Sandalwood Leading OnlineMedia

ಓದಿಗಾಗಿ ಅವಕಾಶ ತಿರಸ್ಕರಿಸಿದ್ದ ಸಂಜನಾ

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಸ್ನೇಹಾ ನಿಮಗೆಲ್ಲರಿಗೂ ಗೊತ್ತೆ ಇದೆ. ಅನ್ಯಾಯವನ್ನು ಪ್ರಶ್ನಿಸುವ, ಶೋಷಣೆ ವಿರುದ್ಧ ತಿರುಗಿ ಬೀಳುವ, ಐಎಎಸ್‌ ಅಧಿಕಾರಿಯಾಗಬೇಕೆಂಬ ಕನಸು ಹೊತ್ತು ಆತ್ಮವಿಶ್ವಾಸದಿಂದಿರುವ, ಯಾವುದಕ್ಕೂ ಅಂಜದ ಧೈರ್ಯಶಾಲಿ ಹೆಣ್ಮಗಳ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟಿಯಾಗಿದ್ದಾರೆ ಸಂಜನಾ ಬುರ್ಲಿ ಊರಿನಲ್ಲೆಲ್ಲಾ ನ್ಯಾಯ ಮಾತಾಡುತ್ತಾಳೆ. ಎಲ್ಲರಿಗೂ ಇವಳನ್ನು ಕಂಡರೆ ಸ್ವಲ್ಪ ಭಯವೇ. ತನ್ನ ಜೋರು ಬಾಯಿಂದಲೇ ಪ್ರೇಕ್ಷಕರ ಮನಗೆದ್ದಿದ್ದಾಳೆ.

ಸಂಜನಾ ಬುರ್ಲಿ ಹಲವು ವರ್ಷಗಳಿಂದ ರಂಗಭೂಮಿಯಲ್ಲಿದ್ದಾರೆ. ರಂಗಭೂಮಿ ಕಲಾವಿದೆಯಾಗಿರುವ ಸಂಜನಾ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕೇವಲ ಕನ್ನಡ ಅಷ್ಟೇ ಅಲ್ಲದೇ ತಮಿಳಿನಲ್ಲಿಯೂ ನಟಿಸಿದ್ದಾರೆ. ಆದರೆ ಈ ಯಾವ ಸಿನಿಮಾಗಳೂ ಇನ್ನೂ ರಿಲೀಸ್ ಆಗಿಲ್ಲ.

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಪ್ರೋಮೊಗೆ ಒಳ್ಳೆಯ ಪ್ರತಿಕ್ರಿಯೆ ಬಂದಾಗ ಖುಷಿಯಾಗಿತ್ತಂತೆ. ಹಳ್ಳಿ ಹುಡುಗಿ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಸಲುವಾಗಿ ಸಂಜನಾ ಆಕ್ಟಿಂಗ್ ಕ್ಲಾಸ್‌ನಲ್ಲಿ ತಯಾರಿ ನಡೆಸಿದ್ದರಂತೆ. ಸ್ನೇಹಾ ಪಾತ್ರದಿಂದ ಸಂಜನಾರನ್ನು ಹಲವರು ಗುರುತಿಸುತ್ತಿದ್ದು, ಸೀರಿಯಲ್‌ನಲ್ಲಿನ ತಮ್ಮ ನಟನೆಯನ್ನು ಹಲವರು ಮೆಚ್ಚಿಕೊಂಡಿದ್ದಾರೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಉಮಾಶ್ರೀ ಅಮ್ಮ ಅವರ ಜತೆ ತೆರೆ ಹಂಚಿಕೊಳ್ಳುವುದಕ್ಕೆ ತುಂಬಾನೇ ಸಂತೋಷವಾಗುತ್ತದೆ. ಮೊದಲ ದಿನದ ಚಿತ್ರೀಕರಣ ವೇಳೆ ಅಮ್ಮ ಅವರು ನನಗೆ ಹಾಯ್ ಹೇಳಿದ ಕ್ಷಣ ನಾನು ಮರೆಯುವುದಿಲ್ಲ.  ಒಂದು ದಿನ ದೊಡ್ಡ ಸನ್ನಿವೇಶ ಚಿತ್ರೀಕರಣ ಮಾಡಬೇಕಿತ್ತು. ಆಗ ಸೆಟ್‌ನಲ್ಲಿ ಒಂದು ಸಣ್ಣ ಶಬ್ದವೂ ಇರಲಿಲ್ಲ. ಪಿನ್ ಡ್ರಾಪ್ ಸೈಲೆನ್ಸ್‌ (Pin-Drop silence) ಇತ್ತು. ನಾನು ನಟಿಸಿದ ನಂತರ ಉಮಾಶ್ರೀ ಅಮ್ಮ ಅವರು ಎದ್ದು ಚಪ್ಪಾಳೆ (clap) ತಟ್ಟಿ ಹೊಗಳಿದರು. ಆ ಕ್ಷಣ ಅವರು ಹೇಳಿದ ಮಾತು ನನಗೆ ಸ್ಫೂರ್ತಿಯಾಗಿತ್ತು,’ ಎಂದಿದ್ದಾರೆ ಸಂಜನಾ. 

ಅಸಲಿಗೆ ಸ್ನೇಹಾ ನಿಜವಾದ ಹೆಸರು ಸಂಜನಾ ಬುರ್ಲಿ. ನಿಜ ಜೀವನದಲ್ಲಿ ಎಂಜಿನಿಯರಿಂಗ್ ಓದುತ್ತಿರುವ ಸಂಜನಾಗೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ಮೊದಲ ಧಾರಾವಾಹಿಯಲ್ಲ.  ಈ ಹಿಂದೆ ‘ಲಗ್ನಪತ್ರಿಕೆ’ ಎಂಬ ಧಾರಾವಾಹಿಯಲ್ಲಿ ಸಂಜನಾ ಬುರ್ಲಿ ನಟಿಸಿದ್ದರು. ಈ ಧಾರಾವಾಹಿ ಅವರಿಗೆ ಒಳ್ಳೆಯ ಬ್ರೇಕ್ ಕೊಡುತ್ತೆ ಎಂದುಕೊಂಡಿದ್ದರು. ಆದರೆ ಅದು ಅರ್ಧಕ್ಕೆ ನಿಂತಾಗ ಬೇಸರಗೊಂಡಿದ್ದರು.

ಸಂಜನಾ ಬುರ್ಲಿ ಹಲವು ವರ್ಷಗಳಿಂದ ರಂಗಭೂಮಿಯಲ್ಲಿದ್ದಾರೆ. ರಂಗಭೂಮಿ ಕಲಾವಿದೆಯಾಗಿರುವ ಸಂಜನಾ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕೇವಲ ಕನ್ನಡ ಅಷ್ಟೇ ಅಲ್ಲದೇ ತಮಿಳಿನಲ್ಲಿಯೂ ನಟಿಸಿದ್ದಾರೆ. ಆದರೆ ಈ ಯಾವ ಸಿನಿಮಾಗಳೂ ಇನ್ನೂ ರಿಲೀಸ್ ಆಗಿಲ್ಲ.

ಸಂಜನಾ ಇಂಜಿನಿಯರಿಂಗ್ ಸ್ಟುಡೆಂಟ್. ಅವರು ತಮ್ಮ ಓದಿನ ಜೊತೆಗೆ ನಟನೆಯನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಇಂಜಿನಿಯರಿಂಗ್ ಎಂಟನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಸಂಜನಾ ಕಾಲೇಜು ಮುಗಿದ ಮೇಲೆ ಶೂಟಿಂಗ್‌ಗೆ ಬರುತ್ತಾರೆ.

ಓದುವುದು ಸಂಜನಾರ ದೊಡ್ಡ ಕನಸಾದರೆ, ನಟನೆ ಪ್ಯಾಷನ್ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಸಂಜನಾ ನಟಿಸಿದ. ‘ಸ್ನೇಹರ್ಷಿ’ ಎಂಬ ಸಿನಿಮಾದಲ್ಲಿ ಮೊದಲು ನಟಿಸಿದ್ದ ಸಂಜನಾ, ಕಳೆದ ವರ್ಷ ಸಂಜನಾ ಅವರು ‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಸಿನಿಮಾದಲ್ಲಿ ನಟಿಸಿದ್ದರು. ಈಗ ಅದರ ಟ್ರೈಲರ್ ಹಾಗೂ ಹಾಡು ರಿಲೀಸ್ ಆಗಿದೆ. ಸಿನಿಮಾ ರಿಲೀಸ್‌ಗಾಗಿ ಸಂಜನಾ ಕಾಯುತ್ತಿದ್ದಾರೆ ಮಾಡುತ್ತಿದ್ದಾರೆ. ಇನ್ನು ಅನಂತ್‌ನಾಗ್ ಅವರ ಜೊತೆಗೆ ‘ವೀಕೆಂಡ್ ಸಿನಿಮಾ’ ಎಂಬ ಚಿತ್ರದಲ್ಲೂ ಬಣ್ಣ ಹಚ್ಚಿದ್ದರು. ‘ನಾನ್ ವೆಜ್’ ಎಂಬ ಸಿನಿಮಾದಲ್ಲೂ ಸಂಜನಾ ನಟಿಸಿದ್ದು, ತಮಿಳಿನ ಚಿತ್ರವೊಂದಕ್ಕೂ ಬಣ್ಣ ಹಚ್ಚಿದ್ದಾರೆ.

ಓದಿಗಾಗಿ ಅವಕಾಶ ತಿರಸ್ಕರಿಸಿದ್ದ ಸಂಜನಾ ನನಗೆ ಖ್ಯಾತ ನಿರ್ದೇಶಕರಾದ ಆರೂರು ಜಗದೀಶ್ ಅವರು ಕರೆ ಮಾಡಿ, ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುವುದಕ್ಕೆ ಕೇಳಿದ್ದರು. ನಾನು ಆರಂಭದಲ್ಲಿ ಬೇಡ ಎಂದು ನಿರಾಕರಿಸಿದೆ. ಆದರೆ ನಿರ್ದೇಶಕ ಇದನ್ನು ಪರಿಗಣಿಸಲು ಹೇಳಿದ್ದರು. ನಾನು ಪ್ರಾಜೆಕ್ಟ್ ನಿರಾಕರಿಸುತ್ತಿದ್ದಂತೆ, ಎರಡನೇ ಅಲೆ ಎಂದು ರಾಜ್ಯದಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದ್ದರು. ಆರೂರು ಜಗದೀಶ್ ಸರ್‌ಗೆ, ಕರೆ ಮಾಡಿ ನನ್ನ ನಿರ್ಧಾರದ ಬಗ್ಗೆ ತಿಳಿಸಿದೆ.  ವಿದ್ಯಾಭ್ಯಾಸ ಮತ್ತು ಧಾರಾವಾಹಿಯನ್ನು ಸಮಾವಾಗಿ ನಿಭಾಯಿಸಬೇಕು ಎಂದು ಪ್ಲಾನ್ ಮಾಡಿದೆ,’ ಎಂದು ಸಂಜನಾ ಮಾತನಾಡಿದ್ದಾರೆ.

Share this post:

Translate »