ಹೈದರಾಬಾದ್: ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿರುವ ಬಹುನಿರೀಕ್ಷಿತ ಪುಷ್ಪ 2 ಸಿನಿಮಾದ ಟೀಸರ್ ಬಗ್ಗೆ ಚಿತ್ರತಂಡ ಅಪ್ ಡೇಟ್ ನೀಡಿದೆ.ಏಪ್ರಿಲ್ 8 ರಂದು ಟೀಸರ್ ಬಿಡುಗಡೆ ಮಾಡುವುದಾಗಿ ವಿಶೇಷ ಪೋಸ್ಟರ್ ಜೊತೆಗೆ ಚಿತ್ರತಂಡ ಪ್ರಕಟಣೆ ನೀಡಿದೆ. ಇಂದು ಬೆಳಗ್ಗೆಯೇ ಸೋಷಿಯಲ್ ಮೀಡಿಯಾದಲ್ಲಿ ಪುಷ್ಪ 2 ಟೀಸರ್ ಅಪ್ ಡೇಟ್ ಬಗ್ಗೆ ಸುದ್ದಿ ಹರಿದಾಡುತ್ತಲೇ ಇತ್ತು. ಚಿತ್ರತಂಡದ ಘೋಷಣೆಗಾಗಿ ಫ್ಯಾನ್ಸ್ ಕಾದು ಕೂತಿದ್ದರು.
ಕೊನೆಗೂ ಅಭಿಮಾನಿಗಳ ನಿರೀಕ್ಷೆಗೆ ತೆರೆ ಬಿದ್ದಿದೆ. ಕಾಲಿಗೆ ಗೆಜ್ಜೆ ಕಟ್ಟಿಕೊಂಡ ಪುಷ್ಪ ಲುಕ್ ಒಂದನ್ನು ಹೊರಬಿಡಲಾಗಿದ್ದು, ಟೀಸರ್ ಬಗ್ಗೆ ಮತ್ತಷ್ಟು ಕುತೂಹಲ ಮೂಡುವಂತೆ ಚಿತ್ರತಂಡ ಮಾಡಿದೆ. ಕೆಲವು ಸಮಯದ ಹಿಂದೆ ಚಿತ್ರತಂಡ ಸೀರೆ ಉಟ್ಟಿಕೊಂಡು ಪುಷ್ಪ ಭೀಭತ್ಸ ಅವತಾರದ ಫಸ್ಟ್ ಲುಕ್ ಒಂದನ್ನು ಬಿಡುಗಡೆ ಮಾಡಿತ್ತು.
ಸುಕುಮಾರ್ ನಿರ್ದೇಶನದ ಪುಷ್ಪ 2 ಸಿನಿಮಾ ಇದೇ ವರ್ಷ ಆಗಸ್ಟ್ 15 ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದ ಬರ್ತ್ ಡೇ ಟೀಸರ್ ಬಿಟ್ಟರೆ ಇದುವರೆಗೆ ಚಿತ್ರತಂಡದಿಂದ ಯಾವುದೇ ಅಪ್ ಡೇಟ್ ಸಿಕ್ಕಿರಲಿಲ್ಲ. ಇದೀಗ ಸಿನಿಮಾದ ಟೀಸರ್ ಬಿಡುಗಡೆಗೆ ಮುಹೂರ್ತ ಕೂಡಿಬಂದಿದೆ.