ದಿ ಕೇರಳ ಸ್ಟೋರಿ’ ಸಿನಿಮಾವು ಮೇ 5ರಂದು ದೇಶಾದ್ಯಂತ ರಿಲೀಸ್ ಆಗಲಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಆದಾಗಲೇ ದೊಡ್ಡ ಚರ್ಚೆ ಎದ್ದಿದೆ. ಈ ಸಿನಿಮಾದಲ್ಲಿ ಒಂದು ಸಮುದಾಯದ ಬಗ್ಗೆ ಮಾತನಾಡಲಾಗಿದೆ, ರಾಜಕೀಯ ಪಕ್ಷಗಳು ಭಾರೀ ಚರ್ಚೆ ಮಾಡುತ್ತಿವೆ. ಇದರ ಜೊತೆಗೆ ಕೇರಳದ ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರಗೊಳಿಸಿ ಮದುವೆ ಮಾಡಿದ್ದಾರೆ ಎನ್ನೋದನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ. ಈಗ ಈ ಸಿನಿಮಾದ ಪೀಠಿಕೆ ಬದಲಾವಣೆ ಮಾಡಲಾಗಿದ್ಯಂತೆ.ವಿವಾದದ ಬೆನ್ನಲ್ಲೇ ‘ದಿ ಕೇರಳ ಸ್ಟೋರಿ’ ಚಿತ್ರತಂಡವು ಯುಟ್ಯೂಬ್ನಲ್ಲಿ ಮತ್ತೊಮ್ಮೆ ಟ್ರೇಲರ್ನ ಬಿಡುಗಡೆ ಮಾಡಿದ್ದು, ಅದರಲ್ಲಿ ಚಿತ್ರದ ಕುರಿತ ಪೀಠಿಕೆಯನ್ನು ಕೊಂಚ ಮಾರ್ಪಡಿಸಲಾಗಿದೆ. ಹಿಂದಿ ಮಾತ್ರವಲ್ಲದೇ ತೆಲುಗು, ತಮಿಳು, ಮಲಯಾಳಂನಲ್ಲೂ trailer ರಿಲೀಸ್ ಆಗಿದೆ.
ರಶ್ಮಿಕಾಗೆ ಒಲಿದು ಬರಲಿದೆಯಾ ಆ ಒಂದು ಅದ್ಭುತ ಅವಕಾಶ?!
ದೇಶಾದ್ಯಂತ ಮೇ 5ರಂದು ಸಿನಿಮಾ ತೆರೆಕಾಣಲಿದೆ. ಸಿನಿಮಾದಲ್ಲಿ ಒಂದು ವರ್ಗದ ಬಗ್ಗೆ ನಿಕೃಷ್ಟವಾಗಿ ತೋರಿಸಲಾಗಿದೆ ಎಂಬ ಆಪಾದನೆ ಕೇಳಿಬಂದಿದ್ದರಿAದ ಚಿತ್ರ ನಿಷೇಧಿಸಬೇಕೆಂಬ ಕೂಗು ಜೋರಾಗಿದೆ. ಇದರ ಮಧ್ಯೆಯೇ ಚಿತ್ರತಂಡವು ಮತ್ತೊಮ್ಮೆ ಟ್ರೇಲರ್ನ ರಿಲೀಸ್ ಮಾಡಿ, ಅದರಲ್ಲಿ ಚಿತ್ರದ ಕುರಿತ ವಿವರಣೆಯನ್ನು ಬದಲಿಸಿದೆ. ಸಿನಿಮಾ ನಿರ್ಮಿಸಿರುವ ಪ್ರೊಡಕ್ಷನ್ ಬ್ಯಾನರ್ ‘ಸನ್ಶೈನ್ ಪಿಕ್ಚರ್ಸ್’ನ ಅಧಿಕೃತ ಯುಟ್ಯೂಬ್ ಪುಟದಲ್ಲಿ ಮತ್ತೊಮ್ಮೆ ಹಂಚಿಕೊಳ್ಳಲಾಗಿರುವ ಟ್ರೇಲರ್ನನಲ್ಲಿ ಚಿತ್ರದ ಕುರಿತು ಪೀಠಿಕೆಯಲ್ಲಿ “ಈ ಸಿನಿಮಾ ಕೇರಳದ ವಿವಿಧ ಭಾಗಗಳ ಮೂವರು ಯುವತಿಯರ ನೈಜ ಕಥೆಗಳ ಸಂಕಲನವಾಗಿದೆ. ಸಾವಿರಾರು ಮುಗ್ಧ ಮಹಿಳೆಯರನ್ನು ವ್ಯವಸ್ಥಿತವಾಗಿ ಮನಃ ಪರಿವರ್ತಿಸಿ, ಮೂಲಭೂತವಾದಿಗಳನ್ನಾಗಿ ಮಾಡಿ, ಅವರ ಜೀವನ ನಾಶಪಡಿಸಿದ ಕಥೆಯನ್ನು ಒಳಗೊಂಡಿದೆ’’ ಎಂದು ಬರೆಯಲಾಗಿದೆ.
