ಕನ್ನಡ ಚಿತ್ರರಂಗದ ಖ್ಯಾತ ಮಿಡಿಯಾ ಅಂಡ್ ಮಾರ್ಕೆಟಿಂಗ್ ಸಂಸ್ಥೆ ಕನ್ನಡ ಪಿಚ್ಚರ್ ಅರ್ಪಿಸುವ ಸಹ್ಯಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಬಿ.ಎಸ್ ವಿಶ್ವನಾಥ್ ನಿರ್ಮಾಣದ ದೇವರಾಜ್ ಪೂಜಾರಿ ನಿರ್ದೇಶನದಲ್ಲಿ ಪೃಥ್ವಿ ಅಂಬರ್ ನಾಯಕನಾಗಿ ನಟಿಸಿರುವ ಮತ್ಸ್ಯಗಂಧ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ.
ಇದನ್ನೂ ಓದಿ ವೀಡಿಯೋ ಸಾಂಗ್ ಮೂಲಕ ತೆರೆದುಕೊಂಡ `ಸಾರಾಂಶ’ದ ನಶೆ-ನಕಾಶೆ!
ಭಾಗಿರಥಿ ಅನ್ನೋ ಸಿಂಗಲ್ ಹಾಡಿನಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಮತ್ಸ್ಯಗಂಧ ಚಿತ್ರದ ಫಸ್ಟ್ ಲುಕ್ ಟೀಸರ್ ಇಂಪ್ರೆಸೀವ್ ಆಗಿ ಖಾಕಿ ತೊಟ್ಟಿರೋ ಪೃಥ್ವಿ ಅಂಬರ್ ಖಡಕ್ ಆಗಿ ಕಾಣಿಸ್ತಿದ್ದಾರೆ. ಲೋಕಿಸೌರವ್, ಪ್ರಶಾಂತ್ ಸಿದ್ಧಿ, ನಾಗರಾಜ್ ಬೈಂದೂರ್, ಶರತ್ ಲೋಹಿತಾಶ್ವ ಮೈಮ್ ರಾಮದಾಸ್ ಸೇರಿದಂತೆ ಪ್ರತಿಭಾನ್ವಿತ ತಾರಾಬಳಗವಿರೋ ಈ ಚಿತ್ರಕ್ಕೆ ಪ್ರಶಾಂತ್ ಸಿದ್ದಿ ಸಂಗೀತ ಸಂಯೋಜನೆ ವಿಶೇಷ.
ಇದನ್ನೂ ಓದಿ ಚಿತ್ರೀಕರಣ ಮುಕ್ತಾಯ ಹಂತದಲ್ಲಿ “ದಿ ಎಂಡ್” . “ಸೂಪರ್ ಹೀರೋ” ಕಾನ್ಸೆಪ್ಟ್ ನ ಈ ಚಿತ್ರಕ್ಕೆ ಪವನ್ ಕುಮಾರ್ ನಿರ್ದೇಶನ .
ಎಲ್ಲಾ ಆಂಗಲ್ ನಿಂದ್ಲೂ ಕ್ವಾಲಿಟಿಯಾಗಿ ಕಾಣಿಸ್ತಿರೋ ಮತ್ಸ್ಯಗಂಧ ಚಿತ್ರದ ಟೀಸರ್ ಸಿನಿಮಾ ಮೇಲಿನ ನಿರೀಕ್ಷೆಯನ್ನ ಡಬಲ್ ಮಾಡಿದೆ. ಪೃಥ್ವಿ ಅಂಬರ್ ವೃತ್ತಿ ಬದುಕಿನಲ್ಲಿ ಈ ಸಿನಿಮಾ ದೊಡ್ಡ ಯಶಸ್ಸಿನ ತಿರುವಾಗೋ ಸೂಚನೆ ಕೊಡ್ತಿದೆ. ಅಂದ್ಹಾಗೆ ಮತ್ಸ್ಯಗಂಧ ಸಿನಿಮಾ ಫೆಬ್ರವರಿ 23ಕ್ಕೆ ರಾಜ್ಯದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ.