Sandalwood Leading OnlineMedia

ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್​ಮೇಲ್ ಮಾಡಿದ್ದಕ್ಕೆ ಮಹಿಳೆ ಆತ್ಮಹತ್ಯೆ​; ‘ಪುಷ್ಪ’ ಚಿತ್ರದ ನಟ ಅರೆಸ್ಟ್​

ಕಿರುಕುಳಕ್ಕೆ ಒಳಗಾದ ಮಹಿಳೆ ನವೆಂಬರ್​ 29ರಂದು ಹೈದರಾಬಾದ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಆ ಬಳಿಕ ತನಿಖೆ ನಡೆಸಿದ ಪೊಲೀಸರಿಗೆ ಜಗದೀಶ್ ಕೈವಾಡ ಇರುವುದು ತಿಳಿಯಿತು. ಪೊಲೀಸರ ಕೈಗೆ ಸಿಗದಂತೆ ತಲೆ ಮರೆಸಿಕೊಂಡು ಜಗದೀಶ್​ ಓಡಾಡುತ್ತಿದ್ದರು. ಆದರೆ ಬುಧವಾರ (ಡಿಸೆಂಬರ್ 6) ಅವರನ್ನು ಬಂಧಿಸಿ, ಕೋರ್ಟ್​ಗೆ ಹಾಜರುಪಡಿಸಲಾಗಿದೆ.

‘ಪುಷ್ಪ’ ಸಿನಿಮಾ (Pushpa Movie) ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಯಶಸ್ಸು ಕಂಡಿದ್ದರಿಂದ ಆ ಚಿತ್ರದಲ್ಲಿ ನಟಿಸಿದ ಹಲವು ಕಲಾವಿದರಿಗೆ ಒಳ್ಳೆಯ ಹೆಸರು ಬಂತು. ಅದರಲ್ಲೂ ಕೆಲವು ಪಾತ್ರಧಾರಿಗಳು ಹೆಚ್ಚು ಫೇಮಸ್​ ಆದರು. ಅಲ್ಲು ಅರ್ಜುನ್​ (Allu Arjun) ಅವರ ಸ್ನೇಹಿತನ ಪಾತ್ರ ಮಾಡಿದ್ದ ನಟ ಜಗದೀಶ್​ ಕೂಡ ಖ್ಯಾತಿ ಗಳಿಸಿದರು. ಆದರೆ ಈಗ ಅವರು ಅರೆಸ್ಟ್​ ಆಗಿದ್ದಾರೆ. ಮಹಿಳೆಗೆ ಕಿರುಕುಳು ನೀಡಿದ ಆರೋಪ ಅವರ ಮೇಲೆ ಎದುರಾಗಿದೆ. ಈ ಘಟನೆಯಿಂದ ಟಾಲಿವುಡ್​ ಮಂದಿಗೆ ಶಾಕ್​ ಆಗಿದೆ. ಜಗದೀಶ್​ ನೀಡಿದ ಕಿರುಕುಳ ತಾಳಲಾಗದೇ ಆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿರುಕುಳು ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ‘ಪುಷ್ಪ’ ಸಿನಿಮಾದ ನಟ ಜಗದೀಶ್ (Pushpa actor Jagadish) ಬಂಧನಕ್ಕೆ ಒಳಗಾಗಿದ್ದಾರೆ.

ಸಹ ನಟಿಯು ಬೇರೆ ಪುರುಷನ ಜೊತೆ ಖಾಸಗಿಯಾಗಿದ್ದ ಕ್ಷಣದ ಕೆಲವು ಫೋಟೋಗಳನ್ನು ಜಗದೀಶ್​ ಕ್ಲಿಕ್ಕಿಸಿಕೊಂಡಿದ್ದರು. ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್​ಲೋಡ್​ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಮನನೊಂದ ಮಹಿಳೆಯು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರರಂಗದಲ್ಲಿ ಜಗದೀಶ್​ ಈಗತಾನೆ ಗುರುತಿಸಿಕೊಳ್ಳುತ್ತಿದ್ದಾರೆ. ಪೋಷಕ ಪಾತ್ರಗಳಿಂದ ಅವರು ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಇಂಥ ಸಮಯದಲ್ಲಿ ಗಂಭೀರ ಆರೋಪ ಎದುರಾಗಿರುವುದು ಅವರ ವೃತ್ತಿಜೀವನಕ್ಕೆ ಖಂಡಿತ ಪೆಟ್ಟು ನೀಡಲಿದೆ.

ಜಗದೀಶ್​ ಅವರಿಂದ ಕಿರುಕುಳಕ್ಕೆ ಒಳಗಾದ ಮಹಿಳೆ ನವೆಂಬರ್​ 29ರಂದು ಹೈದರಾಬಾದ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಆ ಬಳಿಕ ತನಿಖೆ ನಡೆಸಿದ ಪೊಲೀಸರಿಗೆ ಜಗದೀಶ್ ಕೈವಾಡ ಇರುವುದು ತಿಳಿಯಿತು. ಪೊಲೀಸರ ಕೈಗೆ ಸಿಗದಂತೆ ತಲೆ ಮರೆಸಿಕೊಂಡು ಜಗದೀಶ್​ ಓಡಾಡುತ್ತಿದ್ದರು. ಆದರೆ ಬುಧವಾರ (ಡಿಸೆಂಬರ್ 6) ಅವರನ್ನು ಬಂಧಿಸಿ, ಕೋರ್ಟ್​ಗೆ ಹಾಜರುಪಡಿಸಲಾಗಿದೆ.

‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಅವರ ಸ್ನೇಹಿತನಾಗಿ ಕೇಶವ್​ ಎಂಬ ಪಾತ್ರವನ್ನು ಜಗದೀಶ್ ಮಾಡಿದ್ದಾರೆ. ‘ಪುಷ್ಪ 2’ ಸಿನಿಮಾದಲ್ಲೂ ಅವರ ಪಾತ್ರ ಇದೆ. ಸದ್ಯ ಈ ಸಿನಿಮಾಗೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈ ಸಂದರ್ಭದಲ್ಲೇ ಜಗದೀಶ್​ ಅರೆಸ್ಟ್​ ಆಗಿರುವುದರಿಂದ ಚಿತ್ರತಂಡಕ್ಕೆ ತೊಂದರೆ ಎದುರಾಗುವ ಸಾಧ್ಯತೆ ಇದೆ.

Share this post:

Related Posts

To Subscribe to our News Letter.

Translate »