Left Ad
ಆರ್ ಕೆ ಚಂದನ್ - ರಾಗಿಣಿ ದ್ವಿವೇದಿ ಅಭಿನಯದ "ಬಿಂಗೊ" ಚಿತ್ರದ ಚಿತ್ರೀಕರಣ ಮುಕ್ತಾಯ. . - Chittara news
# Tags

ಆರ್ ಕೆ ಚಂದನ್ – ರಾಗಿಣಿ ದ್ವಿವೇದಿ ಅಭಿನಯದ “ಬಿಂಗೊ” ಚಿತ್ರದ ಚಿತ್ರೀಕರಣ ಮುಕ್ತಾಯ. .

ಈ ಹಿಂದೆ “ಶಂಭೋ ಶಿವ ಶಂಕರ” ಚಿತ್ರ ನಿರ್ದೇಶಿಸಿದ್ದ ಶಂಕರ್ ಕೋನಮಾನಹಳ್ಳಿ ನಿರ್ದೇಶನದ, ಆರ್ ಕೆ ಚಂದನ್ ಹಾಗೂ ರಾಗಿಣಿ ದ್ವಿವೇದಿ ನಾಯಕ – ನಾಯಕಿಯಾಗಿ ನಟಿಸಿರುವ “ಬಿಂಗೊ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ನ ಈ ಚಿತ್ರಕ್ಕೆ ಬೆಂಗಳೂರಿನಲ್ಲೇ ಚಿತ್ರೀಕರಣ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ.

ಇದನ್ನೂ ಓದಿ ಕ್ಲಾಂತ ಸಿನಿಮಾಗೆ ಸಾಥ್ ಕೊಟ್ಟ ಅಜಯ್ ರಾವ್…ಜ.19ಕ್ಕೆ ದಟ್ಟ ಕಾನನದೊಳಗಿನ ಕಥನಾಕ ಬೆಳ್ಳಿತೆರೆಮೇಲೆ ಅನಾವರಣ

ಆರ್.ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.ಆರ್ ಕೆ ಚಂದನ್ , ರಾಗಿಣಿ ದ್ವಿವೇದಿ, ರಾಜೇಶ್ ನಟರಂಗ, ಪವನ್(ಮಜಾ ಟಾಕೀಸ್), ಮುರಳಿ ಪೂರ್ವಿಕ್, ಅಪೂರ್ವ, ಶ್ರವಣ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ ನಟ ಪ್ರಶಾಂತ್ ಸಿದ್ದಿ ಈಗ ಮ್ಯೂಸಿಕ್ ಡೈರೆಕ್ಟರ್,ಮತ್ಸ್ಯಗಂಧದಿಂದ ಸಿನಿಮಾ ಪ್ರಯೋಗ

ಹಿತನ್ ಹಾಸನ್ ಸಂಗೀತ ನೀಡಿರುವ ಮೂರು ಹಾಡುಗಳು ಸುಮಧುರವಾಗಿ ಮೂಡಿಬಂದಿದೆ. ಸದ್ಯದಲ್ಲೇ ಅದ್ದೂರಿ ಸಮಾರಂಭ ಆಯೋಜಿಸಿ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

ಇದನ್ನೂ ಓದಿಕೇಂದ್ರ ಸಚಿವ ಶ್ರೀಪ್ರಹ್ಲಾದ ಜೋಶಿ ಅವರಿಂದ ಬಿಡುಗಡೆಯಾಯಿತು “ದಾಸವರೇಣ್ಯ ಶ್ರೀ ವಿಜಯ ದಾಸರು” ಚಿತ್ರದ ಧ್ವನಿಸುರಳಿ

ನಟರಾಜ್ ಮುದ್ದಾಲ್ ಅವರ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಮೈನವಿರೇಳಿಸುವ ಸಾಹಸ ಸನ್ನಿವೇಶಗಳಿದ್ದು, ನರಸಿಂಹ ಸಾಹಸ ನಿರ್ದೇಶನ ಮಾಡಿದ್ದಾರೆ. ಕಂಬಿ ರಾಜು ಅವರ ನೃತ್ಯ ನಿರ್ದೇಶನ ಹಾಗೂ ವೆಂಕಿ udv ಸಂಕಲನ “ಬಿಂಗೊ” ಚಿತ್ರಕ್ಕಿದೆ.

Spread the love
Translate »
Right Ad