ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಾನ್ ವೆಜ್ ಪ್ರಿಯರು ಅನ್ನೋದು ಗೊತ್ತಿರೋ ಸಂಗತಿ. ಸಿಕ್ಕಾಪಟ್ಟೆ ಇಷ್ಟ ಪಟ್ಟು ನಾನ್ ವೆಬ್ ಫುಡ್ ಅನ್ನು ಸವಿಯುತ್ತಿದ್ದರು. ತಂದೆಯಂತೆಯೇ ಮಾಂಸಾಹಾರವನ್ನು ಸಿಕ್ಕಾಪಟ್ಟೆ ಇಷ್ಟ ಪಡುತ್ತಿದ್ದರು. ಬೆಂಗಳೂರಿನಲ್ಲಿ ನಾನ್ ವೆಜ್ ಐಟಂಗಳನ್ನು ಎಲ್ಲೆಲ್ಲಿ ಅದ್ಭುತವಾಗಿ ಮಾಡುತ್ತಾರೋ ಅಲ್ಲೆಲ್ಲಾ ಪುನೀತ್ ರಾಜ್‌ಕುಮಾರ್ ವಿಸಿಟ್ ಹಾಕಿದ ಉದಾಹರಣೆಗಳಿವೆ. ಬೆಂಗಳೂರಿನ ಕೆಲವು ನಾನ್ ವೆಜ್ ಹೋಟೆಲ್‌ಗಳಲ್ಲಿ ಪುನೀತ್ ರಾಜ್‌ಕುಮಾರ್ ನೆನಪುಗಳಿವೆ. ಬೆಂಗಳೂರಿನಲ್ಲಿರುವ ಕೆಲವು ನಾನ್ ವೆಜ್ ಹೋಟೆಲ್‌ಗಳು ಅಪ್ಪು ಫೇವರಿಟ್ ಆಗಿತ್ತು. ಅಲ್ಲಿಗೆ ರೆಗ್ಯೂಲರ್ ಆಗಿ ವಿಸಿಟ್ ಹಾಕುತ್ತಿದ್ದರು. ಇಲ್ಲ ಅವರ ಮನೆಗೆ ಪಾರ್ಸೆಲ್ ಅನ್ನು ತರಿಸಿಕೊಳ್ಳುತ್ತಿದ್ದರು. ಇಂತಹ ಹಲವು ಹೋಟೆಲ್‌ಗಳು ಅಪ್ಪು ಲಿಸ್ಟ್‌ನಲ್ಲಿ ಇದ್ದವು. ಅದರಲ್ಲೊಂದು ಬಿಇಎಲ್ ರಸ್ತೆಯಲ್ಲಿರುವ ಈ ಹೋಟೆಲ್ ಕೂಡ ಒಂದು.
ಪುನೀತ್ ರಾಜ್‌ಕುಮಾರ್ ಮನೆಗೆ ಬಿಇಎಲ್ ರಸ್ತೆಯಲ್ಲಿರುವ ಪ್ರಶಾಂತ್ ನಾಟಿ ಕಾರ್ನರ್‌ನಿಂದ ಪಾರ್ಸೆಲ್ ಹೋಗುತ್ತಿತ್ತು. ಇಲ್ಲಿನ ಕೆಲವು ಐಟಂಗಳು ಅಪ್ಪುಗೆ ಸಿಕ್ಕಾಪಟ್ಟೆ ಇಷ್ಟ. ಹೀಗಾಗಿ ಆಗಾಗ ಫೋನ್ ಮಾಡಿ ಫುಡ್ ಅನ್ನು ತರಿಸಿಕೊಳ್ಳುತ್ತಿದ್ದರು. ಹಾಗಿದ್ದರೆ ಪುನೀತ್ ರಾಜ್‌ಕುಮಾರ್ ಫೇವರಿಟ್ ಹೋಟೆಲ್‌ಗಳ ಲಿಸ್ಟ್‌ನಲ್ಲಿ ಪ್ರಶಾಂತ್ ನಾಟಿ ಕಾರ್ನರ್ ಇತ್ತು. ಅಲ್ಲಿ ರೆಡಿಯಾಗುವ ಯಾವೆಲ್ಲ ಫುಡ್ ಐಟಂಗಳನ್ನು ಇಷ್ಟ ಪಡುತ್ತಿದ್ದರು ಅನ್ನೋದನ್ನು ತಿಳಿಯಲು ಮುಂದೆ ಓದಿ. ಫುಡ್ ಅಂದರೆ ಅಪ್ಪು. ಅಪ್ಪು ಅಂದರೆ ಫುಡ್ ಅನ್ನುವಷ್ಟು ಫೇಮಸ್. ವೆಜ್ ಇರಲಿ.. ನಾನ್ ವೆಜ್. ಯಾವುದೇ ಇರಲಿ ಪುನೀತ್‌ಗೆ ಸಿಕ್ಕಾಪಟ್ಟೆ ಇಷ್ಟ ಪಟ್ಟು ಸವಿಯುತ್ತಿದ್ದರು. ಅದರಲ್ಲೂ ನಾನ್ ವೆಜ್‌ನಲ್ಲಿ ಬಿರಿಯಾನಿ ಅಂದರೆ ಬಲು ಇಷ್ಟ. ಹಾಗಂತ ಅವರ ಇಷ್ಟದ ನಾನ್ ವೆಜ್ ಐಟಂ ಅನ್ನು ಕೆಲವು ಕಡೆ ಮಾತ್ರ ಇಷ್ಟ ಪಟ್ಟು ಸವಿಯುತ್ತಿದ್ದರು. ಅದರಲ್ಲಿ ಪ್ರಶಾಂತ್ ನಾಟಿ ಕಾರ್ನರ್ ಕೂಡ ಒಂದು. ಈ ಹೋಟೆಲ್ ಜೊತೆ ಅಪ್ಪುಗೆ ವಿಶೇಷವಾದ ನಂಟು ಕೂಡ ಇತ್ತು.
ಸುಮಾರು 10 ವರ್ಷಗಳಿಂದ ಪ್ರಶಾಂತ್ ನಾಟಿ ಕಾರ್ನರ್‌ನಿಂದ ಅಪ್ಪು ಮನೆಗೆ ಪಾರ್ಸೆಲ್ ಹೋಗುತ್ತಿತ್ತು. ಅದರಲ್ಲೂ ಲಾಕ್‌ಡೌನ್ ಸಮಯದಲ್ಲಿ ಈ ಹೋಟೆಲ್‌ನಿಂದ ಹೆಚ್ಚು ಪಾರ್ಸೆಲ್ ಹೋಗಿದೆ. ಸಾಕಷ್ಟು ಬಾರಿ ಈ ಹೋಟೆಲ್‌ಗೆ ವಿಸಿಟ್ ಕೂಡ ಹಾಕಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಈ ಹೋಟೆಲ್ ಮಾಲೀಕರಿಗೆ ಅಪ್ಪು ಸಹಾಯ ಕೂಡ ಮಾಡಿದ್ದಾರೆ. ಅದು ಹೇಗೆ ಅಂತ ಈ ಹಿಂದೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದರು.
ಶಾಂತ್ ನಾಟಿ ಕಾರ್ನರ್ ಹೋಟೆಲ್ ಮಾಲೀಕ ನವೀನ್ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಪ್ಪಟ ಅಭಿಮಾನಿ. ಹೀಗಾಗಿ ಅದೆಷ್ಟೋ ಬಾರಿ ಅಪ್ಪು ಮನೆಗೆ, ಕಚೇರಿಗೆ ಇವರೇ ಅವರ ಇಷ್ಟದ ನಾನ್ ವೆಜ್ ಐಟಂಗಳನ್ನು ಕೊಟ್ಟು ಬಂದಿದ್ದಾರೆ. ಹೀಗಾಗಿ ಅವರ ಹೋಟೆಲ್‌ನಲ್ಲಿ ಏನೇನು ಇಷ್ಟ ಆಗುತ್ತಿತ್ತು ಅನ್ನೋದನ್ನು ಹೇಳಿದ್ದರು. “ಬಾಸ್‌ಗೆ ಮಟನ್ ಬಿರಿಯಾನಿ, ನಾಟಿ ಕೋಳಿ ಸಾರು ಅಂದರೆ ಇಷ್ಟ. ನಮ್ಮಲ್ಲಿ ಕೈಮಾ ಪೆಪ್ಪರ್ ಡ್ರೈ ತರಿಸಿಕೊಳ್ಳುತ್ತಿದ್ದರು. ತುಂಬಾ ಡ್ರೈ ಆಗಿರುತ್ತೆ ಅಂತ ಇಷ್ಟ ಪಡೋರು. ಅದು ಬಿಟ್ಟರೆ, ಇವತ್ತಿನ ಸ್ಪೆಷಲ್ ಕರಿಬೇವಿನ ಚಿಕನ್ ಇದೆ ಅಂತ ಹೇಳಿದ್ರೆ, ಕಳಿಸು ಎರಡು ಪ್ಲೇಟ್ ಅನ್ನೋರು. ಫುಡ್ ಅನ್ನು ತುಂಬಾನೇ ಎಂಜಾಯ್ ಮಾಡುತ್ತಿದ್ದರು. ಅದನ್ನು ಬಹಳಷ್ಟು ಮಂದಿಗೆ ಹೇಳುತ್ತಿದ್ದರು. ಅವರ ಅಕ್ಕನ ಮಕ್ಕಳು, ಪೂರ್ಣಿಮಾ ಅಕ್ಕನ ಮಕ್ಕಳು ಅವರೂ ಬಂದಿದ್ದು ಇದೆ.” ಸಂದರ್ಶನದಲ್ಲಿ ಹೇಳಿದ್ದರು. ಹಾಗಂತ ಕೇವಲ ಈ ಹೋಟೆಲ್‌ನಿಂದ ಫುಡ್ ಅನ್ನು ಅಷ್ಟೇ ತರಿಸಿಕೊಂಡಿರಲಿಲ್ಲ. ಲಾಕ್‌ಡೌನ್ ಸಮಯದಲ್ಲಿ ಪೌರ ಕಾರ್ಮಿಕರು, ಫ್ರಂಟ್‌ಲೈನ್ ವರ್ಕರ್ಸ್ ಅವರು ತುಂಬಾನೇ ಕಷ್ಟ ಪಡುತ್ತಿದ್ದರು. ಅವರಿಗೆ ಪಾರ್ಸಲ್‌ಗಳನ್ನು ಡಿಸ್ಟ್ರಿಬ್ಯೂಟ್ ಮಾಡುವುದಕ್ಕೆ ಈ ಹೋಟೆಲ್ ಮಾಲೀಕರಿಗೆ ಹೇಳಿದ್ದರು. ಅದಕ್ಕಾದ ಬಿಲ್ ಅನ್ನು ಅವರೇ ಕೊಡುತ್ತಿದ್ದರು. ಅಪ್ಪುಗೆ ತಮ್ಮ ಹುಡುಗರಿಗೆ ಕೆಲಸ ಕೊಡಬೇಕು ಅಂತಿತ್ತು. ಅದು ಲಾಕ್‌ಡೌನ್ ಸಮಯದಲ್ಲಿ ಪ್ರಶಾಂತ್ ನಾಟಿ ಕಾರ್ನರ್ ಹೋಟೆಲ್ ಮಾಲೀಕ ನವೀನ್ ಗಮನಕ್ಕೂ ಬಂದಿತ್ತು.