ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಒಂದು ದಿನ ಬಾಕಿಯಿದೆ. ಇದಕ್ಕೆ ಮೊದಲು ಅಭಿಮಾನಿಗಳಿಗಾಗಿ ಅವರ ಸೂಪರ್ ಹಿಟ್ ಸಿನಿಮಾ ಜಾಕಿ ರಿ ರಿಲೀಸ್ ಆಗಿದೆ.2010 ರಲ್ಲಿ ರಿಲೀಸ್ ಆಗಿದ್ದ ಜಾಕಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ದುನಿಯಾ ಸೂರಿ ನಿರ್ದೇಶನದ ಸಿನಿಮಾ ಇದಾಗಿದೆ. ಇದರಲ್ಲಿ ಪುನೀತ್ ಗೆ ನಾಯಕಿಯಾಗಿ ಭಾವನಾ ಮೆನನ್ ನಟಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಿನಿಮಾದ ಹಾಡುಗಳು ಎವರ್ ಗ್ರೀನ್ ಹಿಟ್ ಆಗಿತ್ತು. ಈ ಸಿನಿಮಾವನ್ನು ಪುನೀತ್ ಬರ್ತ್ ಡೇ ನಿಮಿತ್ತ ಅವರ ಅಭಿಮಾನಿಗಳಿಗಾಗಿ ರಿ ರಿಲೀಸ್ ಮಾಡಲಾಗಿದೆ.
ಪುನೀತ್ ಹೊಸ ಸಿನಿಮಾಗಳನ್ನು ನೋಡುವ ಭಾಗ್ಯವಂತೂ ಇಲ್ಲ. ಹೀಗಾಗಿ ಹಳೇ ಸಿನಿಮಾವನ್ನೇ ಹೊಸದಾಗಿ ಥಿಯೇಟರ್ ನಲ್ಲಿ ವೀಕ್ಷಿಸಲು ಪ್ರೇಕ್ಷಕರ ದಂಡೇ ಬಂದಿದೆ. ಬೆಳ್ಳಂ ಬೆಳಿಗ್ಗೆ 4.30 ಶೋಗೇ ಜನ ಸಾಗರದಂತೆ ಬಂದಿರುವುದು ಪುನೀತ್ ಗಿರುವ ಜನಪ್ರಿಯತೆಗೆ ಸಾಕ್ಷಿ.
ಥಿಯೇಟರ್ ಮುಂದೆ ಪುನೀತ್ ಬೃಹತ್ ಕಟೌಟ್ ಹಾಕಲಾಗಿದೆ. ಪುನೀತ್ ತೆರೆ ಮೇಲೆ ಬರುತ್ತಿದ್ದಂತೇ ಜನ ಸ್ಕ್ರೀನ್ ಮುಂದೆ ಬಂದು ಹುಚ್ಚೆದ್ದು ಕುಣಿದಿದ್ದಾರೆ. ಅವರು ಡ್ಯಾನ್ಸ್ ಮಾಡುವಾಗ ತಾವೂ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಪುನೀತ್ ಹುಟ್ಟಹಬ್ಬಕ್ಕೆ ಈಸಿನಿಮಾ ರಿ ರಿಲೀಸ್ ಅಭಿಮಾನಿಗಳಿಗೆ ಬೆಸ್ಟ್ ಉಡುಗೊರೆಯಾಗಿದೆ.