ಗಮನಸೆಳೆಯುತ್ತಿದೆ ʻಅಥಿʼಯ ರೊಮ್ಯಾಂಟಿಕ್ ಫೋಟೋ ಶೂಟ್
ಆದರೆ, ಇದಕ್ಕೂ ಮೊದಲು ಬಿಡುಗಡೆಯಾಗಿದ್ದ ಟ್ರೇಲರ್ರ್ನಲ್ಲಿ ಚಿತ್ರದ ಕುರಿತ ವಿವರಣೆಯಲ್ಲಿ‘‘32 ಸಾವಿರ ಕೇರಳದ ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರಗೊಳಿಸಿ ಮದುವೆ ಮಾಡಿದ್ದಲ್ಲದೇ ಅವರನ್ನು ಐಸಿಸ್ ಉಗ್ರ ಸಂಘಟನೆ ಸೇರಿಸಲಾಗಿದೆ,’’ ಎಂದು ಬರೆಯಲಾಗಿತ್ತು. ಇದಕ್ಕೆ ಅಲ್ಪಸಂಖ್ಯಾತರಿ0ದ ವಿರೋಧ ವ್ಯಕ್ತವಾಗಿತ್ತು. ‘ದಿ ಕೇರಳ ಸ್ಟೋರಿ’ ಸಿನಿಮಾ ವಿವಾದಕ್ಕೆ ಗುರಿಯಾಗಿದ್ದರಿಂದ ಈಗಾಗಲೇ ಕೆಲವು ಷರತ್ತುಗಳೊಂದಿಗೆ ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿಯು ‘ಎ’ ಪ್ರಮಾಣಪತ್ರ ನೀಡಿದೆ. ಆದರೆ, ೧೦ ದೃಶ್ಯಗಳಿಗೆ ಹಾಗೂ ಕೆಲವು ಸಂಭಾಷಣೆಗಳಿಗೆ ಕತ್ತರಿ ಹಾಕಲು ಸೂಚಿಸಿದೆ.
ಹೊಸಬರ ’ಧೀರಸಾಮ್ರಾಟ್’ಚಿತ್ರಕ್ಕೆ ಧ್ರುವಸರ್ಜಾ ಸಾಥ್
‘ದಿ ಕೇರಳ ಸ್ಟೋರಿ’ ಸಿನಿಮಾ ಬಿಡುಗಡೆಗೆ ಸಂಬ0ಧಿಸಿದ0ತೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಚಾರಣೆಗೆ ನಿರಾಕರಿಸಿರುವ ಸುಪ್ರೀಂ ಕೋರ್ಟ್, ಸಂಬ0ಧಪಟ್ಟ ಹೈಕೋರ್ಟ್ ಮೊರೆ ಹೋಗುವಂತೆ ಅರ್ಜಿದಾರರಿಗೆ ತಿಳಿಸಿದೆ. ಸಿನಿಮಾ ಹೆಸರಿನ ಜತೆ ‘ಇದೊಂದು ಕಾಲ್ಪನಿಕ ಕಥೆ’ ಎಂಬ ವಿಶೇಷ ಸೂಚನೆ ಸೇರಿಸಬೇಕು ಎಂದು ಕೋರಿದ್ದ ಅರ್ಜಿಯೂ ಸೇರಿದಂತೆ ಸಂಬAಧಿಸಿದ ಎಲ ್ಲಅರ್ಜಿಗಳನ್ನು ತುರ್ತು ವಿಚಾರಣೆಗೆ ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ದ್ವಿಸದಸ್ಯ ಪೀಠವು, ಹೈಕೋರ್ಟ್ಗೆ ಹೋಗುವಂತೆ ಅರ್ಜಿದಾರರಿಗೆ ಸೂಚಿಸಿದೆ. ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿಮರೆಮಾಚಲಾಗಿರುವ ಸತ್ಯವನ್ನು ತೋರಿಸಲಾಗಿದೆ ಎಂದು ಚಿತ್ರತಂಡ ಹೇಳಿಕೊಳ್ಳುತ್ತಿದೆ. ಆದರೆ ವಾಸ್ತವದಲ್ಲಿಈ ಸಿನಿಮಾ ರಾಜಕೀಯ ಪ್ರೇರಿತ ಮತ್ತು ಮುಸ್ಲಿಂ ಸಮುದಾಯದ ತುಚ್ಛೀಕರಣವಾಗಿದೆ. ಕೇಂದ್ರ ಸರಕಾರ ಈ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ ಸಂಸದ ಬಿನೋಯ್ ವಿಶ್ವಂ ಹೇಳಿದ್ದಾರೆ.‘ದಿ ಕೇರಳ ಸ್ಟೋರಿ’ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆಯೇ ರಾಜ್ಯದಲ್ಲಿ ಭಾರಿ ಪ್ರತಿಭಟನೆಗಳು ವ್ಯಕ್ತವಾಗಬಹುದು. ನಿರ್ದಿಷ್ಟ ಸಮುದಾಯಗಳಿಂದ ಗಲಭೆಗಳು ಸೃಷ್ಟಿಯಾಗಬಹುದು. ಹಾಗಾಗಿ, ಅಲರ್ಟ್ ಆಗಿರಬೇಕು ಎಂದು ಗುಪ್ತಚರ ಇಲಾಖೆಯು ತಮಿಳುನಾಡು ಸರಕಾರಕ್ಕೆ ಎಚ್ಚರಿಕೆ ನೀಡಿದೆ ಎಂದು ಮೂಲಗಳು ಹೇಳಿವೆ.