ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅತ್ಯಂತ ಜನಪ್ರಿಯ ಹಾಗೂ ಅತಿ ಹೆಚ್ಚು ಟಿಆರ್ಪಿ ಪಡೆಯುವಂತಹ ಧಾರಾವಾಹಿ ಪುಟ್ಟಕ್ಕನ ಮಕ್ಕಳು. ಸದ್ಯ ಸೀರಿಯಲ್ನಲ್ಲಿ ಎಮೋಷನಲ್ ಎಪಿಸೋಡ್ಗಳು ಪ್ರಸಾರವಾಗುತ್ತಿವೆ. ಗಂಡನ ಮನೆ ಬಿಟ್ಟು ಅಮ್ಮನ ಮನೆ ಸೇರಿದ್ದ ಸಹನಾ, ಕೊನೆಗೆ ತಾನು ಅಮ್ಮನ ಭಾರವಾಗಿರೋದು ಬೇಡ ಎಂದು, ಜೊತೆಗೆ ಗಂಡನೇ ತನ್ನನ್ನು ತಿರಸ್ಕರಿಸಿದಳು ಎನ್ನುವ ಬೇಸರದಲ್ಲಿ ಮನೆಯನ್ನೇ ಬಿಟ್ಟು ಹೊರಟಿದ್ದಾಳೆ.
ರಾತ್ರೋ ರಾತ್ರಿ ಬ್ಯಾಗ್ ಹಿಡಿದು ಮನೆಯಿಂದ ಹೊರಟಿದ್ದ ಸಹನಾಳಿಗಾಗಿ ಎಲ್ಲೆಡೆಯೂ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಆಕೆ ಸಿಕ್ಕಿದ್ದು, ಶವವಾಗಿ, ಜಜ್ಜಿದ ಮುಖದ, ಗುರುತಿಸಲಾರದ ಸ್ಥಿತಿಯಲ್ಲಿ ಸಹನಾ ಶವ ಪತ್ತೆಯಾಗಿದೆ.
ಮಗಳ ಸಾವನ್ನು ಪುಟ್ಟಕ್ಕನಿಂದ ಸಹಿಸುವುದಕ್ಕೆ ಆಗುತ್ತಿಲ್ಲ. ಸಹನಾ ಅಂತ್ಯಸಂಸ್ಕಾರದ ವೇಳೆ ಜೀವಕ್ಕೆ ಜೀವವಾಗಿದ್ದ ಹಿರಿಮಗಳು ಸಹನಾಳನ್ನು ಕಳೆದುಕೊಂಡ ಪುಟ್ಟಕ್ಕನ ಆಕ್ರಂದನ ಮುಗಿಲು ಮುಟ್ಟಿದೆ.
ಒಂದೇ ಒಂದು ಸಲ ಓ ಅನ್ನು ಮಗಳೆ, ನಾನೇ ಪಾಪಿ, ಆ ಮಗುನ ಅತ್ತೆ ಮನೆಗೆ ಹೋಗು ಹೋಗು ಅಂತ ಹೇಳಿ ಹೇಳಿ ಈಗ ನಾನೇ ಆ ಮಗುವ ಬೆಂಕಿಗೆ ಹಾಕಿದೆ ಎಂದು ಎದೆ ಬಡಿದುಕೊಂಡು ಅಳುತ್ತಿದ್ದಾಳೆ ಪುಟ್ಟಕ್ಕ. ಅಕ್ಕತಂಗಿಯರ ಗೋಳು ಕೂಡ ನೋಡುವುದಕ್ಕೆ ಆಗುತ್ತಿಲ್ಲ. ಈ ಸಾವನ್ನು ತೀರ ಹತ್ತಿರವೇ ಆಗಿದೆಯೇನೋ ಎಂಬಂತೆ ಫೀಲ್ ಆಗುತ್ತಿದೆ ಪ್ರೇಕ್ಷಕರಿಗೆ.
ಇದರಲ್ಲಿ ಉಮಾಶ್ರೀಯವರು ನಟಿಸುತ್ತಿದ್ದಾರೆ ಅನ್ನೋದೆ ಗೊತ್ತಾಗದಂತೆ ಅದ್ಭುತ ಅಭಿನಯ ಮಾಡಿದ್ದಾರೆ. ಪುಟ್ಟಕ್ಕನಾಗಿ ಉಮಾಶ್ರೀಯವರ ಅಭಿನಯ ನೋಡಿಯೇ ವೀಕ್ಷಕರು ಕಣ್ಣೀರಿಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಇನ್ಯಾರಿಗೂ ಬಾರದಿರಲಿ ಎಂದು ಬೇಡುತ್ತಿದ್ದಾರೆ. ಸಹನಾ ಸತ್ತಿದ್ದಾಳೋ, ಬದುಕಿದ್ದಾಳೋ ಗೊತ್ತಿಲ್ಲ, ಆದರೆ ಉಮಾಶ್ರೀ ಅಂತೂ ತುಂಬಾ ನೋವು ತರುವಂತಹ ಈ ಎಪಿಸೋಡ್ ಆಗಿದೆ. ನೋಡಿದ ತಕ್ಷಣ ಕಣ್ಣೀರು ಬರುತ್ತೆ.