡಿದ್ದಾರೆ. ಏಕೆಂದರೆ ಅಜಯ್ ಮೊದಲ ಬಾರಿಗೆ ಇಂತಹ ಪಾತ್ರದಲ್ಲಿ ಕಾಣಿಸಿಕೊಂಡರೂ ತಮ್ಮ ಅಭಿನಯದಲ್ಲಿ ಗೆದ್ದಿದ್ದಾರೆ. ಸೈಕೋಪಾತ್ ಧಾಟಿಯ ರೋಲ್‌ಗೆ ಅವರು ಅವರು ರೋಲ್‌ ಮಾಡಲ್‌ ಆಗಿದ್ದಾರೆ.

ರಾಧೇಯ, ಒಂದು ಕಾಲಕ್ಕೆ ಫಾರೆನ್ಸಿಕ್ ಅಧಿಕಾರಿ. ಆದರೆ ಏಕಾಏಕಿ ಅನೇಕ ಕೊಲೆಗಳ ಆರೋಪಿ, ಮತ್ತೆಡೆ ತನ್ನ ಗರ್ಭಿಣಿ ಪತ್ನಿಯನ್ನೇ ಕೊಂದ ವ್ಯಕ್ತಿ! ಅವನ ಮೇಲೆ ಇಷ್ಟೆಲ್ಲಾ ಪ್ರಕರಣಗಳು ಹೇಗೆ ಬಂದವು? ಅವನು ನಿಜಕ್ಕೂ ಕೊಲೆಗಾರನಾ? ನಿರ್ದೇಶಕರು ಪ್ರಶ್ನೆಗಳಿಗೆ ಉತ್ತರವನ್ನು ಫ್ಲ್ಯಾಶ್‌ಬ್ಯಾಕ್ ಮತ್ತು ಮಿಸ್ಟರಿ ಮೂಲಕ ತೆರೆದಿಡುತ್ತಾ ಹೋಗುತ್ತಾರೆ. ‘ರಾಧೇಯ’ ಎನ್ನುವುದು ಮಹಾಭಾರತದ ಕರ್ಣನ ಮತ್ತೊಂದು ಹೆಸರು. ಕರ್ಣ ದಾನಶೂರ.
ಹಾಗಾದರೆ, ಕಥೆಯ ರಾಧೇಯ ಏನು ತ್ಯಾಗ ಮಾಡುತ್ತಾನೆ?
ಎಂಬುದನ್ನು ಚಿತ್ರದಲ್ಲೇ ನೋಡಬೇಕು.

ಸಿನಿಮಾದ ಟೆಕ್ನಿಕಲ್ ಆಗಿ ಗಟ್ಟಿಯಾಗಿದೆ. ವಿಯಾನ್ (ಸ್ಯಾಂಡಿ) ಅವರ ಹಿನ್ನೆಲೆ ಸಂಗೀತ, ರಮ್ಮಿ ಅವರ ಕ್ಯಾಮರಾ ಕೆಲಸ  ವಿಶೇಷವಾಗಿ ಗಮನ ಸೆಳೆಯುತ್ತದೆ. ಸಿನಿಮಾ ಕೇವಲ 2 ಗಂಟೆ 1 ನಿಮಿಷವಿದ್ದು,  ಎಡಿಟರ್‌ ತಮ್ಮ ಕೆಲದವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಸಮಾಜದ ಅನ್ಯಾಯದ ವಿರುದ್ಧ ನಾಯಕ ಏಳುವ ಕಥೆಗಳು ಹಲವು ಇದೆ, ಆದರೆ ರಾಧೇಯ ಅದರಲ್ಲಿ ಸ್ವಲ್ಪ ಬೇರೆ ರೀತಿಯ ತೀವ್ರತೆಯನ್ನು ಕೊಡುತ್ತದೆ. ವಿಶೇಷವಾಗಿ ಕ್ಲೈಮ್ಯಾಕ್ಸ್ ಟ್ವಿಸ್ಟ್ ಪ್ರೇಕ್ಷಕರನ್ನು ಸೆಳೆಯುವಂತಿದೆ. ಆದರೆ ಇದೇ ಥ್ರಿಲ್ ಅನ್ನು ಆರಂಭದಿಂದಲೇ ಕೊಟ್ಟಿದ್ದರೆ ಸಿನಿಮಾ ಇನ್ನಷ್ಟು ಆಪ್ತವಾಗುತ್ತಿತ್ತು.

ಅಜಯ್ ರಾವ್‌ಪಾತ್ರ ಅವರ ಪಾತ್ರ ಇಲ್ಲಿವರೆಗಿನ ಇವರ ಪಾತ್ರಕ್ಕಿಂತ ಸಂಪೂರ್ಣ ವಿರುದ್ಧವಾದ, ವಿಶಿಷ್ಟ ಸೈಕೋ ಶೇಡ್‌ನಿಂದ ಕೂಡಿದೆ.
ಸೋನಲ್ ಮೋಂಥೆರೋ ಪತ್ರಕರ್ತೆಯಾಗಿ ದಿಟ್ಟವಾದ ನಟನೆ ನೀಡಿದ್ದಾರೆ. ಧನ್ಯಾ ಬಾಲಕೃಷ್ಣ ಅವರು ಇನ್ನಷ್ಟು ನೈಜ ಅಭಿನಯ ನೀಡಿದ್ದರೆ ಆ ಪಾತ್ರದ ತೂಕ ಸಾಕಷ್ಟು ಹೆಚ್ಚುತ್ತಿತ್ತು. ಅರವಿಂದ್ ರಾವ್‌,  ಅಶೋಕ್ ರಾವ್ ತಮ್ಮ ತಮ್ಮ ಪಾತ್ರಗಳಲ್ಲಿ ಚೆನ್ನಾಗಿ ನಿಭಾಯಿಸಿದ್ಧಾರೆ. ಅಶೋಕ್ ರಾವ್ ಮಾತಿಗೂ ಮೊದಲು ಮೌನದಲ್ಲಿ ನೀಡುವ ಅಭಿನಯ ಸೂಪರ್‌.

Spread the love
Translate »
Right Ad