Left Ad
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಡಭಲ್ ಧಮಾಕ! ಇಲ್ಲಿದೆ ಸಂಪೂರ್ಣ ಮಾಹಿತಿ - Chittara news
# Tags

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಡಭಲ್ ಧಮಾಕ! ಇಲ್ಲಿದೆ ಸಂಪೂರ್ಣ ಮಾಹಿತಿ

ಟಾಲಿವುಡ್ ಡ್ಯಾಷಿಂಗ್ ಡೈರೆಕ್ಟರ್ ಸುಕುಮಾರ್ ಹಾಗೂ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತೊಮ್ಮೆ ಬಾಕ್ಸಾಫೀಸ್ ಬ್ಯಾಂಗ್ ಮಾಡೋದಿಕ್ಕೆ ಭರ್ಜರಿಯಾಗಿ ಸಜ್ಜಾಗ್ತಿದ್ದಾರೆ. ಪುಷ್ಪ ಮೂಲಕ ದಕ್ಷಿಣ ಧ್ರುವದಿಂದ ಉತ್ತರ ಧ್ರುವದವರೆಗೂ ಧಮಾಕ ಎಬ್ಬಿಸಿದ್ದ ಈ ಜೋಡಿ ಸೀಕ್ವೆಲ್ ಮೂಲಕ ಮಗದೊಮ್ಮೆ ಬೆಳ್ಳಿಭೂಮಿಯಲ್ಲಿ ಕಮಾಲ್ ಮಾಡಲು ಹೊರಟಿದೆ. ಪುಷ್ಪ-2 ಸಣ್ಣ ಟೀಸರ್ ಹಂಗಾಮ ಕ್ರಿಯೇಟ್ ಮಾಡಿದೆ. ಕಾಣೆಯಾಗಿದ್ದ ಪುಷ್ಪ ಹೊಸ ಅವತಾರದಲ್ಲಿ ಪ್ರತ್ಯಕ್ಷನಾಗುವ ಮೂಲಕ ಇನ್ಮುಂದೆ ನನ್ನಂದೇ ರೂಲ್ ಎಂಬ ಸಂದೇಶ ರವಾನಿಸಿದ್ದಾನೆ. ಪುಷ್ಪ ಸೀಕ್ವೆಲ್ ಎಂಟ್ರಿ ಯಾವಾಗ ಎನ್ನುತ್ತಿದ್ದ ಫ್ಯಾನ್ಸ್ ಚಿತ್ರತಂಡ ಧಿಡೀರ್ ಸರ್ ಪ್ರೈಸ್ ಕೊಟ್ಟಿದೆ.      

ಇದನ್ನೂ ಓದಿ:   Sapta Sagaradaache Ello – `Side A’ Review : `ಅಳು’ವ ಕಡಲೊಳು `ಒಲವ’ ಹಾಯಿ ದೋಣಿ..!

‘ಪುಷ್ಪ-2’ ಬಿಡುಗಡೆ ದಿನಾಂಕ ನಿಗದಿಯಾಗಿದೆ.. ಸ್ವಾತಂತ್ರ್ಯ ದಿನಂದು ಅಂದರೆ ಆಗಸ್ಟ್ 15ರಂದು ವಿಶ್ವಾದ್ಯಂತ ಚಿತ್ರ ತೆರೆಗೆ ಬರಲಿದೆ. ಸ್ಪೆಷಲ್ ಪೋಸ್ಟರ್ ಮೂಲಕ ಚಿತ್ರತಂಡ ರಿಲೀಸ್ ಡೇಟ್ ಘೋಷಿಸಿದ್ದು, ಫ್ಯಾನ್ಸ್ ಪುಷ್ಪ ಸೀಕ್ವೆಲ್ ನೋಡೋದಿಕ್ಕೆ ಎಕ್ಸೈಟ್ ಆಗಿದ್ದಾರೆ. ಅಲ್ಲು ಅರ್ಜುನ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಹೊರಬಿದ್ದಿದ್ದ ಪುಷ್ಪ-2 ಟೀಸರ್ ಝಲಕ್ ಹಲ್ ಚಲ್ ಎಬ್ಬಿಸಿತ್ತು. ಪುಷ್ಪ 2 ಟೀಸರ್ ಜೊತೆ ಹೊರಬಿದ್ದಿದ್ದ ಪುಷ್ಪರಾಜನ ಹೊಸ ಫೋಟೋವಂತೂ ಟಾಕ್ ಆಫ್ ದಿ ಟಾಲಿವುಡ್ ಆಗಿತ್ತು. ಸೀರೆ ಉಂಟು ಬಳೆ ತೊಟ್ಟು ಮೂಗುತಿ ಧರಿಸಿ ಕೈಯಲ್ಲಿ ಪಿಸ್ತೂಲ್ ಹಿಡಿದು ದರ್ಶನ ಕೊಟ್ಟಿದ್ದ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅವತಾರಕ್ಕೆ ಫ್ಯಾನ್ಸ್ ಉಘೇ ಉಘೇ ಎಂದಿದ್ದರು. ಶೂಟಿಂಗ್ ಹಂತದಲ್ಲಿರುವ ಪುಷ್ಪ ಸೀಕ್ವೆಲ್ ಕ್ರೇಜ್ ಗೆ ಬಾಲಿವುಡ್ ಮಂದಿ ಥಂಡಾ ಹೊಡೆದಿದ್ದಾರೆ.

 

ಇದನ್ನೂ ಓದಿChallenging star Darshan’s exclusive photos from `Kateera’ Film Press Meet

ಪುಷ್ಪ 2 ದಿ ರೂಲ್ಸ್ ಶೂಟಿಂಗ್ ಭರದಿಂದ ಸಾಗ್ತಿದೆ. ಈ ನಡುವೆಯೇ ಸೀಕ್ವೆಲ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್ ಆಗಿರುವ ಖಬರ್ ಹೊರಬಿದ್ದಿದೆ. ಹಿಂದಿ ಬೆಲ್ಟ್ ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹಕ್ಕು ಮಾರಾಟವಾಗಿದೆಯಂತೆ. ಪುಷ್ಪ ಮೊದಲ ಭಾಗ ಬಾಲಿವುಡ್ ಅಂಗಳದಲ್ಲಿ ಬಡಾ ಹಿಟ್ ಕಂಡಿತ್ತು. ಅಲ್ಲು ಆಕ್ಟಿಂಗ್ , ಸುಕುಮಾರ್ ಟೇಕಿಂಗ್ ಗೆ ಹಿಂದಿ ಮಂದಿ ಫಿದಾ ಆಗಿದ್ದರು. ಬಾಲಿವುಡ್ ಚಿತ್ರಗಳಿಗೆ ಟಕ್ಕರ್ ಕೊಟ್ಟಿದ್ದ ಪುಷ್ಪ 2ಗೀಗಾ ಬಂಗಾರದ ಬೇಡಿಕೆ ಬಂದಿದೆ. 200 ಕೋಟಿ ಮೊತ್ತಕ್ಕೆ ಹಿಂದಿ ರೈಟ್ಸ್ ಮಾರಾಟವಾಗಿದ್ದು, 75 ಕೋಟಿಗೆ ಆಡಿಯೋ ರೈಟ್ಸ್ ಸೇಲ್ ಆಗಿರುವ ಬಗ್ಗೆ ಸಿನಿ ಜಜಾರ್ ನಲ್ಲಿ ಹೊಸ ಬಜ್ ಓಡಾಡ್ತಿದೆ. ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದಲ್ಲಿ ಅದ್ಧೂರಿಯಾಗಿ ತಯಾರಾಗ್ತಿರುವ ಪುಷ್ಪ-2 ಸಿನಿಮಾಗೆ ದೇವಿಶ್ರೀ ಪ್ರಸಾದ್ ಸಂಗೀತ ಒದಗಿಸಿದ್ದಾರೆ.

Spread the love
Translate »
Right Ad