ಗಣೇಶನನ್ನು ನೋಡಿದರೆ ಬಹುತೇಕರಿಗೆ ಅದೇನೋ ಪ್ರೀತಿ, ಮನಸ್ಸಲ್ಲೇನೋ ಭಾವನೆ ಮೂಡುವುದು ಸಹಜ. ಯಾಕೆಂದರೆ ಅವನ ಮುಗ್ಧ ರೂಪವೇ ಆಕರ್ಷಣೀಯ. ಯಾವುದೇ ಕಾರ್ಯಕ್ರಮವಾಗಿರಲಿ, ಶುಭ ಸಮಾರಂಭವೇ ಆಗಿರಲಿ ಅಥವಾ ಯಾವುದೇ ಪೂಜೆಯಿರಲಿ ಮೊದಲ ಪೂಜೆ ಗಣೇಶನಿಗೆ ಸಲ್ಲಿಸಲಾಗುತ್ತದೆ. ಗಣೇಶನ ಪೂಜೆಯಿಲ್ಲದೇ ಯಾವ ಶುಭ ಕಾರ್ಯವನ್ನೂ ಕೂಡ ಆರಂಭಿಸುವುದಿಲ್ಲ
ಕೊರೊನಾ ಹಾವಳಿಯಿಂದ ಕಳೆದೆರಡು ವರ್ಷ ಗಣೇಶ ಹಬ್ಬದ ಸಡಗರ ಕಳೆಗುಂದಿತ್ತು. ಆದರೆ ಈ ವರ್ಷ ಗಣೇಶ ಹಬ್ಬ ಬಹಳ ಅದ್ಧೂರಿಯಾಗಿ ಕಳೆಕಟ್ಟಲಿದೆ. ಭಕ್ತರು ಈಗಾಗಲೇ ಗಣೇಶ ಹಬ್ಬಕ್ಕೆ ತಯಾರಿ ಶುರು ಮಾಡಿಕೊಳ್ಳುತ್ತಿದ್ದು, ಬೀದಿ ಬೀದಿಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ವಿಘ್ನ ನಿವಾರಕನ ಕೃಪೆಗೆ ಪಾತ್ರರಾಗಲು ಮುಂದಾಗಿದ್ದಾರೆ. ಗಣೇಶನ ಜೊತೆ ಪುನೀತ್ ರಾಜ್‍ಕುಮಾರ್ ಇರುವಂತಹ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ವಿಶೇಷವಾಗಿ ಗಣಪನ ಜೊತೆ ಪುನೀತ್ ರಾಜ್ ಕುಮಾರ್ ಅವರನ್ನು ಪೂಜಿಸಲು ಅಭಿಮಾನಿಗಳು ಮನಸ್ಸು ಮಾಡಿದ್ದಾರೆ. ಪುನೀತ್ ಗಲ್ಲ ಹಿಡಿದ ಗಣೇಶನ ಫೋಟೊ ವೈರಲ್ ಹಾಗೆ ನೋಡಿದರೆ ಗಣೇಶನ ಜೊತೆಗೆ ಅಪ್ಪು ಇರುವ ಮೂರ್ತಿ ತಯಾರಿ ಮಾಡಿರುವುದು ಇದೇ ಮೊದಲಲ್ಲ. ನಾಲ್ಕು ತಿಂಗಳ ಹಿಂದೆ ಇಂತದ್ದೇ ಗಣೇಶ ಮೂರ್ತಿಯ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಗುಮೊಗದ ಅಪ್ಪು ಗಲ್ಲವನ್ನು ಗಣೇಶ ಹಿಡಿದುಕೊಂಡಂತೆ ಅಪ್ಪು ಭುಜದ ಮೇಲೆ ಮೂಷಿಕ ಕುಳಿತಂತೆ ಮಣ್ಣಿನಲ್ಲಿ ಮಾಡಿದ್ದ ವಿಗ್ರಹ ಅಭಿಮಾನಿಗಳ ಮನಗೆದ್ದಿತ್ತು. ಪುನೀತ್ ರಾಜ್ ಕುಮಾರ್ ಅವರು ಅಗಲಿ ಇಂದಿಗೆ 5 ತಿಂಗಳು ಕಳೆಯುತ್ತಾ ಬಂದಿದೆ. ಅಂದಿನಿಂದ ಇಂದಿನವರೆಗೆ ಅಭಿಮಾನಿಗಳು ಅವರನ್ನು ನೆನಪಿಸುತ್ತಲೇ ಇದ್ದಾರೆ. ಖ್ಯಾತ ನಟನನ್ನು ಕಳೆದುಕೊಂಡಿದ್ದಕ್ಕೆ ಕಣ್ಣೀರು ಸುರಿಸುತ್ತಿದ್ದಾರೆ. ಇದೀಗ ಅಪ್ಪುವನ್ನು ಸ್ಮರಿಸಲು ಗಣೇಶ ಜೊತೆಗೆ ಅಪ್ಪುವಿನ ಮಣ್ಣಿನ ವಿಗ್ರವನ್ನು ಮಾಡಿದ್ದಾರೆ.
ಅಪ್ಪು ಅಗಲಿಕೆಯ ನೋವಿನಿಂದ ಫ್ಯಾನ್ಸ್ ಹೊರಬಂದಿಲ್ಲ ಪುನೀತ್ ರಾಜ್‌ಕುಮಾರ್ ಅಗಲಿ ತಿಂಗಳುಗಳೇ ಕಳೆದರೂ ಈ ಕ್ಷಣಕ್ಕೂ ಅವರು ಇಲ್ಲ ಅನ್ನೋದನ್ನು ಊಹಿಸಿಕೊಳ್ಳೊಕೆ ಅಭಿಮಾನಿಗಳಿಂದ ಸಾಧ್ಯವಾಗುತ್ತಿಲ್ಲ.
ಅಪ್ಪು ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿ ಅವರ ಆರ್ಶೀವಾದ ಪಡೆಯುತ್ತಿರುವಂತೆ ಮೂರ್ತಿಯನ್ನು ಸಿದ್ಧಪಡಿಸಲಾಗಿದೆ. ‘ಎಂತಹ ಸುಂದರ ಕಲ್ಪನೆ’ ಎಂದು ಬರೆದು ರಾಘಣ್ಣ ಫೋಟೋ ಶೇರ್ ಮಾಡಿದ್ದಾರೆ.ಗಣೇಶ- ಅಪ್ಪು ಒಟ್ಟಿಗಿರೋ ಮೂರ್ತಿಗಳಿಗೆ ಡಿಮ್ಯಾಂಡ್ ಸೂಪರ್ ಹಿಟ್ ಸಿನಿಮಾಗಳ ಥೀಮ್ ಬಳಸಿ ಗಣೇಶ ಮೂರ್ತಿಗಳನ್ನು ತಯಾರು ಮಾಡೋದು ಬಹಳ ದಿನಗಳಿಂದ ನಡೆದುಕೊಂಡು ಬರುತ್ತಿದೆ
ಪುನೀತ್ ರಾಜ್‌ಕುಮಾರ್ ಹೀರೋ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್’ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಲೀಸ್ ಆಗಿ ಸಕ್ಸಸ್ ಕಂಡಿದೆ. ‘ಲಕ್ಕಿಮ್ಯಾನ್’ ಸಿನಿಮಾದಲ್ಲೂ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಆ ಸಿನಿಮಾ ಕೂಡ ರಿಲೀಸ್‌ಗೆ ರೆಡಿಯಾಗಿದೆ. ಪುನೀತ್ ರಾಜ್‌ಕುಮಾರ್ ಕನಸಿನ ಸಿನಿಮಾ ‘ಗಂಧದಗುಡಿ’ ಅಕ್ಟೋಬರ್ 28ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ.