ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಲ್ಯಾಂಡ್‌ಲಾರ್ಡ್ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಭರ್ಜರಿಯಾಗಿ ನೆರವೇರಿತು. ಈ ವೇಳೆ ನಡೆದ ಒಂದು ಘಟನೆ ಎಲ್ಲರ ಗಮನ ಸೆಳೆಯಿತು.

ವೇದಿಕೆ ಮೇಲೆ ಮಾತನಾಡಲು ಬಂದ ರಚಿತಾ ರಾಮ್ ಮಾತನಾಡಲು ಶುರು ಮಾಡಿದ ತಕ್ಷಣವೇ ದರ್ಶನ್ ಅಭಿಮಾನಿಗಳು “ಡಿ ಬಾಸ್! ಡಿ ಬಾಸ್!” ಎಂದು ಕೂಗಲು ಆರಂಭಿಸಿದರು. ಅಭಿಮಾನಿಗಳ ಈ ಕಿರುಚಾಟದಿಂದ ಮಾತು ಮುಂದುವರಿಸಲು ಆಗದೇ ರಚಿತಾ ಕ್ಷಣಕಾಲ ಬೇಸರಗೊಂಡು ವೇದಿಕೆಯ ಮುಂಭಾಗಕ್ಕೆ ಬಂದು ಕುಳಿತುಕೊಂಡರು.
ಅನಂತರ, “ನೀವು ಕೂಗುವುದನ್ನು ನಿಲ್ಲಿಸಿದಾಗ ಮಾತ್ರ ನಾನು ಮಾತಾಡುತ್ತೇನೆ,” ಎಂದು ಹೇಳಿ ತಮ್ಮ ಮಾತು ಪ್ರಾರಂಭಿಸಿದರು. ರಚಿತಾ ಹೇಳಿದರು — ಅಭಿಮಾನಿಗಳ ಉತ್ಸಾಹ ಒಳ್ಳೆಯದೇ, ಆದರೆ ಎಲ್ಲ ಸಮಯದಲ್ಲೂ, ಎಲ್ಲ ಸ್ಥಳದಲ್ಲೂ ಅದು ಸೂಕ್ತವಲ್ಲ. ಕೆಲವೊಮ್ಮೆ ಅದು ಇತರರಿಗೆ ಮುಜುಗರಕ್ಕೆ ಕಾರಣವಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಈ ವೇಳೆ ನವರಂಗ್ ಚಿತ್ರಮಂದಿರದಲ್ಲಿ ದರ್ಶನ್ ಫ್ಯಾನ್ಸ್ “ಡಿ ಬಾಸ್” ಎಂದು ಕೂಗುತ್ತಿದ್ದರೆ, ದುನಿಯಾ ವಿಜಯ್ ಅಭಿಮಾನಿಗಳು “ಸಲಗ! ಸಲಗ!” ಎಂದು ಪ್ರತಿಕ್ರಿಯಿಸಿದರು. ಕ್ಷಣಕಾಲ ಸ್ಥಳವೇ ಕ್ರೀಡಾಂಗಣದಂತಾಗಿ ಉತ್ಸಾಹ ತುಂಬಿತ್ತು.
ಜಡೇಶ್ ಹಂಪಿ ನಿರ್ದೇಶನದ ಲ್ಯಾಂಡ್‌ಲಾರ್ಡ್ ಚಿತ್ರಕ್ಕೆ ಹಿರಿಯ ನಟಿ ಉಮಾಶ್ರೀ ಧ್ವನಿಯ ನೀಡಿದ್ದಾರೆ. ಸಾರಥಿ ಫಿಲಂಸ್ ಬ್ಯಾನರ್‌ನಡಿ ಹೇಮಂತ್ ಗೌಡ ಕೆ.ಎಸ್ ಮತ್ತು ಕೆ.ವಿ. ಸತ್ಯಪ್ರಕಾಶ್ ನಿರ್ಮಿಸಿರುವ ಈ ಚಿತ್ರ ಟೀಸರ್ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಿದೆ.
