ಬಾಕ್ಸಾಫೀಸ್ ನಲ್ಲಿ ಪೊನ್ನಿಯನ್ ಸೆಲ್ವನ್-2 ಹವಾ…. ಖ್ಯಾತ ನಿರ್ದೇಶಕ ಮಣಿರತ್ನಂ ಸಾರಥ್ಯದಲ್ಲಿ ಮೂಡಿಬಂದ ಪೊನ್ನಿಯಿನ್ ಸೆಲ್ವನ್-2 ಸಿನಿಮಾ ವಿಶ್ವಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿದೆ. ಇದೇ ಶುಕ್ರವಾರ ತೆರೆಗೆ ಬಂದ ಈ ಚಿತ್ರಕ್ಕೆ ಪ್ರೇಕ್ಷಕ ಪ್ರಭು ಮೆಚ್ಚುಗೆಯ ಮಹಾಪೂರ ವ್ಯಕ್ತಪಡಿಸುತ್ತಿದ್ದಾರೆ. ಬಾಕ್ಸಾಫೀಸ್ ನಲ್ಲಿ ಬಂಗಾರದ ಬೆಳೆ ತೆಗೆಯುತ್ತಿರುವ ಪಿಎಸ್-2, ರಿಲೀಸ್ ಆದ ಮೂರು ದಿನದಲ್ಲಿಯೇ ನೂರು ಕೋಟಿ ಕಲೆಕ್ಷನ್ ಮಾಡಿದೆ. ಇಳಯದಳಪತಿ ವಿಜಯ್ ನಟನೆಯ ವಾರಿಸು ಸಿನಿಮಾದ ಕಲೆಕ್ಷನ್ ಬ್ರೇಕ್ ಮಾಡಿರುವ ಪಿಎಸ್-2 ಹೊಸ ದಾಖಲೆ ಬರೆಯುನ್ನು ತನ್ನದಾಗಿಸಿಕೊಳ್ಳುತ್ತಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿರುವ ಪೊನ್ನಿಯಿನ್ ಸೆಲ್ವನ್ 2ನಲ್ಲಿ ದೊಡ್ಡ ತಾರಾಬಳಗವೇ ಇದೆ. ಜಯಂರವಿ, ಚಿಯಾನ್ ವಿಕ್ರಮ್, ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ತ್ರಿಶಾ, ಶೋಭಿತಾ ಧುಲಿಪಾಲ್, ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ. ಕಲ್ಕಿ ಕೃಷ್ಣಮೂರ್ತಿ ಬರೆದಿರೋ ಕಾದಂಬರಿ ಪೊನ್ನಿಯಿನ್ ಸೆಲ್ವನ್ ಆಧಾರಿಸಿದ ಈ ಕಥೆಗೆ ಮಣಿರತ್ನಂ ಆಕ್ಷನ್ ಕಟ್ ಹೇಳಿದ್ದಾರೆ.
ಶಿವಣ್ಣ, ಉಪೇಂದ್ರ, ರಾಜ್.ಬಿ.ಶೆಟ್ಟಿ ಅಭಿನಯದ `45′ ಚಿತ್ರ ಮೈಸೂರಿನಲ್ಲಿ ಆರಂಭ
ಚೋಳ ಸಾಮ್ರಾಜ್ಯದ ಗತವೈಭವ ಸಾರುವ ಈ ಸಿನಿಮಾ ಮೇಕಿಂಗ್, ತಾರಾ ಬಳಗ, ಸಂಗೀತ, ನಟನೆ ಎಲ್ಲದರಲ್ಲಿಯೂ ನೋಡುಗರ ಗಮನಸೆಳೆಯುತ್ತಿದೆ. ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್ನಡಿ ಈ ಸಿನಿಮಾವನ್ನು ಬಲು ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ. ಕಳೆ ವರ್ಷ ಸೆಪ್ಟೆಂಬರ್ 30 ರಂದು ರಿಲೀಸ್ ಆಗಿದ್ದ ಪೊನ್ನಿಯನ್ ಸೆಲ್ವನ್ ಮೊದಲ ಭಾಗ ಬರೋಬ್ಬರಿ 500 ಕೋಟಿ ಲೂಟಿ ಮಾಡಿತ್ತು. ಈಗ ತೆರೆಗೆ ಬಂದಿರುವ ಸಿಕ್ವೇಲ್ ಕೂಡ ಅಭೂತಪೂರ್ವ ಯಶಸ್ಸು ಕಾಣುತ್ತಿದ್ದು, ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ.