Sandalwood Leading OnlineMedia

ಸ್ಫೂರ್ತಿಯಾದ ಅಪ್ಪು : ಮೈಸೂರಲ್ಲಿ ಹೆಚ್ಚಾಯಿತು ನೇತ್ರದಾನಿಗಳ ಸಂಖ್ಯೆ

ಪುನೀತ್ ರಾಜ್‌ಕುಮಾರ್ ನಿಧನರಾದ ಬಳಿಕ ಕೇವಲ ನಾಲ್ಕು ತಿಂಗಳಲ್ಲಿ ಇಡೀಯ ರಾಜ್ಯದಲ್ಲಿ ಕೇವಲ ನಾರಾಯಣ ನೇತ್ರಾಲಯ ಒಂದರಲ್ಲಿಯೇ 70,000 ಮಂದಿ ನೇತ್ರದಾನಕ್ಕೆ ನೊಂದಾಯಿಸಿಕೊಂಡಿದ್ದರು. ಮೂರು ದಶಕಗಳಲ್ಲಿ ಆಗದಿದ್ದಷ್ಟು ನೇತ್ರದಾನ ನೊಂದಾವಣಿ ಕೇವಲ ನಾಲ್ಕು ತಿಂಗಳಲ್ಲಿ ಆಗಿಬಿಟ್ಟಿತ್ತು! ನಾರಾಯಣ ನೇತ್ರಾಲಯ ಆಸ್ಪತ್ರೆ ಆರಂಭವಾಗಿನಿಂದಲೂ 28 ವರ್ಷದಲ್ಲಿ 68 ಸಾವಿರ ನೇತ್ರದಾನಕ್ಕೆ ನೊಂದಾವಣಿ ಮಾಡಿಸಿದ್ದರು. ಆದರೆ ಅಪ್ಪು ಅಗಲಿದ ಕೇವಲ ನಾಲ್ಕು ತಿಂಗಳಲ್ಲಿ 70 ಸಾವಿರಕ್ಕೂ ಹೆಚ್ಚು ಮಂದಿ ನೊಂದಾವಣಿ ಮಾಡಿಸಿಕೊಂಡರು.

ಪುನೀತ್ ರಾಜ್‌ಕುಮಾರ್ ದಾನ ಮಾಡಿದ ಕಣ್ಣುಗಳಿಂದ ನಾಲ್ಕು ಮಂದಿಗೆ ದೃಷ್ಟಿ ನೀಡಿದ್ದಾರೆ ನಾರಾಯಣ ನೇತ್ರಾಲಯದ ವೈದ್ಯರು. ಪುನೀತ್ ಸ್ವತಃ ನೇತ್ರದಾನ ಮಾಡಿದ್ದರಲ್ಲದೆ, ಅವರು ಕಾಲವಾದ ಮೇಲೆ ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಸಾವಿರಾರು ಮಂದಿ ನೇತ್ರದಾನ ಮಾಡಿದರು. ಪುನೀತ್ ಕಾಲವಾಗಿ ವರ್ಷವಾಗುತ್ತಾ ಬಂದಿದ್ದರೂ ನೇತ್ರದಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ ಬದಲಿಗೆ ಹೆಚ್ಚುತ್ತಲೇ ಸಾಗುತ್ತಿದೆ.

