Left Ad
ಸ್ವಿಜರ್ ಲ್ಯಾಂಡ್ ನಲ್ಲಿ ರಚಿತಾ ರಾಮ್ ಡ್ಯುಯೆಟ್! - Chittara news
# Tags

ಸ್ವಿಜರ್ ಲ್ಯಾಂಡ್ ನಲ್ಲಿ ರಚಿತಾ ರಾಮ್ ಡ್ಯುಯೆಟ್!

ಬೆಂಗಳೂರು: ಚುಮು ಚುಮು ಚಳಿಗೆ, ಹಿಮದ ನಡುವೆ ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ವಿಜರ್ ಲ್ಯಾಂಡ್ ನಲ್ಲಿ ರೊಮ್ಯಾಂಟಿಕ್ ಆಗಿ ಕಾಲ ಕಳೆಯುತ್ತಿದ್ದಾರೆ.ಅಷ್ಟಕ್ಕೂ ರಚಿತಾ ಈ ರೊಮ್ಯಾಂಟಿಕ್ ಕ್ಷಣ ಕಳೆದಿರುವುದು ಶೂಟಿಂಗ್ ಗಾಗಿ. ಡಿಂಪಲ್ ಕ್ವೀನ್ ಶೂಟಿಂಗ್ ನಿಮಿತ್ತ ಸ್ವಿಜರ್ ಲ್ಯಾಂಡ್ ನಲ್ಲಿದ್ದಾರೆ.

ಶ್ರೀನಗರ ಕಿಟ್ಟಿ ನಾಯಕರಾಗಿರುವ ಸಂಜು ವೆಡ್ಸ್ ಗೀತಾ 2 ಸಿನಿಮಾದ ಚಿತ್ರೀಕರಣಕ್ಕಾಗಿ ರಚಿತಾ ಸ್ವಿಜರ್ ಲ್ಯಾಂಡ್ ಗೆ ತೆರಳಿದ್ದಾರೆ. ಇಲ್ಲಿನ ಹಿಮರಾಶಿಗಳ ನಡುವೆ ಸುಂದರ ಡ್ರೆಸ್ ತೊಟ್ಟು ಹಾಡಿಗೆ ಹೆಜ್ಜೆ ಹಾಕುವ ಕ್ಷಣಗಳನ್ನು ರಚಿತಾ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತಿನ ಭಾಗದ ಚಿತ್ರೀಕರಣ ನಡೆಸಿದ ಚಿತ್ರತಂಡ ಈಗ ದೂರದ ಸ್ವಿಜರ್ ಲ್ಯಾಂಡ್ ನಲ್ಲಿ ಪ್ರಮುಖ ದೃಶ್ಯದ ಚಿತ್ರೀಕರಣ ನಡೆಸುತ್ತಿದೆ. ನಾಗಶೇಖರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
Spread the love
Translate »
Right Ad