Left Ad
ಇದ್ದಕ್ಕಿದ್ದಂತೆ ಪುನೀತ್ ಚಿತ್ರ ನಿರ್ಮಾಪಕನ ಬಂಧನ! ಅಸಲಿಯತ್ತೇನು? - Chittara news
# Tags

ಇದ್ದಕ್ಕಿದ್ದಂತೆ ಪುನೀತ್ ಚಿತ್ರ ನಿರ್ಮಾಪಕನ ಬಂಧನ! ಅಸಲಿಯತ್ತೇನು?

 

ಬಹುನಿರೀಕ್ಷಿತ `ಚಿತ್ತಾರ ಸ್ಟಾರ್ ಅವಾರ್ಡ್ಸ್-2025’ರ ವೋಟಿಂಗ್ ಲೈನ್ ಓಪನ್ ಆಗಿದೆ, ಈ ಕೂಡಲೆ ನಿಮ್ಮ ನೆಚ್ಚಿನ ನಟ/ನಟಿ, ತಂತ್ರಜ್ಞರಿಗೆ ವೋಟ್ ಮಾಡಿ.

Send “Chittara” on WhatsApp to 73 5365 5365 or click the link 👉  http://wame.pro/chittara to cast your vote!


 

 

ಕನ್ನಡ ಚಿತ್ರ ನಿರ್ಮಾಪಕ ಎನ್‌. ಎಂ ಕುಮಾರ್ ಬಂಧನವಾಗಿದೆ. ಶನಿವಾರ ಸಂತೆಯ ದೇವ್ಸ್ ವಿಲೇಜ್ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದ ಎನ್‌. ಕುಮಾರ್ ಅವರನ್ನು ಉಪ್ಪಾರ ಪೇಟೆ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ. ಚೆಕ್ ಬೌನ್ಸ್ ಪ್ರಕರಣ ಸಂಬಂಧ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಬೆಳಗಿನ ಜಾವ 3 ಘಂಟೆ ಸುಮಾರಿಗೆ ಉಪ್ಪಾರಪೇಟೆ ಪೊಲೀಸರು ಕನ್ನಡ ಚಿತ್ರ ನಿರ್ಮಾಪಕ ಎನ್‌. ಎಂ ಕುಮಾರ್ ಅವರನ್ನು ಬಂಧಿಸಿದ್ದಾರೆ. ‘ಮಾಣಿಕ್ಯ’, ‘ಅಂಜನಿಪುತ್ರ’, ‘ಕಿರಿಕ್ ಶಂಕರ’, ‘ಮುಕುಂದ ಮುರಾರಿ’, ಸೇರಿದಂತೆ ಹಲವು ಸಿನಿಮಾಗಳನ್ನು ಎಂ ಎನ್ ಕುಮಾರ್ ನಿರ್ಮಾಣ ಮಾಡಿದ್ದಾರೆ.

ಜಗ್ಗೇಶ್ ಅವರ 1.25 ಕೋಟಿ ರೂಪಾಯಿ ಹಣದ ವಿಚಾರದ ಕೇಸ್‌ನಲ್ಲಿ ಎಂ. ಎನ್ ಕುಮಾರ್ ಅವರನ್ನು ಬಂಧಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಎಂ‌ ಎನ್ ಕುಮಾರ್ ಅರವನ್ನು ಈಗ ಮೆಡಿಕಲ್ ಟೆಸ್ಟ್‌ಗೆ ಕರೆದುಕೊಂಡು ಹೋಗಲಾಗಿದೆ ಎನ್ನುವ ಮಾಹಿತಿ ಸಿಗುತ್ತಿದೆ.

Spread the love
Translate »
Right Ad