ಎಂಟು ತಿಂಗಳ ಹಿಂದೆ ನಡೆದ ಪುನೀತ್ ರಾಜ್‌ಕುಮಾರ್ ಅವರ ಕಣ್ಣು ದಾನದಿಂದ ನಾಲ್ಕು ಮಂದಿಗೆ ದೃಷ್ಟಿ ಬಂದಿತ್ತು. ಈ ಸೇವಾ ಕಾರ್ಯ ನಿಜಕ್ಕೂ ಸಾರ್ವಜನಿಕರ ಕಣ್ಣು ತೆರೆಸಿದೆ. ಇತ್ತೀಚೆಗೆ ಮೃತಪಟ್ಟವರ ಕಡೆಯವರು ಕಣ್ಣುದಾನ ಮಾಡಲು ಹೆಚ್ಚಾಗಿ ಮುಂದೆ ಬರುತ್ತಿದ್ದಾರೆ. ಹೀಗಾಗಿ ಕಳೆದ 8 ತಿಂಗಳಲ್ಲಿ ಹೆಚ್ಚುವರಿಯಾಗಿ ನೂರಾರು ಮಂದಿಗೆ ದೃಷ್ಟಿ ನೀಡಲು ಸಾಧ್ಯವಾಗಿದೆ” ಎಂದು ಕೆ.ಆರ್.ಆಸ್ಪತ್ರೆ ಕಣ್ಣಿನ ವಿಭಾಗದ ಮುಖ್ಯಸ್ಥ ಡಾ.ಕೆ.ಸತೀಶ್ ತಿಳಿಸಿದರು.

2021ರ ಅಕ್ಟೋಬರ್‌ನಲ್ಲಿ ಮೃತಪಟ್ಟ 14, ಡಿಸೆಂಬರ್‌ನಲ್ಲಿ 16, 2022ರ ಜನವರಿಯಲ್ಲಿ 12, ಬ್ರವರಿಯಲ್ಲಿ 10, ಮಾರ್ಚ್‌ನಲ್ಲಿ 16, ಏಪ್ರಿಲ್‌ನಲ್ಲಿ 6, ಮೇ ತಿಂಗಳಲ್ಲಿ 6 ಹಾಗೂ ಜೂನ್‌ನಲ್ಲಿ 8 ಮಂದಿಯ ನೇತ್ರಗಳನ್ನು ಸಂಗ್ರಹಿಸಲಾಗಿದೆ. ಅವುಗಳನ್ನು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡು ಕಣ್ಣಿನ ದೃಷ್ಟಿ ಸಂಪೂರ್ಣ ನಷ್ಟವಾಗಿದೆ ಎಂದು ಕಂಡುಬಂದ ಮೊದಲು ನೋಂದಾಯಿಸಿಕೊಂಡಿರುವ ಲಾನುಭವಿಗಳಿಗೆ ಜೋಡಣೆ ಮಾಡಲಾಗಿದೆ. ಉಳಿದವು, ಅಗತ್ಯವಿರುವ ಸರಕಾರಿ ಆಸತ್ರೆಗಳಿಗೆ ಕಳುಹಿಸಿ ಅಲ್ಲಿ ಅಗತ್ಯವಿರುವವರಿಗೆ ಅಳವಡಿಸಲಾಗುತ್ತಿದೆ.

ಜಿಲ್ಲೆಯ ಮಾಹಿತಿ ಪ್ರಕಾರ ಕಳೆದ ಏಳು ತಿಂಗಳಲ್ಲಿ 3,200 ಕ್ಕೂ ಹೆಚ್ಚು ಮಂದಿ ಕಣ್ಣಿನ ದಾನ ಮಾಡಲಿಚ್ಚಿಸಿ ಒಪ್ಪಿಗೆ ಪತ್ರ ನೀಡಿದ್ದಾರೆ. ಎಂಟು ತಿಂಗಳಲ್ಲಿ 88 ಮಂದಿ ಮೃತಪಟ್ಟವರ ನೇತ್ರಗಳನ್ನು ಅವರ ಕುಟುಂಬದವರು ದಾನ ಮಾಡಿ ನೂರಾರು ಮಂದಿಗೆ ಬೆಳಕಾಗಿದ್ದಾರೆ. ನಗರದ ಕೆ.ಆರ್.ಆಸ್ಪತ್ರೆಯಲ್ಲಿ ಮರಣ ಹೊಂದಿದವರ ಕಣ್ಣು ದಾನ ಮಾಡುವ ಪ್ರಮಾಣ ಹೆಚ್ಚಾಗಿದೆ.

 

 

Share this post:

Related Posts

To Subscribe to our News Letter.

Translate »