ನಟಿ ಮಂಜುಳಾ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಅವರ ಪಾತ್ರಗಳೇ ಎಲ್ಲರನ್ನು ಸೆಳೆಯುತ್ತವೆ. ಅವರ ಸಿನಿಮಾಗಳನ್ನು ನೋಡುತ್ತಿದ್ದರೆ ಅವರು ನಮ್ಮಿಂದ ದೂರವಾಗಿದ್ದಾರೆ ಅಂತ ಅನ್ನಿಸುವುದೇ ಇಲ್ಲ.
ಆದರೆ ನಟಿ ಮಂಜುಳಾ ಸತ್ತು ಬರೋಬ್ಬರಿ 40 ವರ್ಷಗಳೇ ಆಗಿವೆ. ಕನ್ನಡ ಚಿತ್ರರಂಗದಲ್ಲಿ ಬಜಾರಿ ಪಾತ್ರಗಳಿಂದಾನೇ ಹೆಚ್ಚು ಜನಪ್ರಿಯವಾದ ನಟಿ ಮಂಜುಳಾ. ಅದರಲ್ಲೂ ಮುಖ್ಯವಾಗಿ ‘ಸಂಪತ್ತಿಗೆ ಸವಾಲ್ ‘ ಚಿತ್ರದಲ್ಲಿ ನಟಿ ಮುಂಜುಳಾರನ್ನು ಯಾರೂ ಮರೆಯಲು ಸಾಧ್ಯವಿಲ್ಲ.
ಡಾ ರಾಜ್ಕುಮಾರ್ ಜೋಡಿಯಾಗಿ ‘ಸಂಪತ್ತಿಗೆ ಸವಾಲ್’ ಚಿತ್ರದಲ್ಲಿ ನಟಿಸಿದ್ದರು ಮಂಜುಳಾ. ಆ ಚಿತ್ರದಲ್ಲಿ ‘ನನ್ನ ನೀನು ಗೆಲ್ಲಲಾರೆ..’ ಹಾಡನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅದರಲ್ಲಿ ಬಜಾರಿಯಾಗಿ ಅಮೋಘವಾಗಿ ನಟಿಸಿದ್ದರು ಮಂಜುಳಾ. ಆದರೆ, ಅದರ ಹಿಂದಿನ ಸತ್ಯ ಸಂಗತಿ ಅನೇಕರಿಗೆ ತಿಳಿದಿಲ್ಲ.
ಸ್ವಭಾವತಃ ನಟಿ ಮಂಜುಳಾ ಬಜಾರಿಯಲ್ಲ, ತುಂಬಾ ಸರಳ, ಸಂಕೋಚದ ಸ್ವಭಾವದ ಹೆಣ್ಣುಮಗಳು. ಆದರೆ ಆ ಚಿತ್ರದಲ್ಲಿ ನಟಿ ಮುಂಜಾಳರ ಅಭಿನಯ ಅದೆಷ್ಟು ಸಹಜವಾಗಿದೆ ಎಂದರೆ ಅವರು ಬಜಾರಿ ಗುಣದವರು ಅಲ್ಲ ಎಂದರೆ ನಂಬುವುದು ಕಷ್ಟ.
ಆದರೆ, ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಮುಂಜುಳಾ ಅವರಿಗೆ ಹಾಗೆ ನಟಿಸಲು ಸಹಾಯ ಮಾಡಿದ್ದು ಡಾ ರಾಜ್ಕುಮಾರ್ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಅಂದ್ರೆ ನಂಬಲೇಬೇಕು. ಕಾರಣ, ಮಂಜುಳಾ ಅವರು ಆ ಪಾತ್ರದ ಆಫರ್ ಬಂದಾಗ ಈ ರೀತಿ ನನಗೆ ಅಭಿನಯಿಸಲು ಕಷ್ಟ ಎಂದಿದ್ದರಂತೆ.
ಆಗ ಡಾ ರಾಜ್ ಹಾಗೂ ಪಾರ್ವತಮ್ಮ ಅವರು ‘ನೀನು ನಮ್ಮನೆಗೆ ಬಾ, ಹಾಗೇ ಸುಮ್ಮನೇ ನಮ್ಮ ಕಿರಿಯ ಮಗಳು ಪೂರ್ಣಿಮಾಳ ನಡವಳಿಕೆ ನೋಡಿ ಅದನ್ನೇ ಅನುಕರಿಸು ಸಾಕು. ನಿನಗೆ ಬಜಾರಿ ಪಾತ್ರಕ್ಕೆ ಇನ್ಯಾವ ಟ್ರೇನಿಂಗ್ ಕೂಡ ಬೇಡ’ ಎಂದಿದ್ದರಂತೆ.
ನಟಿ ಮಂಜುಳಾ ಅವರು ಡಾ ರಾಜ್ ದಂಪತಿಗಳು ಹೇಳಿದಂತೆ ಪೂರ್ಣಿಮಾರನ್ನು ನೋಡಿ ಅದನ್ನೇ ಅನುಕರಿಸಿ ಪಕ್ಕಾ ಬಜಾರಿಯಂತೆ ನಟಿಸಿ ಜನಮೆಚ್ಚುಗೆ ಗಳಿಸಿದರು. ಅದನ್ನು ತಾವು ಬದುಕಿದ್ದಾಗ ನಟಿ ಮಂಜುಳಾ ಅವರು ಹಲವು ವೇದಿಕೆಗಳಲ್ಲಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಅದೀಗ ಸೋಷಿಯಲ್ ಮೀಡಿಯಾ ಮೂಲಕ ಸಖತ್ ವೈರಲ್ ಆಗತೊಡಗಿದೆ.