ಈ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ ಅವರು ನೀಡಿದ ಭರವಸೆಯನ್ನು ನೆನೆದು ಮಠ ಅವರು ಬೇಸರ ವ್ಯಕ್ತ ಪಡಿಸುತ್ತಾ “ಈ ಹಿಂದೆ, ಪುನೀತ್ ರಾಜ್‌ಕುಮಾರ್ ಅವರು ನನ್ನ ಮನೆಯ ನಿರ್ಮಾಣಕ್ಕೆ ತಮ್ಮ ಕೈಲಾದ ಸಹಾಯವನ್ನು ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಅನಾದೃಷ್ಠವಶಾತ್ ದೈಹಿಕವಾಗಿ ಅಪ್ಪು ಸರ್ ನಮ್ಮೊಡನಿಲ್ಲ, ಆದರೆ ಅವರ ಭರವಸೆಯ, ಚೈತನ್ಯದಾಯಕ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿದೆ, `ಯುವರತ್ನ‘ದಲ್ಲಿ ಅವರೊಂದಿಗಿನ ತರೆಯಮೇಲಿನ ಮತ್ತು ತೆರೆಯಹಿಂದಿನ ಒಡನಾಟ ನನ್ನ ಜೀವಮಾನದ ಅತೀದೊಡ್ಡ ಸಂತಸದ ಕ್ಷಣಗಳು..” ಎಂದು ಕಣ್ಣೀರಾಗುತ್ತಾರೆ.