Sandalwood Leading OnlineMedia

`ಪುಷ್ಪ 2’ಗೂ `ಅನಿಮಲ್’ ಚಿತ್ರದ ನಡುವೆ ಸಾಮ್ಯತೆ!

ಪುಷ್ಪ 2’ ಸಿನಿಮಾ ಬಿಡುಗಡೆಗೆ ತುಸುವೇ ದಿನ ಬಾಕಿ ಇದೆ. ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಮುಗಿದಿದೆ. ಸಿನಿಮಾದ ಪ್ರಚಾರ ಆರಂಭವಾಗಿ ಈಗಾಗಲೇ ಎರಡು ವಾರಕ್ಕೂ ಹೆಚ್ಚು ಸಮಯವಾಗಿದೆ. ಸಿನಿಮಾ ಬಿಡುಗಡೆಗೆ ವಾರ ಮಾತ್ರ ಉಳಿದಿರುವಾಗ ಸಿಬಿಎಫ್​ಸಿ ಪ್ರಮಾಣ ಪತ್ರ ದೊರೆತಿದೆ. ಸಿನಿಮಾಕ್ಕೆ ಯುಎ ಪ್ರಮಾಣ ಪತ್ರ ನೀಡಲಾಗಿದೆ. ಸಿನಿಮಾದ ಕೆಲವು ದೃಶ್ಯಗಳಿಗೆ ಮತ್ತು ಸಂಭಾಷಣೆಗಳಿಗೆ ಕತ್ತರಿ ಪ್ರಯೋಗ ಅಥವಾ ರೀಪ್ಲೇಸ್​ಮೆಂಟ್ ಮಾಡಲಾಗಿದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ  Bagheera Review: ಸಾಮಾನ್ಯನೊಬ್ಬನ ಅಸಾಮಾನ್ಯ ಕಥೆ!

‘ಪುಷ್ಪ 2’ ಕಳ್ಳಸಾಗಣೆದಾರರ ಸಿನಿಮಾ ಆಗಿರುವ ಕಾರಣ ಕೆಲವು ಸಂಭಾಷಣೆಗಳು ಸಣ್ಣ ಮಟ್ಟಿಗಿನ ಅಶ್ಲೀಲತೆಯನ್ನು ಒಳಗೊಂಡಿದ್ದವಂತೆ ಹಾಗಾಗಿ ಕೆಲವು ಸಂಭಾಷಣೆಗಳಿಗೆ ಮ್ಯೂಟ್ ಬಳಸುವಂತೆ ಸೂಚಿಸಲಾಗಿತ್ತು. ಆದರೆ ಚಿತ್ರತಂಡ ಆ ಸಂಭಾಷಣೆಗಳನ್ನು ಬದಲಾಯಿಸಲಾಗಿದ್ದು, ಕೆಲವು ದೃಶ್ಯಗಳನ್ನು ಸಹ ಬದಲಾಯಿಸಾಗಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಯಾವುದೇ ಹೆಚ್ಚಿನ ಕಟ್​ಗಳು ಇಲ್ಲದೆ ಯು/ಎ ಪ್ರಮಾಣ ಪತ್ರವನ್ನು ಸಿನಿಮಾಕ್ಕೆ ನೀಡಲಾಗಿದೆ.

‘ಪುಷ್ಪ 2’ ಸಿನಿಮಾದ ರನ್​ಟೈಮ್​ ಬಗ್ಗೆಯೂ ಚರ್ಚೆ ನಡೆದಿದೆ. ಸಿನಿಮಾದ ರನ್​ಟೈಮ್ ಬಹಳ ಉದ್ದವಾಗಿದ್ದು ಒಟ್ಟು ಸಿನಿಮಾದ ಅವಧಿ ‘ಅನಿಮಲ್’ ಸಿನಿಮಾದ ಅವಧಿಗಿಂತಲೂ ಉದ್ದ ಇದೆಯಂತೆ. ‘ಅನಿಮಲ್’ ಸಿನಿಮಾ 3 ಗಂಟೆ 21 ನಿಮಿಷಗಳಿವೆ. ಆದರೆ ‘ಪುಷ್ಪ 2’ ಸಿನಿಮಾದ ರನ್​ಟೈನ್ ಅದಕ್ಕಿಂತಲೂ ಉದ್ದ ಇರಲಿದೆಯಂತೆ. ಸಿನಿಮಾದ ಮೊದಲಾರ್ಧವೇ 1 ಗಂಟೆ 45 ನಿಮಿಷ ಇದೆ ಎನ್ನಲಾಗುತ್ತಿದೆ. ಇನ್ನು, `ಅನಿಮಲ್’ ಚಿತ್ರದ ಸಿನಿಮಾದ ಅವಧಿ ಇಷ್ಟೇ ಆಗಿತ್ತು. ಆದರೆ ಸಿನಿಮಾದಲ್ಲಿ ಸಾಕಷ್ಟು ಟ್ವಿಸ್ಟ್ ಮತ್ತು ಟರ್ನ್​ಗಳಿದ್ದು ಎಲ್ಲಿಯೂ ಸಹ ಬೋರ್ ಹೊಡೆಸದಂತೆ ಕತೆಯನ್ನು ಕಟ್ಟಲಾಗಿದೆ ಎಂದು ಸಿನಿಮಾವನ್ನು ಈಗಾಗಲೇ ನೋಡಿರುವ ಕೆಲವು ತಂತ್ರಜ್ಞರು ವೀಕ್ಷಿಸಿದ್ದಾರೆ.

ಪುಷ್ಪ 2’ ಸಿನಿಮಾ ಡಿಸೆಂಬರ್ 05 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಎರಡನೇ ಭಾಗ ಇದಾಗಿದ್ದು, ಸಿನಿಮಾದ ಮೂರನೇ ಭಾಗ ಸಹ ಬರಲಿದೆ ಎನ್ನಾಲಾಗುತ್ತಿದೆ. ಸಿನಿಮಾದ ಪ್ರಚಾರ ಕಾರ್ಯ ಚಾಲ್ತಿಯಲ್ಲಿದ್ದು ಅಲ್ಲು ಅರ್ಜುನ್ ಈಗಾಗಲೇ ಬಿಹಾರದ ಪಟ್ನಾ, ಚೆನ್ನೈ ಮತ್ತು ಕೇರಳದ ಕೊಚ್ಚಿಗಳಲ್ಲಿ ಪ್ರೀ ರಿಲೀಸ್ ಇವೆಂಟ್​ಗಳಲ್ಲಿ ಭಾಗಿಯಾಗಲಿದ್ದಾರೆ. ಬೆಂಗಳೂರಿಗೆ ಸಹ ಶೀಘ್ರದಲ್ಲೇ ಬರಲಿದ್ದು, ಆ ಬಳಿಕ ಮುಂಬೈನಲ್ಲೂ ಸಹ ಬೃಹತ್ ಶೋ ನಡೆಯಲಿದೆ.

 

 

Share this post:

Related Posts

To Subscribe to our News Letter.

Translate »